ಮದುವೆಯಾದ ಮೂರೇ ದಿನಕ್ಕೆ ಪತ್ನಿ ಬಿಟ್ಟು ಪತಿ ಪರಾರಿ, ಮದ್ವೆ ಫೋಟೋ ಬಗ್ಗೆ ಕೇಳಿದ್ರೆ ಭೂಪ ಹೇಳಿದ್ದೇನು ಗೊತ್ತಾ?

ವ್ಯಕ್ತಿಯೊಬ್ಬ ಮದುವೆಯಾಗಿ ಮೂರೇ ದಿನಕ್ಕೆ ಹೆಂಡತಿಯನ್ನು ಪರಾರಿಯಾಗಿದ್ದಾನೆ. ಇನ್ನು ಮದ್ವೆಯಾಗಿರುವ ಫೋಟೋಗಳ ಬಗ್ಗೆ ಕೇಳಿದ್ರೆ ಶಾರ್ಟ್ ಮೂವಿ ಕಥೆ ಹೇಳುತ್ತಿದ್ದಾನೆ.

ಮದುವೆಯಾದ ಮೂರೇ ದಿನಕ್ಕೆ ಪತ್ನಿ ಬಿಟ್ಟು ಪತಿ ಪರಾರಿ, ಮದ್ವೆ ಫೋಟೋ ಬಗ್ಗೆ ಕೇಳಿದ್ರೆ ಭೂಪ ಹೇಳಿದ್ದೇನು ಗೊತ್ತಾ?
ಗಂಡ ಹೆಂಡತಿ
Follow us
ರಮೇಶ್ ಬಿ. ಜವಳಗೇರಾ
|

Updated on: Mar 17, 2023 | 2:14 PM

ಬೆಂಗಳೂರು: ಪ್ರೀತಿ ಪ್ರೇಮ ಅಂತ ಯುವತಿಯನ್ನು ಬಲೆ ಬೀಸಿಕೊಂಡು ಕೊನೆಗೆ ಮದುವೆಯಾಗಿದ್ದ. ಆದ್ರೆ, ಇದೀಗ ಮದುವೆಯಾಗಿ (Wedding) ಮೂರೇ ದಿನಕ್ಕೆ ಪತಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪತ್ನಿ ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ (KR Puram Police Station) ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸುರೇಶ್‍ನನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಮದುವೆ ಪೋಟೊಗಳ ಬಗ್ಗೆ ಸುರೇಶನಿಗೆ ಕೇಳಿದ್ರೆ, ಆ ಫೋಟೋಗಳು ಶಾರ್ಟ್ ಮೂವಿ ಚಿತ್ರೀಕರಿಸಬೇಕಾದಾಗ ತೆಗೆದ ಫೋಟೋಗಳು. ಧರಣಿ ಜೊತೆ ನಾನು ವಿವಾಹವಾಗಿಲ್ಲ. ಕೇವಲ ಸ್ನೇಹಿತನಾಗಿದ್ದೆ ಅಷ್ಟೇ ಎಂದು ವರಸೆ ಬದಲಾಯಿಸಿದ್ದಾನಂತೆ‌.

ಇದನ್ನೂ ಓದಿ: ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್​ ಬಳಿ ಡ್ರಮ್​ನಲ್ಲಿ ಮಹಿಳೆ ಶವ ಪತ್ತೆ ಕೇಸ್: ಹಂತಕರ ಸುಳಿವು ನೀಡಿದ ಡ್ರಮ್​ ಮೇಲಿದ್ದ ಸ್ಟಿಕ್ಕರ್

ಫೆಬ್ರವರಿ 13ರಂದು ನಾವಿಬ್ಬರೂ ಮದುವೆಯಾಗಿದ್ದೆವು. ಫೆ. 13ರಿಂದ 17ರವರೆಗೆ ಪತಿ-ಪತ್ನಿ ಇಬ್ಬರೂ ಜೊತೆಗೇ ಇದ್ದೆವು. ಆದರೆ, ಫೆಬ್ರವರಿ 18 ಮನೆಗೆ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ವಿವಾಹವಾಗಿ ಮೂರೇ ದಿನಗಳ ಅಂತರದಲ್ಲಿ ಪತಿ ನನ್ನಿಂದ ದೂರವಾಗಿದ್ದಾನೆ ಎಂದು ಧರಣಿ ಕಣ್ಣೀರು ಹಾಕುತ್ತಿದ್ದಾಳೆ.

ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಧರಣಿ ಮತ್ತು ಸುರೇಶ್ ಫೆಬ್ರವರಿ 13 ರಂದು ಮದುವೆಯಾಗಿದ್ದರು. ಫೆ.13 ರಿಂದ 17 ರವರೆಗೂ ಒಟ್ಟಿಗೆ ಇದ್ದ ಪತಿ, 18ರಂದು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದವನು ನಾಪತ್ತೆಯಾಗಿದ್ದಾನೆ. ಧರಣಿಗೆ 2016 ರಲ್ಲಿ ಮದುವೆಯಾಗಿತ್ತು. ಕೌಟುಂಬಿಕ ಕಾರಣಕ್ಕಾಗಿ ಪತಿಯಿಂದ ದೂರವಾಗಿದ್ದಳು. ಈ ಎಲ್ಲಾ ವಿಚಾರಗಳು ಸುರೇಶ್ ಗೂ ತಿಳಿಸಿದ್ದ ಧರಣಿ ಬಳಿಕ ಆತನನ್ನು ಪ್ರೀತಿಸಿ ಮದುವೆಯಾಗಿದ್ದಳು ಎಂದು ತಿಳಿದುಬಂದಿದೆ. ಸದ್ಯ ಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಧರಣಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರೆದಿದೆ‌.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್