Noida Crime: ಕೈಯಲ್ಲಿ ಹೋಳಿ ಬಣ್ಣ, ಚರಂಡಿಯಲ್ಲಿತ್ತು ಮಹಿಳೆಯ ದೇಹದ ಬಿಡಿ ಭಾಗಗಳು

ಚರಂಡಿಯೊಂದರಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿದ್ದು, ನೋಯ್ಡಾದ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಮಹಿಳೆಯನ್ನು ಹತ್ಯೆ ಮಾಡಿ ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚರಂಡಿಗೆ ಎಸೆಯಲಾಗಿದೆ ಎನ್ನಲಾಗಿದೆ. 

Noida Crime: ಕೈಯಲ್ಲಿ ಹೋಳಿ ಬಣ್ಣ, ಚರಂಡಿಯಲ್ಲಿತ್ತು ಮಹಿಳೆಯ ದೇಹದ ಬಿಡಿ ಭಾಗಗಳು
ಸಾಂದರ್ಭಿಕ ಚಿತ್ರ
Follow us
|

Updated on: Mar 17, 2023 | 11:28 AM

ಚರಂಡಿಯೊಂದರಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿದ್ದು, ನೋಯ್ಡಾದ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಮಹಿಳೆಯನ್ನು ಹತ್ಯೆ ಮಾಡಿ ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚರಂಡಿಗೆ ಎಸೆಯಲಾಗಿದೆ ಎನ್ನಲಾಗಿದೆ.  ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 5 ದಿನಗಳ ಹಿಂದೆ ಮಹಿಳೆಯನ್ನು ಹತ್ಯೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಫೋರೆನ್ಸಿಕ್ ತಂಡವನ್ನು ಕರೆಸಲಾಗಿದ್ದು, ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತದೇಹವನ್ನು ಇನ್ನೂ ಗುರುತಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಹದ ಕೈಗಳಲ್ಲಿ ಹೋಳಿ ಬಣ್ಣಗಳು ಕಂಡುಬಂದಿವೆ ಎಂದು ಕೆಲವು ವರದಿಗಳು ತಿಳಿಸಿವೆ. ನೋಯ್ಡಾ ಪ್ರಾಧಿಕಾರದ ಗುತ್ತಿಗೆದಾರರು ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಭಾಗಗಳು ಪತ್ತೆಯಾಗಿವೆ.

ಘಟನಾ ಸ್ಥಳದ ಬಳಿ ಪೊಲೀಸರು ಜನರನ್ನು ವಿಚಾರಣೆ ನಡೆಸುತ್ತಿದ್ದಾರೆ, ಸಹಾಯಕ ಪೊಲೀಸ್ ಕಮಿಷನರ್, ಹೆಚ್ಚುವರಿ ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಶ್ವಾನದಳ ಆಗಮಿಸುತ್ತಿದ್ದಂತೆಯೇ ಮಹಿಳೆಯ ಕೈ, ಕಾಲು ಮತ್ತು ಬೆರಳುಗಳನ್ನು ಚರಂಡಿಯಿಂದ ಹೊರ ತೆಗೆಯಲಾಯಿತು ಎಂದು ಹೆದರಿದ ನಿವಾಸಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೃತದೇಹವನ್ನು ಗುರುತಿಸಲು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ನೋಯ್ಡಾ ವಲಯದ ಡಿಸಿಪಿ ಹರೀಶ್ ಚಂದರ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: Accidentally murdered! ಅತ್ಯಂತ ಸಿನಿಮೀಯ ರೀತಿಯಲ್ಲಿ ಕೊಲೆ​​: ಹಣಕಾಸು ವಿಚಾರಕ್ಕೆ ಗೆಳೆಯರ ಗಲಾಟೆ, ಸಂಧಾನಕ್ಕೆ ಬಂದ ಯುವಕನನ್ನೇ ಮಿಸ್ಸಾಗಿ ಹತ್ಯೆ ಮಾಡಿಬಿಟ್ಟರು!

ಎರಡು ದಿನಗಳ ಹಿಂದೆ ಗ್ರೇಟರ್ ನೋಯ್ಡಾದ ಇಕೋಟೆಕ್-3 ಪ್ರದೇಶದ ಹಿಂಡನ್ ನದಿಯಲ್ಲಿ ಅಪರಿಚಿತ ಮಧ್ಯವಯಸ್ಕ ಮಹಿಳೆಯ ಶವ ತೇಲುತ್ತಿತ್ತು. ಈ ಪ್ರಕರಣದಲ್ಲೂ ಮೃತದೇಹ ಕೊಳೆತಿದ್ದು, ಐದು ದಿನಗಳ ಹಿಂದೆ ಮಹಿಳೆ ಮೃತಪಟ್ಟಿರುವಂತೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಕೋಟೆಕ್ -3 ನ ಕುಲೇಸ್ರಾ ಗ್ರಾಮದಲ್ಲಿ ಸೇತುವೆಯ ಕೆಳಗೆ ಶವ ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು ಮತ್ತು ತಕ್ಷಣವೇ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು.

ಮೃತದೇಹವನ್ನು ಪೊಲೀಸರು ನೀರಿನಿಂದ ಹೊರತೆಗೆದಿದ್ದು ಮಧ್ಯವಯಸ್ಕ ಮಹಿಳೆಯದ್ದು ಎಂದು ತಿಳಿದುಬಂದಿದೆ. ದೇಹವು ಸಂಪೂರ್ಣವಾಗಿ ಕೊಳೆತಿರುವುದರಿಂದ, ಮಹಿಳೆಯನ್ನು ಗುರುತಿಸುವುದು ಕಷ್ಟಕರವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ