ಕೊಪ್ಪಳ: ಇಂದಲ್ಲ ನಾಳೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಕಾನೂನು ಜಾರಿಗೆ ಬರುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Shrinivas Poojary) ಹೇಳಿಕೆ ನೀಡಿದ್ದಾರೆ. ಕೊಪ್ಪಳದ ಕುಕನೂರಿನಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಣಿಯಲ್ಲಿ ಏಕರೂಪ ನಾಗರಿಕ ಕಾನೂನು ಜಾರಿ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಇಂದಲ್ಲ ನಾಳೆ ಸಮಾನ ನಾಗರಿಕತೆ ತಂದೇ ತರುತ್ತದೆ. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಜಾರಿಗೆ ಬಂದ ನಂತರ ಜಮ್ಮು ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 (Art 370) ರದ್ದುಗೊಳಿಸಲಾಯಿತು. ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ಆಗಿರುವುದನ್ನು ಎಲ್ಲರೂ ನೋಡಿದ್ದಾರೆ. ಸದ್ಯ ಮಂದಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈವರೆಗೆ ಬಿಜೆಪಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಬಿಜೆಪಿ ಏನು ಹೇಳಿದೆ ಅದನ್ನೇ ಮಾಡಿದೆ. ಮುಂದೆ ಏಕರೂಪದ ನಾಗರಿಕ ಕಾನೂನು ಜಾರಿಗೆ ತರುತ್ತದೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಸುಖಾಸುಮ್ಮನೆ ಸರ್ಕಾರವನ್ನು ದೂರುವ ಬದಲು ನ್ಯೂನತೆಗಳಿದ್ದರೆ ಹೇಳಲಿ, ಸರಿಪಡಿಸುತ್ತೇವೆ: ಕೋಟ ಶ್ರೀನಿವಾಸ ಪೂಜಾರಿ
ದೇಶದ ಎಲ್ಲಾ ನಾಗರಿಕರಿಗೂ ಒಂದೇ ರೀತಿಯ ಕಾನೂನು ಇರಬೇಕು ಎಂಬುದು ಬಿಜೆಪಿಯ ನಿಲುವಾಗಿದೆ. ಬಹುಕಾಲದಿಂದ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಬಂದಿದೆ. ಸದ್ಯ ದೇಶದಲ್ಲಿ ಯಾವುದೇ ಕ್ರಿಮಿನಲ್ ಅಪರಾಧ ಎಸಗಿದರೆ ಯಾವುದೇ ಧರ್ಮ ನೋಡದೆ ಒಂದೇ ರೀತಿಯ ಶಿಕ್ಷೆಯನ್ನು ನೀಡುತ್ತದೆ. ಅದೇ ರೀತಿ ಸಿವಿಲ್ ಕಾನೂನು ಕೂಡ ಏಕರೂಪವಾಗಿರಬೇಕು ಎಂಬುದು ಕಾನೂನು ಜಾರಿಯ ಉದ್ದೇಶವಾಗಿದೆ. ದೇಶದ ಎಲ್ಲಾ ನಾಗರಿಕರಿಗೂ ಸಮಾನ ನಾಗರಿಕ ಕಾನೂನು ಜಾರಿ ಮಾಡುವುದು ಸರ್ಕಾರದ ಕರ್ತವ್ಯ ಎಂದು ಸಂವಿಧಾನದ ಆರ್ಟಿಕಲ್ 44ನೇ ವಿಧಿ ತಿಳಿಸುತ್ತದೆ. ಇಲ್ಲಿ ಸರ್ಕಾರ ಎಂದರೆ ಕೇಂದ್ರ ಸರ್ಕಾರವೂ ಆಗಿರಬಹುದು ಅಥವಾ ರಾಜ್ಯ ಸರ್ಕಾರವೂ ಆಗಿರಬಹುದು.
5ಎಕರೆ ಕೇಳಿದ್ದಕ್ಕೆ 10 ಎಕರೆ ಕೊಡ್ತಾರೆ ಮಿರ್ಜಾ ಇಸ್ಮಾಯಿಲ್
ಆನೇಕಲ್: ಆನೇಕಲ್ನ ಸೂರ್ಯಸಿಟಿ 4ನೇ ಹಂತದ ಅಭಿವೃದ್ಧಿ ವಿಚಾರ ಜಮೀನು ಖರೀದಿ ಸಂಬಂಧ ರೈತರು ಮತ್ತು ಅಧಿಕಾರಿಗಳ ಜೊತೆ ವಸತಿ ಸಚಿವ ವಿ.ಸೋಮಣ್ಣ ನಿನ್ನೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು, ನಮ್ಮ ಕುಟುಂಬಕ್ಕೆ ಭೂಮಿ ಕೊಟ್ಟಿದ್ದು ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು. ಮಿರ್ಜಾ ಇಸ್ಮಾಯಿಲ್ ನಮ್ಮ ಊರಿಗೆ ಬಂದಿದ್ದರು. ಆಗ ಬಹಳ ಮಳೆ ಬಂದ ಕಾರಣ ನಮ್ಮ ಮನೆಯಲ್ಲೇ ಇದ್ದರು. ಎಷ್ಟು ಎಕರೆ ಜಮೀನು ಬೇಕು ಅಂತ ನಮ್ಮ ತಂದೆಗೆ ಕೇಳಿದ್ದರು. ನಮ್ಮ ತಂದೆ 5 ಎಕರೆ ಕೇಳಿದ್ದಕ್ಕೆ 10 ಎಕರೆ ಜಮೀನು ಕೊಡ್ತಾರೆ. ಚಿಕ್ಕಪ್ಪನನ್ನು ಕರೆದೊಯ್ದು ನಮ್ಮ ತಂದೆ 5 ಎಕರೆ ಬರೆದು ಕೊಡ್ತಾರೆ. ಅವಾಗೆಲ್ಲ ಒಂದು ಸಂಸ್ಕಾರದ ಭಾವವಿತ್ತು. ಇದನ್ನು ನೆನೆಸಿಕೊಂಡರೆಲ್ಲಾ ದೊಡ್ಡವರಾಗ್ತಾರೆ. ಇವತ್ತಿಗೂ ನಾವು ಫಾರೆಸ್ಟ್ ಅಲ್ಲೇ ಇದ್ದೀವಿ. ಒಂದು ಕೇಸಿಲ್ಲ ನಮ್ಮಲ್ಲಿ, ಒಂದು ಆನೇಯೂ ಬರಲ್ಲ ನಮ್ಮಲ್ಲಿ ಎಂದರು.
ಇದನ್ನೂ ಓದಿ: ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:52 am, Wed, 25 May 22