ಉರಿಗೌಡ, ನಂಜೇಗೌಡ ಒಕ್ಕಲಿಗ ಸಮುದಾಯದವರು: ಶಾಸಕ ಸಿಟಿ ರವಿ

|

Updated on: Mar 17, 2023 | 9:35 PM

ಉರಿಗೌಡ, ನಂಜೇಗೌಡ ಒಕ್ಕಲಿಗ ಸಮುದಾಯದವರು ಎಂದು ಶಾಸಕ ಸಿಟಿ ರವಿ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ‌ ಟಿವಿ9 ಜೊತೆ ಮಾತನಾಡಿದ ಅವರು, ಊರಿಗೌಡ, ನಂಜೇಗೌಡ ಟಿಪ್ಪು ಕೊಂದವರು ಎಂದರು.

ಉರಿಗೌಡ, ನಂಜೇಗೌಡ ಒಕ್ಕಲಿಗ ಸಮುದಾಯದವರು: ಶಾಸಕ ಸಿಟಿ ರವಿ
ಶಾಸಕ ಸಿಟಿ ರವಿ
Follow us on

ಹುಬ್ಬಳ್ಳಿ: ಉರಿಗೌಡ, ನಂಜೇಗೌಡ ಒಕ್ಕಲಿಗ ಸಮುದಾಯದವರು (Vokkaliga community) ಎಂದು ಶಾಸಕ ಸಿಟಿ ರವಿ (CT Ravi) ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ‌ ಟಿವಿ9 ಜೊತೆ ಮಾತನಾಡಿದ ಅವರು, ಊರಿಗೌಡ, ನಂಜೇಗೌಡ ಟಿಪ್ಪು ಕೊಂದವರು. ಅರಸು ಸಮುದಾಯಕ್ಕೆ ನಿಷ್ಠರಾದವರು. ಇವರ ಬಗ್ಗೆ ಜಾನಪದ‌ ಲಾವಣಿ ಇವೆ. ಕಥೆಗಳಿವೆ. ಇವತ್ತು ಟಿಪ್ಪು ವೈಭವಿಕರಿಸುವ ಜನರಿಗೆ ನಾನು ಪ್ರಶ್ನೆ ಕೇಳುತ್ತೇನೆ. ಟಿಪ್ಪು ಮತ್ತು ಹೈದರಾಲಿ ಯಾರು? ಹೈದರಾಲಿ ಸಾಮಾನ್ಯ ಸೈನಿಕನಾಗಿ ಮೈಸೂರು ಅರಸರ ಬಳಿ ಕೆಲಸಕ್ಕೆ ಸೇರಿದ್ದ. ನಂಬಿಕೆ ಇಟ್ಟು ಹೈದರಾಲಿಗೆ ಕೆಲಸ ಕೊಟ್ಟಿದ್ದರು. ಆದರೆ ಅವರು ಮೈಸೂರು ಅರಸರಿಗೆ ದ್ರೋಹ ಮಾಡಿದರು. ನಿಮ್ಮ ನಿಷ್ಠೆ ಯಾರಿಗೆ, ಟಿಪ್ಪು ಮಾಡಿದ ಘನಕಾರ್ಯ ಏನು ಎಂದು ಪ್ರಶ್ನಿಸಿದರು. ಟಿಪ್ಪು ಮಾಡಿದ ಕನ್ನಡ ಆಡಳಿತ ಭಾಷೆಗೆ ಪಾರ್ಷಿ ಭಾಷೆ ಹೇರಿದ. ಪಾರ್ಷಿ ಭಾಷೆ ಎಲ್ಲಿಂದ ಬಂತು ಅದಕ್ಕೆ ಕಾರಣ ಯಾರು ಎಂದು ಕೇಳಿದರು.

ಟಿಪ್ಪು ಊರುಗಳ ಹೆಸರನ್ನು ಬದಲಿಸಿದ್ದ. ಹಾಸನವನ್ನು ಕೈಮಾಬಾದ್, ಮೈಸೂರ ಹೆಸರು ಸಹ ಬದಲಿಸಿದ್ದ. ಟಿಪ್ಪು ಸಂತಾನ ಇದರೆ ಹಾಸನ ಎಲ್ಲಿ ಇರ್ತಿತ್ತು. ಹಾಸನಾಂಬೆ ಎಲ್ಲಿ ಇರ್ತಿತ್ತು. ಐತಿಹಾಸಿಕ ಸತ್ಯ ಎಲ್ಲರೂ ತಿಳಿದುಕೊಳ್ಳಬೇಕು. ಟಿಪ್ಪು ಖಡ್ಗದಲ್ಲಿ ಏನು ಬರೆದಿದೆ, ಅದನ್ನು ವೈಭವಿಕರಿಸುವವರಿಗೆ ಗೊತ್ತಿರಬೇಕಲ್ವಾ. ಟಿಪ್ಪು‌ ಖಡ್ಗದಲ್ಲಿ ಅರೇಬಿಕ ಭಾಷೆಯಲ್ಲಿ ಕಾಫೀರರ ರಕ್ತಕ್ಕೆ ತನ್ನ ಖಡ್ಗ ಹಪಹಪಿಸುತ್ತಿದೆ ಎಂದು ಬರೆದಿದೆ ಎಂದರು.

ಇದನ್ನೂ ಓದಿ: ನಾಳೆ ಮಾದಪ್ಪ ಯಾರ್ಯಾರನ್ನ ಕರೆಸಿಕೊಳ್ಳಬೇಕೋ ಕರೆಸಿಕೊಳ್ಳುತ್ತಾನೆ: ವಿ ಸೋಮಣ್ಣ ಮಾರ್ಮಿಕ ನುಡಿ

ನಾನು ಹೇಳಿದ್ದು ಸುಳ್ಳು ಆದರೇ ನಾನು ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ 

ಇಸ್ಲಾಂ ನಂಬೋದಿಲ್ಲ ಅವರೆಲ್ಲ ಕಾಫೀರರು. ಅಂದರೆ ನಮ್ಮ ರಕ್ತ ಅವನಿಗೆ ಬೇಕು ಅಂದರೆ ಇದಕ್ಕೆ ಐತಿಹಾಸಿಕ ಬೇಕಿಲ್ಲ. ಕೊಡವರನ್ನು ಕೊಂದ ಮತಾಂಧ, ಕ್ರಿಶ್ಚಿಯನ್ ಮಾರಣ ಹೋಮ ಮಾಡಿದವನು. ಟಿಪ್ಪು ಅವರನ್ನು ಹೇಗೆ ಸಮರ್ಥನೆ ಮಾಡಿಕೊಳ್ಳಬೇಕು. ಟಿಪ್ಪು ಅವರನ್ನು ಮತಾಂಧ ಅಂತಾ ಕರೆಯದೆ ಧರ್ಮವೀರು, ಧರ್ಮಸಹಿಷ್ಣು ಅಂತಾ ಕರೆಯುವ ಸುಳ್ಳು ಕೊನೆಯಾಗಬೇಕು. ನಾನು ಹೇಳಿದ್ದು ಸುಳ್ಳು ಆದರೇ ನಾನು ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ ಎಂದು ಹೇಳಿದರು.

ಕುಮಾರಸ್ವಾಮಿ ಗೊತ್ತಿದ್ದು ಗೊತ್ತಲ್ಲದೆ ಮಾತನಾಡುತ್ತಿದ್ದಾರೆ

ನಾವು ಸಿದ್ಧಾಂತದ ಮೂಲಕ ರಾಜಕಾರಣ ಮಾಡುತ್ತೇವೆ. ಬಿರಿಯಾನಿ ತಿನ್ನಿಸಿ ರಾಜಕಾರಣ ಮಾಡಲ್ಲ. ರಾಜಕೀಯಕ್ಕೋಸ್ಕರ ಯಾವ ಹಂತಕ್ಕೆ ಇಳಿಯುತ್ತಾರೆ ಅನ್ನೋದು ಸ್ಪಷ್ಟ. ಕಾಂಗ್ರೆಸ್ ಭಯೋತ್ಪಾದಕರನ್ನ ಬೆಳೆಸತ್ತೆ ಅನ್ನೋದು ಸ್ಪಷ್ಟವಾಗುತ್ತಿದೆ. ಊರಿಗೌಡ ನಂಜೇಗೌಡ ಒಕ್ಕಲಿಗ ಸಮಾಜಕ್ಕೆ ಹೆಮ್ಮೆಯ ವಿಷಯ. ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಿನಿಮಾ ಹೇಗೆ ನೋಡುತ್ತಾರೆ ಅದು ಬೇರೆ ಪ್ರಶ್ನೆ. ಇತಿಹಾಸವನ್ನು ಸತ್ಯದ ದೃಷ್ಟಿಯಲ್ಲಿ ನೋಡಬೇಕು‌. ಕುಮಾರಸ್ವಾಮಿ ಗೊತ್ತಿದ್ದು ಗೊತ್ತಲ್ಲದೆ ಮಾತನಾಡುತ್ತಿರುವುದು ವರ್ತಮಾನಕ್ಕೆ ಬಗೆಯೋ ಅಪಚಾರ. ಇದು‌ ಭವಿಷ್ಯಕ್ಕೆ ಗಂಡಾಂತರ ತಂದುಕೊಟ್ಟಂತೆ. ಯಾರೂ ಪರ್ಮನೆಂಟ್ ಆಗಿ ಇರೋಕೆ ಆಗಲ್ಲ. ದೇಶ ಇರತ್ತೆ ರಾಜ್ಯ ಇರತ್ತೆ ಎಂದರು.

ಇದನ್ನೂ ಓದಿ: ಟಿಪ್ಪು ದೇಶ ವಿರೋಧಿ, ಹಿಂದೂಗಳನ್ನು ಕೊಲ್ಲಲು ಟಿಪ್ಪು ಡ್ರಾಪ್ ಮಾಡಿಕೊಂಡಿದ್ದ: ಸಚಿವೆ ಶೋಭಾ ಕರಂದ್ಲಾಜೆ

ನೀತಿ ನೋಡಿ ವೋಟ್ ಹಾಕಿ, ಜಾತಿ ನೋಡಿ ಅಲ್ಲ

ಭಯೋತ್ಪಾದಕರ ಸಾವಿಗೆ ದಾರಿತೋರಿಸುವುದು ಬಿಜೆಪಿ ಪಾರ್ಟಿ.  ಅದಕ್ಕೆ ನಮಗೆ ಆಶೀರ್ವಾದ ಮಾಡಿ. ನಮ್ಮದು ಕಟ್ಟರ್ ದೇಶ ಭಕ್ತರ ಪಾರ್ಟಿ. ಜಿಹಾದಿಗಳಿಂದ ದೇಶ ಉಳಿಸುವುದಕ್ಕೆ ಸಾಧ್ಯ ಇಲ್ಲ. ದೇಶ ಉಳಿಯಬೇಕಂದರೆ ಕಟ್ಟರ್ ರಾಷ್ಟ್ರ ಭಕ್ತರು ಬೇಕು. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಯಾವತ್ತು ಬಿಜೆಪಿ ಮಾಡಿಲ್ಲ. ನೀತಿ ನೋಡಿ ವೋಟ್ ಹಾಕಿ. ಜಾತಿ ನೋಡಿ ವೋಟ್ ಹಾಕೋದು‌ ನ್ಯಾಯನಾ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:35 pm, Fri, 17 March 23