AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramanagara: ಮನೆಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ, ಆಟೋ ಡ್ರೈವರ್ ಅರೆಸ್ಟ್

ಶಾಲೆಯಿಂದ ಹಿಂತಿರುಗುತ್ತಿದ್ದಾಗ ಅಪ್ರಾಪ್ತ ಬಾಲಕಿಗೆ ಆರೋಪಿ ಆಮಿಷ ಒಡ್ಡಿ ಮನೆಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಪುನೀತ್​ನನ್ನು ಪೊಲೀಸರು ಬಂಧಿಸಿದ್ದಾರೆ.

Ramanagara: ಮನೆಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ, ಆಟೋ ಡ್ರೈವರ್ ಅರೆಸ್ಟ್
ಸಾಂದರ್ಭಿಕ ಚಿತ್ರ
Rakesh Nayak Manchi
|

Updated on:Mar 17, 2023 | 5:23 PM

Share

ರಾಮನಗರ: ಶಾಲೆಯಿಂದ ಹಿಂದಿರುಗುತ್ತಿದ್ದ ಅಪ್ರಾಪ್ತ ಬಾಲಕಿಗೆ ಆಮಿಷ ಒಡ್ಡಿ ಮನೆಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ (Rape Attempt At Ramanagara) ಘಟನೆ ರಾಮನಗರ ಜಿಲ್ಲೆಯ ರಾಮದೇವರಬೆಟ್ಟ ರಸ್ತೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಆಟೋರಿಕ್ಷಾ ಚಾಲಕ ಪುನೀತ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ರಾಮದೇವರ ಬೆಟ್ಟ (ಬೆಟ್ಟ) ರಸ್ತೆಯ ಬಳಿ ಶುಕ್ರವಾರ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಆರೋಪಿಗಳು ಆಮಿಷ ಒಡ್ಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

2ನೇ ತರಗತಿ ಓದುತ್ತಿರುವ ಬಾಲಕಿ ಶಾಲೆ ಮುಗಿಸಿ ಎಂದಿನಂತೆ ಮನೆಗೆ ಹಿಂದಿರುಗುತ್ತಿದ್ದಾಗ ಎದುರಾದ ಆರೋಪಿ ಪುನೀತ್, ಆಟೋದಲ್ಲಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲದೆ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಕಿರುಚಾಡಿದಾಗ ಭಯಗೊಂಡ ಪುನೀತ್, ಬಾಲಕಿಗೆ ಚಾಕೋಲೆಟ್​ ನೀಡಿ ಆಟೋದಲ್ಲಿ ಕರೆತಂದು ಮನೆಗೆ ಬಿಟ್ಟಿದ್ದಾನೆ. ಬಳಿಕ ಬಾಲಕಿ ನಡೆದ ಘಟನೆಯನ್ನು ತಾಯಿಯೊಂದಿಗೆ ಹಂಚಿಕೊಂಡಿದ್ದಾಳೆ. ಕೂಡಲೇ ಬಾಲಕಿಯನ್ನು ಠಾಣೆಗೆ ಕರೆದೊಯ್ದ ತಾಯಿ, ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುನೀತ್​ನನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಇದನ್ನೂ ಓದಿ: Gurugram Crime: ಕ್ರೀಡಾಕೂಟದ ವೇಳೆ 8ನೇ ತರಗತಿ ವಿದ್ಯಾರ್ಥಿನಿಯ ಅಪಹರಣ, ಸಾಮೂಹಿಕ ಅತ್ಯಾಚಾರ

ಕಳೆದ ತಿಂಗಳು, ಅಪ್ರಾಪ್ತ ಬಾಲಕಿಯ ಮೇಲೆ ಆಸಿಡ್ ದಾಳಿ ನಡೆಸಿದ್ದ 22 ವರ್ಷದ ಆರೋಪಿಯನ್ನು ರಾಮನಗರ ಪೊಲೀಸರು ಬಂಧಿಸಿದ್ದರು. ಮೆಕ್ಯಾನಿಕ್ ಆಗಿದ್ದ ಸುಮಂತ್ ಎಂಬಾತ 17 ವರ್ಷದ ಯುವತಿಗೆ ಮದುವೆ ಪ್ರಸ್ತಾಪ ಮಾಡಿದ್ದ. ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದರಿಂದ ಅವರ ಪೋಷಕರು ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ಹುಡುಗಿ ಕೂಡ ಸುಮಂತ್ ಪ್ರಸ್ತಾಪವನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆರೋಪಿ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದನು. ಘಟನೆಯಲ್ಲಿ ಬಾಲಕಿಯ ಮುಖ ಮತ್ತು ಎಡಗಣ್ಣಿನ ಚರ್ಮಕ್ಕೆ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು.

ಕಳೆದ ವರ್ಷದ ಕೊನೆಯ ತಿಂಗಳಿನಲ್ಲಿ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕ ಅತ್ಯಾಚಾರ ಮಾಡಿದ್ದ ಪ್ರಕರಣ ನಡೆದಿತ್ತು. ಪಾಠ ಹೇಳಿಕೊಡುವ ನೆಪದಲ್ಲಿ ಬಾಲಕಿ ಮನೆಗೆ ಬಂದ ಬಾಲಕ, ಮನೆಯಲ್ಲಿ ಪೋಷಕರು ಕೆಲಸಕ್ಕೆ ಹೋಗಿರುವುದನ್ನು ತಿಳಿದು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದನು.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Fri, 17 March 23

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ