AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲೆಕ್ಸ್ ವಿಚಾರಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾರಾಮಾರಿ ಮಾಡಿಕೊಂಡಿರುವಂತಹ ಘಟನೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿಜಯನಗರದ ಎಂ.ಸಿ.ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ನಡೆದಿದೆ.

ಫ್ಲೆಕ್ಸ್ ವಿಚಾರಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಾರಾಮಾರಿ
ಗಂಗಾಧರ​ ಬ. ಸಾಬೋಜಿ
|

Updated on:Mar 17, 2023 | 8:09 PM

Share

ಬೆಂಗಳೂರು: ಫ್ಲೆಕ್ಸ್ (Flex) ವಿಚಾರವಾಗಿ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಕಾರ್ಯಕರ್ತರು ಮಾರಾಮಾರಿ ಮಾಡಿಕೊಂಡಿರುವಂತಹ ಘಟನೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿಜಯನಗರದ ಎಂ.ಸಿ.ಲೇಔಟ್‌ನ ಬಿಜಿಎಸ್ ಆಟದ ಮೈದಾನದಲ್ಲಿ ನಡೆದಿದೆ. ಕಾಂಗ್ರೆಸ್‌ನ ಮಾಜಿ ಶಾಸಕ ಪ್ರಿಯಾಕೃಷ್ಣ ಬೆಂಬಲಿಗರಿಂದ ಸಚಿವ ಸೋಮಣ್ಣ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ಅನುಮತಿ ಪಡೆದು ಯುಗಾದಿ ಉತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿರುವ ಆರೋಪ ಮಾಡಿದ್ದಾರೆ. ಮಾರಾಮಾರಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ವಿಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಾರ್ಚ್ 19ರಂದು ಕಾಂಗ್ರೆಸ್ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಬೇರೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದಕ್ಕೆ BJP ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ವೇಳೆ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ

ಹಾಸನ: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ನಡುವಿನ ಜಟಾಪಟಿ ಹೆಚ್ಚುತ್ತಿದೆ. ಇದೀಗ ದೇವಸ್ಥಾನದಲ್ಲಿ ಪ್ರಸಾದ ಹಂಚುವಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ನೂಕಾಟ, ತಳ್ಳಾಟ ನಡೆದಿತ್ತು. ಜಿಲ್ಲೆಯ ಹೊಳೆನರಸೀಪುರದಲ್ಲಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ (ಮಾರ್ಚ್ 7) ಅಂಗವಾಗಿ ಮಾಜಿ ಸಚಿವರೂ ಆಗಿರುವ ಶಾಸಕ ಹೆಚ್.ಡಿ.ರೇವಣ್ಣ ಅವರ ಕಡೆಯಿಂದ ಪ್ರಸಾದ ವಿತರಣೆ ಮಾಡಲು ಕಾರ್ಯಕರ್ತರು ಮುಂದಾಗಿದ್ದರು. ಈ ವೇಳೆ ನಮಗೂ ಪ್ರಸಾದ ವಿತರಣೆಗೆ ಅವಕಾಶ ನೀಡಿ ಅಂತಾ ಕಾಂಗ್ರೆಸ್ಸಿಗರ ಪಟ್ಟು ಹಿಡಿಯಲಾರಂಭಿಸಿ ಧರಣಿ ಕುಳಿತ್ತಿದ್ದರು. ಈ ವಿಚಾರ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದರು.

ಇದನ್ನೂ ಓದಿ: Bengaluru: ಚೀನಾ ಲೋನ್​ ಕಂಪನಿಗಳಿಂದ ವಂಚನೆ: 7 ಸಂಸ್ಥೆ, ಐವರ ವಿರುದ್ಧ ತನಿಖಾ ವರದಿ ಸಲ್ಲಿಸಿದ ಇಡಿ

ಜೆಡಿಎಸ್ ಕಾರ್ಯಕರ್ತರು ಪ್ರಸಾದ ವಿತರಣೆಗೆ ನಿಂತಾಗ ನಮಗೂ ಪ್ರಸಾದ ವಿನಿಯೋಗ ಮಾಡಲು ಅವಕಾಶ ನೀಡಿ ಎಂದು ಪಾತ್ರೆ ಹಾಗೂ ಶಾಮಿಯಾನದೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದಾರೆ. ಈ ವೇಳೆ ವಾಹನ ತಡೆದ ಪೊಲೀಸರ ವಿರುದ್ದ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಕ್ರಮದಿಂದ ಕೆರಳಿ ದೇವಾಲಯದ ದ್ವಾರದ ಎದುರು ನೂರಾರು ಮಂದಿ ಧರಣಿಗೆ ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಹೊಡೆದು ಓಡಿಸಿದರು.

ಹೀಗೆ ಆರಂಭವಾದ ಕಾಂಗ್ರೆಸ್ ಕಾರ್ಯಕರ್ತರ ಧರಣಿ ವಿಚಾರ ತಿಳಿದ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಬಳಿಕ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಆರಂಭವಾದ ವಾಗ್ವಾದ ತಾರಕಕ್ಕೇರಿ ಪರಸ್ಪರ ನೂಕಾಟ ತಳ್ಳಾಟ ಆರಂಭವಾಯಿತು. ಇದರಿಂದಾಗಿ ದೇವಸ್ಥಾನದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ಈ ವೇಳೆ ಜಟಾಪಟಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು.

ಇದನ್ನೂ ಓದಿ: Bengaluru-Mysuru Expressway: ವಿಪಕ್ಷಗಳ ಆರೋಪದ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ

ಇನ್ನು, ದೇವಸ್ಥಾನದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡ ಬಗ್ಗೆ ವಿಚಾರ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ದೌಡಾಯಿಸಿದ್ದು, ಪಕ್ಷದ ಹೆಸರಿನಲ್ಲಿ ದೇಗುಲ ಆವರಣದಲ್ಲಿ ಪ್ರಸಾದ ವಿತರಣೆಗೆ ಅವಕಾಶ ಇಲ್ಲವೆಂದು ಸ್ಪಷ್ಟನೆ ನೀಡಿದರು. ಈವೆರೆಗೆ ಯಾವುದೇ ಪಕ್ಷದ ಹೆಸರನಲ್ಲಿ ಪ್ರಸಾದ ವಿನಿಯೋಗ ನಡೆದಿಲ್ಲ. ಈ ವರ್ಷವೂ ವ್ಯಕ್ತಿ ಅಥವಾ ಪಕ್ಷದ ಹೆಸರಿನಲ್ಲಿ ಅನ್ನ ಸಂತರ್ಪಣೆ ಆಗಲ್ಲ. ಮುಜರಾಯಿ ಇಲಾಖೆಗೆ ಯಾರು ಬೇಕಾದರೂ ದಾನ ಕೊಡಬಹುದು. ದಾನಿಗಳು ದಿನಸಿ ಕೊಟ್ಟರೆ ಅನ್ನಸಂತರ್ಪಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಬಳಿಕ ಪರಿಸ್ಥಿತಿ ತಿಳಿಗೊಂಡಿತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:09 pm, Fri, 17 March 23

Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ