ನಾಳೆ ಮಾದಪ್ಪ ಯಾರ್ಯಾರನ್ನ ಕರೆಸಿಕೊಳ್ಳಬೇಕೋ ಕರೆಸಿಕೊಳ್ಳುತ್ತಾನೆ: ವಿ ಸೋಮಣ್ಣ ಮಾರ್ಮಿಕ ನುಡಿ

ಗಂಗಾಧರ​ ಬ. ಸಾಬೋಜಿ

|

Updated on:Mar 17, 2023 | 9:39 PM

ನಾಳೆ ಮಹದೇಶ್ವರ 108 ಅಡಿ ಎತ್ತರದ ಪ್ರತಿಮೆ ಅನಾವರಣಗೊಳ್ಳಲಿದೆ. ಮಾದಪ್ಪ ಯಾರ್ಯಾರನ್ನ ಕರೆಸಿಕೊಳ್ಳಬೇಕೋ ಕರೆಸಿಕೊಳ್ಳುತ್ತಾನೆ ಎಂದು ಮಾರ್ಮಿಕವಾಗಿ ಸಚಿನ ವಿ. ಸೋಮಣ್ಣ ನುಡಿದಿದ್ದಾರೆ.

ನಾಳೆ ಮಾದಪ್ಪ ಯಾರ್ಯಾರನ್ನ ಕರೆಸಿಕೊಳ್ಳಬೇಕೋ ಕರೆಸಿಕೊಳ್ಳುತ್ತಾನೆ: ವಿ ಸೋಮಣ್ಣ ಮಾರ್ಮಿಕ ನುಡಿ
ಮಹದೇಶ್ವರನ 108 ಅಡಿ ಎತ್ತರದ ಪ್ರತಿಮೆ, ಸಚಿವ ವಿ.ಸೋಮಣ್ಣ

ಚಾಮರಾಜನಗರ: ನಾಳೆ ಮಹದೇಶ್ವರ (Male Mahadeshwara Betta) 108 ಅಡಿ ಎತ್ತರದ ಪ್ರತಿಮೆ ಅನಾವರಣಗೊಳ್ಳಲಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಬರುತ್ತಾರೆ. ಬಿ.ಎಸ್ ಯಡಿಯೂರಪ್ಪ, ಸಿಸಿ ಪಾಟೀಲ್, ಆರ್. ಅಶೋಕ್, ಶಶಿಕಲಾ ಜೊಲ್ಲೆ ಅವರನ್ನು ಆಹ್ವಾನಿಸಿದ್ದೇವೆ. ಆದರೆ ನಾಳೆ ಮಾದಪ್ಪ ಯಾರ್ಯಾರನ್ನ ಕರೆಸಿಕೊಳ್ಳಬೇಕೋ ಕರೆಸಿಕೊಳ್ಳುತ್ತಾನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ನನ್ನನ್ನು  ಚಾಮರಾಜನಗರ, ಸಿಂದಗಿ, ತುಮಕೂರು, ಗೋವಿಂದರಾಜನಗರ ಹೀಗೆ ಹಲವಾರು ಕಡೆ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ನನಗೆ ಚಾಮರಾಜನಗರ ಜಿಲ್ಲೆಯ ಬಗ್ಗೆ ಅಪಾರ ಗೌರವ, ಪ್ರೀತಿ ಇದೆ. ಇಲ್ಲಿನ ಜನರ ಬಗ್ಗೆ ಕಾಳಜಿ ಇದೆ. 45 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಇದೆ. ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸಿದ್ದೇನೆ. ನನ್ನ ತಂದೆ ತಾಯಿ ಹೊರತುಪಡಿಸಿ ಚಾಮರಾಜನಗರ ಜಿಲ್ಲೆಯನ್ನು ಅಪಾರವಾಗಿ ಗೌರವಿಸುತ್ತೇನೆ. ನಾನು ಎಲ್ಲಿ ನಿಲ್ಲಬೇಕು ಎಂಬುದನ್ನು ಪಕ್ಷ ತೀರ್ಮಾನ‌ ಮಾಡುತ್ತೆ ಹೇಳಿದರು.

ಚಾಮರಾಜನಗರದಲ್ಲಿ ಸ್ಪರ್ಧೆ ಬಗ್ಗೆ ಗುಟ್ಟು ಬಿಟ್ಟುಕೊಡದ ವಿ.ಸೋಮಣ್ಣ

ಸಚಿವ ಸೋಮಣ್ಣ ಚಾಮರಾಜನಗರ ದಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪಕ್ಷದಲ್ಲಿ ನನಗಿಂತ ಹೆಚ್ಚಿನ ಅರ್ಹತೆ ಇರುವ ಹಲವಾರು ಜನರಿದ್ದಾರೆ. ಯಾರಿಗೆ ಅವಕಾಶ ಸಿಕ್ಕಿಲ್ಲವೋ ಅಂಥವರಿಗೆ ಸಿಗಬೇಕಾಗಿದೆ ಎಂದು ಹೇಳುವ ಮೂಲಕ ವಿ.ಸೋಮಣ್ಣ ಸ್ಪರ್ಧೆ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.

ಇದನ್ನೂ ಓದಿ: ಮಾದಪ್ಪನ ಹುಂಡಿಗೆ ದಾಖಲೆ ಪ್ರಮಾಣದಲ್ಲಿ ಹರಿದುಬಂದ ಕಾಣಿಕೆ, ಎಷ್ಟು ಗೊತ್ತೇ?

ನಾನು 10 ಬಾರಿ ಚುನಾವಣೆ ಎದುರಿಸಿ 7 ಬಾರಿ ಶಾಸಕನಾಗಿದ್ದೇನೆ. ಚಾಮರಾಜನಗರ ಜಿಲ್ಲೆಯ ಬಗ್ಗೆ ನನಗೆ ಅಪಾರ ಗೌರವವಿದೆ. ಚಾಮರಾಜನಗರ ಜಿಲ್ಲೆಯನ್ನು ಮುಖ್ಯವಾಹಿನಿಗೆ ತರಬೇಕೆಂಬ ಹಂಬಲವಿದೆ. ಮಲೆ ಮಹದೇಶ್ವರ, ಬಿಳಿಗಿರಿ ರಂಗನಾಥ, ಹಿಮವದ್ ಗೋಪಾಲಸ್ವಾಮಿ ಹಲವಾರು ದೇವಸ್ಥಾನಗಳಿಗೆ, ದೇವರ ಇಚ್ಛೆಯಂತೆ ಕೆಲಸ ಮಾಡುತ್ತೇನೆ ಎಂದರು.

20 ಕೋಟಿ ರೂ. ವೆಚ್ಚದಲ್ಲಿ ಮಹದೇಶ್ವರ ಪ್ರತಿಮೆ 

ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಮಹದೇಶ್ವರ 108 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. ಸದ್ಯ ಪ್ರತಿಮೆ ಸಂಪೂರ್ಣ ನಿರ್ಮಾಣ ಮಾತ್ರವಾಗಿದ್ದು, ಮಹದೇಶ್ವರ ಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲು ರಂಗಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿದೆ.

ಇದನ್ನೂ ಓದಿ: ಕೊಂಡ ಹಾಯುವುದು ಗೊತ್ತು, ಆದರೆ ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆಯಲ್ಲಿ ದೇವರಿಗೆ ಉರಿಯುವ ಕೆಂಡವೇ ನೈವೇದ್ಯ! ಇದು ತಲೆ‌ತಲಾಂತರಗಳ ವಾಡಿಕೆ

ಳೀಯ ರೈತರ ವಿರೋಧ

ಇನ್ನು ನಿರ್ಮಾಣವಾಗಿರುವ ಪ್ರತಿಮೆ ಕುರಿತಾಗಿ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದು, ಅದು ತಮ್ಮ ಜಾಗ, ರಸ್ತೆಗಾಗಿ ಭೂಮಿ ಬಳಸಿಕೊಳ್ಳುತ್ತಿರುವುದರಿಂದ ತಮಗೆ ಅನ್ಯಾಯ ಆಗುತ್ತಿದೆ ಎಂದಿದ್ದಾರೆ. ಆದರೆ ಆ ಪ್ರದೇಶ ಸರ್ಕಾರಕ್ಕೆ ಸೇರಿದ್ದು, ಹಲವು ವರ್ಷಗಳಿಂದ ಇಲ್ಲಿನ ಸ್ಥಳೀಯರು ಅದನ್ನು ಉಳುಮೆ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಸುತ್ತಲಿನ ಐದು ಕುಟುಂಬಸ್ಥರು ಈ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಅದು ಸರ್ಕಾರಿ ಜಮೀನು ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಸ್. ಕಾತ್ಯಾಯಿನಿ ದೇವಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada