ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಆರೋಪಿಗಳ ಹತ್ಯೆ ಕೇಸ್‌ಗೆ ಟ್ವಿಸ್ಟ್: ಹುಬ್ಬಳ್ಳಿ ಮೂಲದ ಪತ್ರಕರ್ತನ ಬಂಧನ
ರೌಡಿಶೀಟರ್ ಹಂದಿಅಣ್ಣಿ ಕೊಲೆ ಆರೋಪಿಗಳ ಹತ್ಯೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದ 8ನೇ ಆರೋಪಿಯಾಗಿರುವ ಹುಬ್ಬಳ್ಳಿ ಮೂಲದ ಪತ್ರಕರ್ತ ಮೆಹಬೂಬ್ ಮುನವಳ್ಳಿ ಬಂಧನ ಮಾಡಲಾಗಿದೆ.
ದಾವಣಗೆರೆ: ರೌಡಿಶೀಟರ್ ಹಂದಿ ಅಣ್ಣಿ (handi Anni) ಕೊಲೆ ಆರೋಪಿಗಳ ಹತ್ಯೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದ 8ನೇ ಆರೋಪಿಯಾಗಿರುವ ಹುಬ್ಬಳ್ಳಿ ಮೂಲದ ಪತ್ರಕರ್ತ ಮೆಹಬೂಬ್ ಮುನವಳ್ಳಿ ಬಂಧನ ಮಾಡಲಾಗಿದೆ. ಪ್ರಕರಣದಲ್ಲಿ ಪೊಲೀಸರ ತನಿಖೆಗೆ ದಾರಿ ತಪ್ಪಿಸುವ ಹಾಗೂ ಆರೋಪಿಗಳ ಶರಣಾಗುವ ವಿಚಾರದಲ್ಲಿ ತಪ್ಪು ಮಾಹಿತಿ ಆರೋಪ ಮಾಡಲಾಗಿದೆ. ಸುನೀಲ್ ಅಲಿಯಾಸ್ ತಮಿಳ್ ಸುನೀಲ್, ಅಭಿಲಾಷ್, ವೆಂಕಟೇಶ್, ಪವನ್ ಶರಣಾಗತಿಯಾದ ಆರೋಪಿಗಳು. ತಲೆಮರೆಸಿಕೊಂಡಿರುವ ಉಳಿದ ಮೂವರಿಗಾಗಿ ಶೋಧ ನಡೆಯುತ್ತಿದೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲೂರು ಬಳಿ ಬೈಕ್ನಲ್ಲಿ ತೆರಳುತ್ತಿದ್ದ ರೌಡಿಶೀಟರ್ ಆಂಜನೇಯ @ ಅಂಜನಿ, ಮಧುನನ್ನು ಅಡ್ಡಗಟ್ಟಿ ಮಚ್ಚಿನಿಂದ ದಾಳಿ ಮಾಡಿ ಹತ್ಯೆಗೈಯಲಾಗಿತ್ತು. ಶಿವಮೊಗ್ಗದ ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾದ ಅಂಜನಿ, ಮಧು ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದರು. ಅಂಜನಿ, ಮಧು ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿಗಳು.
ಸ್ಕಾರ್ಪಿಯೊ ಕಾರಿನಲ್ಲಿ ಬಂದು ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರಿಂದ ರೌಡಿಶೀಟರ್ ಆಂಜನೇಯ ಅಲಿಯಾಸ್ ಅಂಜನಿ(30) ಸಾವನ್ನಪ್ಪಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಧು ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ಯೆಯ ನಂತರ ಸ್ಕಾರ್ಪಿಯೊ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಶಿಗ್ಗಾಂವಿ ಠಾಣೆಯ ಪೊಲೀಸರ ಮುಂದೆ ಶರಣಾಗಿದ್ದರು.
ಇದನ್ನೂ ಓದಿ: ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣ: ಪೊಲೀಸರ ಮುಂದೆ ಶರಣಾಗಿ ತಪ್ಪೊಪ್ಪಿಕೊಂಡ ಆರೋಪಿಗಳು
ಗೃಹ ಸಚಿವರ ಜಿಲ್ಲೆಯಾದ ಶಿವಮೊಗ್ಗದಲ್ಲಿ ಹಂದಿ ಅಣ್ಣಿಯ ಬರ್ಬರ ಹತ್ಯೆ
ಗೃಹ ಸಚಿವರ ಜಿಲ್ಲೆಯಾದ ಶಿವಮೊಗ್ಗದಲ್ಲಿ ಹಂದಿ ಅಣ್ಣಿಯ ಬರ್ಬರ ಹತ್ಯೆ ಬೆಚ್ಚಿಬೀಳಿಸಿತ್ತು. ಬೈಕ್ನಲ್ಲಿ ಹೋಗುತ್ತಿದ್ದ ಹಂದಿ ಅಣ್ಣಿಯನ್ನು ಅಡ್ಡಗಟ್ಟಿದಾಗ ತನ್ನ ಮೇಲೆ ದಾಳಿ ನಡೆಸುವ ಬಗ್ಗೆ ತಿಳಿದು ಪೊಲೀಸ್ ಚೌಕಿ ಕಡೆ ಓಡಲು ಆರಂಭಿಸುತ್ತಾನೆ. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಹಂದಿ ಅಣ್ಣಿಯ ಬೆನ್ನಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಪರಿಣಾಮವಾಗಿ ಹಂದಿ ಅಣ್ಣಿ ನೆಲಕ್ಕೆ ಬಿದ್ದಾಗ ದುಷ್ಕರ್ಮಿಗಳು ಮನಬಂದಂತೆ ತಲೆಯನ್ನು ಲಾಂಗು, ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದರು.
ಘಟನೆಯಲ್ಲಿ ತಲೆಗೆ ಗಂಭಿರವಾಗಿ ಗಾಯಗೊಂಡಿದ್ದ ಹಂದಿ ಅಣ್ಣಿ ರಕ್ತದ ಮಡುವಿನಲ್ಲಿ ಹೊರಳಾಡುತ್ತಾ ಸ್ಥಳದಲ್ಲೇ ಸಾವನ್ನಪ್ಪಿದಾ. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಈ ಘಟನೆ ನಡೆದಿತ್ತು. ಹಂದಿ ಅಣ್ಣಿ ತನ್ನ 18ನೇ ವಯಸ್ಸಿಗೆ ರೌಡಿಶೀಟರ್ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದನು. ಕುಖ್ಯಾತ ರೌಡಿಗಳಾಗಿದ್ದ ಲವ ಹಾಗೂ ಕುಶ ಎಂಬ ಸಹೋದರರನ್ನು ಹತ್ಯೆ ಮಾಡಿದ ಹಂದಿ ಅಣ್ಣಿ ಭೂಗತ ಲೋಕಕ್ಕೆ ಕಾಲಿಟ್ಟಿದ್ದ. ನಂತರ ಮತ್ತೋರ್ವ ರೌಡಿ ಹೆಬ್ಬೆಟ್ಟು ಮಂಜನ ಶಿಷ್ಯನಾಗಿ ಸೇರ್ಪಡೆಗೊಂಡು ಕೊಲೆಗಳನ್ನು ಮಾಡಲು ಆರಂಭಿಸಿದ್ದನು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:07 pm, Fri, 17 March 23