AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಪ್ಪು ದೇಶ ವಿರೋಧಿ, ಹಿಂದೂಗಳನ್ನು ಕೊಲ್ಲಲು ಟಿಪ್ಪು ಡ್ರಾಪ್ ಮಾಡಿಕೊಂಡಿದ್ದ: ಸಚಿವೆ ಶೋಭಾ ಕರಂದ್ಲಾಜೆ

ಟಿಪ್ಪು ದೇಶ ವಿರೋಧಿ. ಹಿಂದೂ ಹಾಗೂ ಕನ್ನಡ ವಿರೋಧಿಯಾಗಿದ್ದ. ತನ್ನ ವಿರೋಧಿಗಳನ್ನು ಕೊಲ್ಲಲು ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದಲ್ಲಿ ಟಿಪ್ಪು ಡ್ರಾಪ್ ಮಾಡಿಕೊಂಡಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Mar 17, 2023 | 7:29 PM

Share

ಬೆಂಗಳೂರು: ಟಿಪ್ಪು (Tipu) ದೇಶ ವಿರೋಧಿ. ಹಿಂದೂ ಹಾಗೂ ಕನ್ನಡ ವಿರೋಧಿಯಾಗಿದ್ದ. ತನ್ನ ವಿರೋಧಿಗಳನ್ನು ಕೊಲ್ಲಲು ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದಲ್ಲಿ ಟಿಪ್ಪು ಡ್ರಾಪ್ ಮಾಡಿಕೊಂಡಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತಿಹಾಸ ತೆರೆದು ನೋಡಿದರೆ ಉರಿಗೌಡ, ದೊಡ್ಡ ನಂಜೇಗೌಡ ಹೆಸರಿದೆ. ಮೈಸೂರು ಮಹಾರಾಜರ ಅನುಯಾಯಿಗಳಾಗಿ ಕೆಲಸ ಮಾಡಿದ್ದಾರೆ. ಅವರವರ ನೇರಕ್ಕೆ ಕೆಲವರು ಪುಸ್ತಕ ಬರೆಸಿಕೊಂಡಿದ್ದಾರೆ. ಟಿಪ್ಪುನನ್ನು ಕೊಲ್ಲುವ ಮೂಲಕ ಇಬ್ಬರೂ ಇತಿಹಾಸ ಪುಟ ಸೇರಿದ್ದಾರೆ. ರಸ್ತೆ ಹಾಗೂ ಕಟ್ಟಡಗಳಿಗೆ ಗುಲಾಮಿತನದ ಹೆಸರಿಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಉರಿಗೌಡ, ನಂಜೇಗೌಡ ದ್ವಾರ ರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಹೈವೇ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾತ್ರ ಹೆಸರು ಸೂಚಿಸಲಾಗಿದೆ. ಬಾಲಗಂಗಾಧರ ನಾಥ ಸ್ವಾಮೀಜಿ ಹೆಸರು ಇದೆ. ಮುಂದೆಯೂ ಇರಲಿದೆ ಎಂದು ಹೇಳಿದರು.

ನಿನ್ನೆ ಬಂಟ್ವಾಳದಲ್ಲಿ ಎಸ್​ಡಿಪಿಐ ರಾಷ್ಟ್ರೀಯ ಅಧ್ಯಕ್ಷ ತುಂಬೆ ಹಿಂದೆ ಕಾಂಗ್ರೆಸ್ ಜೊತೆ ಹೇಗೆ ಚುನಾವಣೆ ಹೊಂದಾಣಿಕೆ ಇತ್ತು ಅಂತ ಮಾತನಾಡಿದ್ದಾರೆ. ನಾವು ಬಹಳ ವರ್ಷದಿಂದ ಕಾಂಗ್ರೆಸ್​ನ ಇನ್ನೊಂದು ಮುಖ ಎಸ್​ಡಿಪಿಐ, ಪಿಎಫ್​ಐ ಅಂತ ಮಾತಾಡುತ್ತಾ ಬಂದಿದ್ದೆವು. ಅನೇಕ ಯುವಕರ ಹತ್ಯೆ ಆಯಿತು. ಅದರ ತನಿಖೆ ಮಾಡದ ಸಿದ್ದರಾಮಯ್ಯ ಅವರ ಓಲೈಕೆ ಮಾಡುವ ಕೆಲಸ ಮಾಡಿದ್ದರು. ಟಿಪ್ಪು ಜಯಂತಿ ಮಾಡುವ ಮೂಲಕ ಓಲೈಕೆ ಮಾಡಿದರು.

ಇದನ್ನೂ ಓದಿ: Congress: ಯುಗಾದಿ ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 125 ಅಭ್ಯರ್ಥಿಗಳ ಹೆಸರು ಅಂತಿಮ

ಎಸ್​ಡಿಪಿಐ ಮುಖವಾಣಿ ಪಿಎಫ್​ಐ

ಟಿಪ್ಪು ಜಯಂತಿ ಹಿಂದೂ, ಮುಸ್ಲಿಂ ನಡುವೆ ಪರಸ್ಪರ ಜಗಳ ಮಾಡಿಸುವ ಕೆಲಸ ಆಗಿತ್ತು. ಕುಟ್ಟಪ್ಪ ಹತ್ಯೆ ಗಲಾಟೆ ವಿಚಾರವಾಗಿ ಇಂದಿಗೂ ನಮ್ಮ ಕಾರ್ಯಕರ್ತರು ಕೇಸ್ ಎದುರಿಸುತ್ತಿದ್ದಾರೆ. ಹಿಂದೆ ಅನೇಕ ಘಟನೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್​ಐ ಬ್ಯಾನ್ ಮಾಡಿದೆ. ಸೂಕ್ತ ಸಾಕ್ಷಾಧಾರದ ಮೇಲೆ ಪಿಎಫ್​ಐ ಬ್ಯಾನ್ ಆಗಿದೆ. ಪಿಎಫ್​ಐ ಕಾರ್ಯಕರ್ತರು ಎಲ್ಲಿ ಹೋಗಿದ್ದಾರೆ ಅಂದರೆ ಎಸ್​ಡಿಪಿಐಗೆ ಹೋಗಿದ್ದಾರೆ. ಎಸ್​ಡಿಪಿಐ ಮುಖವಾಣಿ ಪಿಎಫ್​ಐ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮತ್ತು ಎಸ್​ಡಿಪಿಐ ನಡುವಿನ ಒಪ್ಪಂದ ಬಗ್ಗೆ ತನಿಖೆ ಆಗಬೇಕು

ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆಯಿತು. ನಾವೇ ಮಾಡಿದ್ದು ಅಂತ ಒಪ್ಪಿಕೊಂಡರು. ಆದರೂ ಅವರು ಒಳ್ಳೆಯವರು ಅಂತ ಡಿ.ಕೆ. ಶಿವಕುಮಾರ್ ಹೇಳಿದರು. ರುದ್ರೇಶ್, ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಪಿಎಫ್​ಐ ಕಾರ್ಯಕರ್ತರು ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೂ ಅವರನ್ನ ಓಲೈಕೆ ಮಾಡುವ ಕೆಲಸ ಮಾಡಿದ್ದಾರೆ. ಅವರ ಮೇಲಿನ ಕೇಸ್ ತೆಗೆದು ನಮ್ಮ ಕಾರ್ಯಕರ್ತರ ಕೇಸ್ ಸ್ಟ್ರಾಂಗ್ ಮಾಡಿದ್ದಾರೆ. ಕಾಂಗ್ರೆಸ್ ರಾಹುಲ್ ಗಾಂಧಿ ದೇಶ ವಿರೋಧಿ ಹೇಳಿಕೆ ನೀಡಿದರು. ಕಾಂಗ್ರೆಸ್ ಮಾನಸಿಕತೆ ಏನು ಅನ್ನೋದು ಅರ್ಥ ಆಗಬೇಕು. ಕಾಂಗ್ರೆಸ್​ನ ನಿಜ ಬಣ್ಣ ಜನ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಮತ್ತು ಎಸ್​ಡಿಪಿಐ ನಡುವಿನ ಒಪ್ಪಂದ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ಸ್ಪರ್ಧೆಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಗ್ರೀನ್ ಸಿಗ್ನಲ್

ಹೈದ್ರಾಬಾದ್​ನಲ್ಲಿ ಎಸ್​ಡಿಪಿಐಗೆ ಬಿಜೆಪಿ ಫಂಡ್ ಮಾಡುತ್ತಿದೆ ಎನ್ನುವ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ದೇಶ ದ್ರೋಹಿಗಳ ಜೊತೆ ಎಂದೂ ಕೈಗೂಡಿಸಲ್ಲ. ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡುತ್ತಾ ಬಂದಿದೆ. ಅಧಿಕಾರಕ್ಕಾಗಿ ಏನು ಬೇಕಾದರು ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:29 pm, Fri, 17 March 23