JP Nadda: ಇಂದಿನಿಂದ ಎರಡು ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರ್ನಾಟಕ ಪ್ರವಾಸ

ವಿವೇಕ ಬಿರಾದಾರ

|

Updated on:Mar 17, 2023 | 9:23 AM

ಮಾ.17 ಮತ್ತು 18 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗಿಯಾಗಲಿದ್ದಾರೆ.

JP Nadda: ಇಂದಿನಿಂದ ಎರಡು ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರ್ನಾಟಕ ಪ್ರವಾಸ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ

ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election) ದಿನ ಎಣಿಕೆ ಪ್ರಾರಂಭವಾಗಿದ್ದು, ರಾಜ್ಯಾದ್ಯಂತ ಯಾತ್ರೆಗಳದ್ದೇ ಸದ್ದು ಕೇಳುತ್ತಿದೆ. ಪ್ರಜಾಪ್ರಭುತ್ವದ ಮತದಾನ ಹಬ್ಬಕ್ಕೆ ಯಾತ್ರೆಗಳ ಮೂಲಕ ಸ್ವಾಗತ ದೊರೆಯುತ್ತಿದೆ. ಬಿಜೆಪಿ (BJP) ಕರುನಾಡಿನ ನಾಲ್ಕು ದಿಕ್ಕಿನಿಂದ ವಿಜಯ ಸಂಕಲ್ಪ ಯಾತ್ರೆ (Vijay Sankalp Yatra) ಪ್ರಾರಂಭಿಸಿದ್ದು, ಈ ಯಾತ್ರೆಯಲ್ಲಿ ಭಾಗಿಯಾಗಲು ಪಕ್ಷದ ಕೇಂದ್ರ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಅದರಂತೆ ಇಂದು ಮತ್ತು ನಾಳೆ (ಮಾ.17 ಮತ್ತು 18) ರಂದು ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಭಾಗಿಯಾಗಲಿದ್ದಾರೆ. ಈ ಸಂಬಂಧ 2 ದಿನ ರಾಜ್ಯ ಪ್ರವಾಸ ಕೈಗೊಳ್ಳುವ ನಡ್ಡಾ ಇಂದು (ಮಾ.17) ಮಾಧ್ಯಾಹ್ನ 1:30ಕ್ಕೆ ಬಳ್ಳಾರಿಯ (Bellary) ಸಂಡೂರು ತಾಲೂಕಿನ ತೋರಣಗಲ್​ನಲ್ಲಿರುವ ಜಿಂದಾಲ್ ಏರ್​ಪೋರ್ಟ್​​ಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ಗರ್ವದಿಂದ ನಾನೊಬ್ಬ ಹಿಂದೂ ಎಂದಾಗಲೇ ಭಾರತದಲ್ಲಿ ಸನಾತನ ಧರ್ಮಕ್ಕೆ ಉಳಿಗಾಲ: ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ

ಅಲ್ಲಿಂದ ಹೆಲಿಕಾಪ್ಟರ್​ ಮೂಲಕ ಮಧ್ಯಾಹ್ನ 2:15ಕ್ಕೆ ಚಿತ್ರದುರ್ಗದ ಮುರುಘಾಮಠ ಬಳಿಯ ಹೆಲಿಪ್ಯಾಡ್​​ಗೆ ಜೆ.ಪಿ ನಡ್ಡಾ ಆಗಮಿಸಲಿದ್ದಾರೆ. ಬಳಿಕ ರಸ್ತೆ ಮೂಲಕ ಚಳ್ಳಕೆರೆ ಪಟ್ಟಣಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಚಳ್ಳಕೆರೆ ಪಟ್ಟಣದಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಯಾತ್ರೆ ಅಂಗವಾಗಿ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಯಲಿದೆ. ನಂತರ ರಸ್ತೆ ಮೂಲಕ ಚಳ್ಳಕೆರೆಯಿಂದ ಮೊಳಕಾಲ್ಮೂರಿಗೆ ತೆರಳುವ ಅವರು ಮಧ್ಯಾಹ್ನ 4:30ಕ್ಕೆ ಮೊಳಕಾಲ್ಮೂರಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ.

ಮೊಳಕಾಲ್ಮೂಲ್ಲಿ ಸಂಜೆ 5.20ಕ್ಕೆ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಬಳಿ ಸಮಾವೇಶ ನಡೆಯಲಿದ್ದು, ಸಮಾವೇಶದ ಬಳಿಕ ಬಳ್ಳಾರಿಗೆ ತೆರಳಲಿದ್ದಾರೆ. ರಾತ್ರಿ ಬಳ್ಳಾರಿಯ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜೆ.ಇ ನಡ್ಡಾಗೆ ಆಂದ್ರಪ್ರದೇಶ ಬಿಜೆಪಿ ರಾಜ್ಯದ್ಯಕ್ಷ ಸೋಮು ವೀರರಾಜು, ಸಾರಿಗೆ ಸಚಿವ ಬಿ.ಶ್ರೀರಾಮುಲು ಜೊತೆಯಾಗಲಿದ್ದಾರೆ. ಆಂಧ್ರ ಬಿಜೆಪಿ ರಾಜ್ಯಾಧ್ಯಕ್ಷ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಕರ್ನಾಟಕ ಮತ್ತು ಆಂದ್ರ ಗಡಿ ಭಾಗದಲ್ಲಿ ವಾಸಿಸುವ ತೆಲಗು ಜನರ ಮತಗಳನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ.

ಇದನ್ನೂ ಓದಿ: ಲಿಂಗಾಯತ ಕುರಿತ ಹೇಳಿಕೆ ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯ ಸೃಷ್ಟಿ; ಸಿಟಿ ರವಿ ಸ್ಪಷ್ಟನೆ

ಇತ್ತೀಚೆಗೆ ಕಾಂಗ್ರೆಸ್​ ತೊರೆದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆಯಾಗಿದ್ದು, ಬಿಜೆಪಿ ನಾಯಕರು ಎಸ್.ತಿಪ್ಪೇಸ್ವಾಮಿಗೆ ಬಿಜೆಪಿ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಹಿನ್ನೆಲೆ ತಿಪ್ಪೇಸ್ವಾಮಿಗೆ ಇಂದು ಮೊಳಕಾಲ್ಮೂರು ಅಭ್ಯರ್ಥಿಯಾಗಿ ಬಿಂಬಿಸುವ ಸಾಧ್ಯತೆ ಇದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada