ಗರ್ವದಿಂದ ನಾನೊಬ್ಬ ಹಿಂದೂ ಎಂದಾಗಲೇ ಭಾರತದಲ್ಲಿ ಸನಾತನ ಧರ್ಮಕ್ಕೆ ಉಳಿಗಾಲ: ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ

ಇಡೀ ದೇಶದಲ್ಲಿಯೇ ಇನ್ನುಮುಂದೆ‌ ಸನಾತನ ಧರ್ಮವೇ ಉಳಿಯಲಿದೆ. ಶಿವಾಜಿ ಮಹಾರಾಜರ ಚಿಂತನೆಗಳು ಎಲ್ಲೆಲ್ಲೂ ಇರಲಿವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ. ಬೆಳಗಾವಿಯಲ್ಲಿ ಶಿವಚರಿತ್ರೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಈ ಹೇಳಿಕೆ ನೀಡಿದ್ದಾರೆ.

ಗರ್ವದಿಂದ ನಾನೊಬ್ಬ ಹಿಂದೂ ಎಂದಾಗಲೇ ಭಾರತದಲ್ಲಿ ಸನಾತನ ಧರ್ಮಕ್ಕೆ ಉಳಿಗಾಲ: ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾImage Credit source: ANI
Follow us
Rakesh Nayak Manchi
|

Updated on: Mar 16, 2023 | 10:25 PM

ಬೆಳಗಾವಿ: ನಾನೊಬ್ಬ ಮುಸಲ್ಮಾನ್ ಪ್ರತಿಯೊಬ್ಬ ಮುಸ್ಲಿಮರು ಹೇಳುತ್ತಾರೆ. ಆದೇ ರೀತಿ ಹಿಂದೂಗಳು ಕೂಡ ಗರ್ವದಿಂದ ನಾನೊಬ್ಬ ಹಿಂದೂ ಎಂದು ಹೇಳಿಕೊಳ್ಳಬೇಕು. ಆಗ ಮಾತ್ರ ಸನಾತನ ಧರ್ಮ ಭಾರತದಲ್ಲಿ ಉಳಿಯಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ (Assam CM Dr. Himanta Biswa Sarma) ಹೇಳಿದ್ದಾರೆ. ಜಿಲ್ಲೆಯಲ್ಲಿ ನಡೆದ ಶಿವಚರಿತ್ರೆ (Shivacharitre) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇನ್ನುಮುಂದೆ ಇಡೀ ದೇಶದಲ್ಲಿಯೇ ಸನಾತನ ಧರ್ಮವೇ ಉಳಿಯಲಿದೆ. ಶಿವಾಜಿ ಮಹಾರಾಜರ (Shivaji Maharaj) ಚಿಂತನೆಗಳು ಎಲ್ಲೆಲ್ಲೂ ಇರಲಿವೆ. ಈ ನೆಲದಲ್ಲಿ ಔರಂಗಜೇಬ್ ಅಂತಹವರನ್ನೂ ಭಾರತ ತಾಳ್ಮೆಯಿಂದ ಸಹಿಸಿದೆ. ಅವರನ್ನ ಎದುರಿಸಿ ನಿಲ್ಲುವಂತಹ ಶಿವಾಜಿ ಮಹಾರಾಜರಂತಹ ರಾಜರಿಗೂ ಈ ಭಾರತ ಮಾತೆ ಜನ್ಮ ನೀಡಿದೆ. ಪೂರ್ತಿ ಭಾರತ ಔರಂಗಜೇಬ್‌ನ ನಿಯಂತ್ರಣದಲ್ಲಿತ್ತು ಎಂದು ಕಮ್ಯುನಿಸ್ಟ್ ಇತಿಹಾಸಕಾರರು ಹೇಳುತ್ತಾರೆ. ಆದರೆ ಛತ್ರಪತಿ ಶಿವಾಜಿ ಮಹಾರಾಜರು ಔರಂಗ್‌ಜೇಬ್‌‌ಗಿಂತ ಇನ್ನೂರು ಪಟ್ಟು ಧೈರ್ಯಶಾಲಿಯಾಗಿದ್ದವರು. ಕಮ್ಯುನಿಸ್ಟರು ಬರೆದಿರುವ ಇತಿಹಾಸ ಸುಳ್ಳು ಎಂದು ಹೇಳಿದರು.

ನರೇಂದ್ರ ಮೋದಿ ನೇತೃತ್ವದಲ್ಲಿರುವುದು ನವ ಭಾರತ. ತನಗೆ ಬೇಕಾಗಿರುವ ವ್ಯಾಕ್ಸಿ‌ನ್‌ ಅನ್ನು ಭಾರತವೇ ನಿರ್ಮಾಣ ಮಾಡಿಕೊಳ್ಳುತ್ತದೆ. ಪಾಕಿಸ್ತಾನದ ನೆಲದಲ್ಲಿ ನುಗ್ಗಿ ಅವರನ್ನ ಬಗ್ಗು ಬಡಿಯುತ್ತದೆ. ನರೇಂದ್ರ ಮೋದಿ ನವಭಾರತದ ಕನಸು ಕಂಡಿದ್ದಾರೆ. ಈ ದೇಶದ ಬಡಜನರ ಸಂಕಷ್ಟಗಳಲ್ಲಿ ಭಾಗಿಯಾಗೋ ನವಭಾರತ ಆಗಿದೆ. ನಾವು ನೀವೆಲ್ಲರೂ ನರೇಂದ್ರ ಮೋದಿಯವರ ಜೊತೆ ನಿಲ್ಲಬೇಕಾಗಿದೆ ಎಂದರು.

ಮದರಸಾಗಳಿಂದ ನವಭಾರತವಾಗಲು ಸಾಧ್ಯವಿಲ್ಲ: ಅಸ್ಸಾಂ ಸಿಎಂ

ಮೋದಿ ನೇತೃತ್ವದಲ್ಲಿ ಭಾರತವು ವಿಶ್ವಗುರುವಾಗಿ ಹೊರಹೊಮ್ಮಲಿದೆ. ಮೋದಿ ಕಂಡಿರುವ ನವಭಾರತ ಕನಸು ನನಸಾಗಬೇಕೆಂದರೆ ನೀವೆಲ್ಲ ಅವರ ಕೈಗಳನ್ನು ಭದ್ರಪಡಿಸಬೇಕಾಗಿದೆ. ಈ ಹಿಂದೆ ದೆಹಲಿಯಲ್ಲಿ ನನ್ನನ್ನು ಸಂದರ್ಶನ ಮಾಡಿದ್ದರು. ಮದರಸಾಗಳನ್ನು ಭಾರತದಾದ್ಯಂತ ಬಂದ್ ಮಾಡಬೇಕೆಂದು ನಾನು ಹೇಳಿದ್ದೆ. ನವ ಭಾರತ ನಿರ್ಮಾಣವಾಗಬೇಕೆಂದರೆ ಶಾಲೆಗಳ, ಅಭಿವೃದ್ಧಿ ಪರವಾಗಿರುವ ಚಿಂತನೆಗಳ ಅವಶ್ಯಕತೆವಿದೆ. ಆದರೆ ಮದರಸಾಗಳಿಂದ ಭಾರತ ಎಂದಿಗೂ ನವ ಭಾರತವಾಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮದರಸಾಗಳ ಬಂದ್​ ಹೇಳಿಕೆಯನ್ನು ಸಮರ್ಧಿಸಿಕೊಂಡರು.

ಇದನ್ನೂ ಓದಿ: ಅಸ್ಸಾಂನಲ್ಲಿ ಬಾಲ್ಯವಿವಾಹದ ವಿರುದ್ಧ ಕ್ರಮ; ಬಂಧಿತರಾದವರಲ್ಲಿ ಹಿಂದೂ-ಮುಸ್ಲಿಮರೆಷ್ಟು ಎಂದು ಲೆಕ್ಕ ಹೇಳಿದ ಸಿಎಂ ಹಿಮಂತ ಬಿಸ್ವಾ ಶರ್ಮಾ

ನಾನು ಆಸ್ಸಾಂದಿಂದ ಬೆಳಗಾವಿಗೆ ಬಂದಿದ್ದೇನೆ. ಗೂಗಲ್ ಮ್ಯಾಪ್‌ನಲ್ಲಿ ನೀಡಿದಾಗ ಅಸ್ಸಾಂ ಹಾಗೂ ಬೆಳಗಾವಿ ನಡುವೆ ಸುಮಾರು 3 ಸಾವಿರ ಕಿ.ಮೀ ಅಂತರವಿದೆ. ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಶಿವಾಜಿ ಮಹರಾಜರು, ಮಹಾತ್ಮಗಾಂಧಿಯಂತ ಮಹಾನ್ ನಾಯಕರು ಭೇಟಿಕೊಟ್ಟ ಈ ಜಿಲ್ಲೆಗೆ ಬಂದಿದ್ದು ತೀರ್ಥಕ್ಷೇತ್ರಕ್ಕೆ ಬಂದ‌ ಅನುಭವವಾಗಿದೆ ಎಂದು ಹೇಳಿದ ಅಸ್ಸಾಂ ಸಿಎಂ, ನಮ್ಮ ಆಸ್ಸಾಂ ರಾಜ್ಯ ಬಹಳ ಸುಂದರವಾಗಿದೆ. ಬೆಳಗಾವಿ ಜನತೆಗೆ ನಮ್ಮ ರಾಜ್ಯಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡುತ್ತೇನೆ ಎಂದ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಸ್ಸಾಂನಲ್ಲಿ ಸುಮಾರು 40% ಕ್ಕಿಂತ ಅಧಿಕ ಮುಸ್ಲಿಮರಿದ್ದಾರೆ. ಅಲ್ಲಿ ಹಿಮಂತ ಬಿಸ್ವಾ ಮುಖ್ಯಮಂತ್ರಿಯಾಗಿರುವುದರಿಂದ ಅಲ್ಲಿ ಹಿಂದುಗಳು ನೆಮ್ಮದಿಯಿಂದ ಇದ್ದಾರೆ. ನಾನು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಹೆಚ್ಚು ಮಾತನಾಡುವುದಕ್ಕೆ ಕೆಲವರು ನೀವೆನೂ ಶಿವಾಜಿ ಮಹಾರಾಜರಿಗೆ ಹುಟ್ಟಿದವರೇ ಎಂದು ಪ್ರಶ್ನಿಸುತ್ತಾರೆ. ಹೌದು ನಾನು ಅವರ ಸಂತತಿ ಇದ್ದೇನೆ ಹೊರತಾಗಿ ಟಿಪ್ಪು ಸುಲ್ತಾನ್ ಸಂತತಿ ಅಲ್ಲವೆಂದು ತಿಳಿಸಿದ್ದಾಗಿ ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲ ಮದರಸಾಗಳು ಬಂದ್: ಯತ್ನಾಳ್

ಮುಸ್ಲಿಂರಿಗೆ ಭಾರತದಲ್ಲಿ ಇರಲು ಮನಸ್ಸಿಲ್ಲದಿದ್ದರೇ ಬೇಕಾದರೆ ಪಾಕಿಸ್ತಾನಕ್ಕೆ ಹೋಗಲಿ. ಅಲ್ಲಿ‌ ಪ್ರತಿಯೊಂದು ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಮಂದಿನ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ ಎಲ್ಲ ಮದರಸಾಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಯತ್ನಾಳ್ ಹೇಳಿದರು. ಅಲ್ಲದೆ, ಟಿಪ್ಪು ಸುಲ್ತಾನ್ ಬಹಳಷ್ಟು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ. ಹಿಂದೂಗಳನ್ನು ಮುಸ್ಲಿಂರನ್ನಾಗಿ ಪರಿವರ್ತನೆ ಮಾಡಿದ. ಆದರೆ ಶಿವಾಜಿ ಮಹಾರಾಜರು ಯಾವ ಮುಸ್ಲಿಂ ಮಹಿಳೆ ಮೇಲೆಯೂ ಅತ್ಯಾಚಾರ ಮಾಡಲಿಲ್ಲ. ಮುಸ್ಲಿಂ ಮಹಿಳೆಯರ ಸಹಾಯಕ್ಕೆ ಧಾವಿಸುವಂತಹ ಚರಿತ್ರೆ ಛತ್ರಪತಿ ಶಿವಾಜಿ ಮಹಾರಾಜರದ್ದಾಗಿತ್ತು ಎಂದರು.

ನಾವೆಲ್ಲ ಹಿಂದೂಗಳು, ನಾವು ಹಿಂದೂಗಳಾಗಿದ್ದರೆ ಮಾತ್ರ ಭಾರತ ಉಳಿಯಲು ಸಾಧ್ಯವಿದೆ. ಇಲ್ಲದಿದ್ದರೇ ಉರ್ದು ಕಲಿಯಬೇಕಾಗುತ್ತದೆ. ಹೀಗೆ ಆಗಬಾರದು ಎಂದರೆ ನಾವೆಲ್ಲ ಹಿಂದೂಗಳಾಗಿ ಇರಬೇಕು. ನಾವೆಲ್ಲ ಭಾಷೆ ಪ್ರಾಂತ್ಯಗಳೆಂದು ಜಗಳವಾಡುವುದು ಬೇಡ. ಮೊದಲು ಹಿಂದುಗಳಾಗಿ ಭಾರತಿಯರಾಗಿ ಇರೋಣ ಎಂದು ಶಾಸಕ ಯತ್ನಾಳ್ ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ