ರಾಹುಲ್ ಗಾಂಧಿ ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದ ಸಚಿವೆ ಸ್ಮೃತಿ ಇರಾನಿ

ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ದೇಶದ ವಿರುದ್ಧ ಮಾತನಾಡಿ ಅಪಮಾನ ಮಾಡಿದ್ದಾರೆ. ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಆಗ್ರಹಿಸಿದರು.

ರಾಹುಲ್ ಗಾಂಧಿ ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದ ಸಚಿವೆ ಸ್ಮೃತಿ ಇರಾನಿ
ಸಚಿವೆ ಸ್ಮೃತಿ ಇರಾನಿ
Follow us
|

Updated on: Mar 16, 2023 | 10:32 PM

ಗದಗ: ಸಂಸದ ರಾಹುಲ್ ಗಾಂಧಿ (Rahul Gandhi) ವಿದೇಶಕ್ಕೆ ಹೋಗಿ ಭಾರತ ದೇಶದ ವಿರುದ್ಧ ಮಾತನಾಡಿ ಅಪಮಾನ ಮಾಡಿದ್ದಾರೆ. ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ (Smriti Irani) ಆಗ್ರಹಿಸಿದರು. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತೇರಿನ ಮನೆ ಆವರಣದಲ್ಲಿ ಜರುಗಿದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಜನ್ಮ ಭೂಮಿ ಹೆಸರನ್ನು ಇಡೀ ವಿಶ್ವಕ್ಕೆ ಪಸರಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ವಿಜಯ ಸಂಕಲ್ಪ ಯಾತ್ರೆಯ ಮೂಲಕ ಜನತೆಗೆ ತಿಳಿಸುವ ಕಾರ್ಯಕ್ರಮ ಮಾಡುತ್ತಿರುವ ನಮಗೆ ಹೆಮ್ಮೆಯಾಗುತ್ತದೆ. ನಾವು ಎಲ್ಲೆ ಹೋದರು ನಮ್ಮ ಬಾಯಿಯಲ್ಲಿ ಬರುವ ಒಂದೇ ಒಂದು ಘೋಷನೆಯಂದರೆ ಭಾರತ ಮಾತಾ ಕೀ ಜೈ. ವಿಜಯ ಸಂಕಲ್ಪ ಯಾತ್ರೆಯು ಮಂಡಲ, ಜಿಲ್ಲಾ, ವಿಧಾನಸಭಾ ಮಾತ್ರ ಸೀಮಿತವಲ್ಲದೆ ಇಡೀ ದೇಶದ ಶಕ್ತಿಯಾಗಿದೆ ಮತ್ತು ರಾಜ್ಯದ ಜನತೆಯ ಸ್ವಾಭಿಮಾನದ ಸಂಕೇತವಾಗಿದೆ ಎಂದರು.

ಕಾಂಗ್ರೆಸ್​ಗೆ ಪ್ರಶ್ನೆ ಮಾಡಿದ ಸ್ಮೃತಿ ಇರಾನಿ 

ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಶ್ನೆ ಕೇಳುತ್ತೇನೆ ನಮ್ಮ ರಾಜ್ಯ ನೀತಿಯನ್ನು ವಿದೇಶಕ್ಕೆ ಹೋಗಿ ತೆಗೆಳುವ ಕೆಲಸ ಮಾಡುತ್ತಿರುವ ನಿಮ್ಮ ಸಂಸ್ಕಾರವೇ? ಸೋನಿಯಾಜಿಯವರೆ ಪ್ರತಿಯೊಬ್ಬ ತಾಯಿಯು ತನ್ನ ಮಗನಿಗೆ ಕಲಿಸುವ ಸಂಸ್ಕಾರ ಎಂದರೆ ಮನೆಯ ಜಗಳ ಮನೆಯಲ್ಲಿಯೇ ಇರಬೇಕು. ಅಣ್ಣ ತಮ್ಮಂದಿರ ಜಗಳ ಮನೆಯಲ್ಲಿಯೇ ಬಗೆ ಹರಿಸಿಕೊಳ್ಳಬೇಕು ಆದರೆ ನಿಮ್ಮ ಮಗ ರಾಹುಲ್ ಗಾಂಧಿ ವಿದೇಶದಲ್ಲಿ ಮಾತನಾಡುವುದು ಇದು ನಿಮ್ಮ ಸಂಸ್ಕಾರವೇ, ಇಂತಹ ಸಂಸ್ಕಾರವನ್ನು ನಿಮ್ಮ ಮಗನಿಗೆ ಕಲಿಸಿದ್ದಿರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: CT Ravi: ಲಿಂಗಾಯತ ಕುರಿತ ಹೇಳಿಕೆ ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯ ಸೃಷ್ಟಿ; ಸಿಟಿ ರವಿ ಸ್ಪಷ್ಟನೆ

ನಿಮ್ಮ ರಾಜಕೀಯ ಜೀವನದ ವಾರಂಟಿ ಮುಗಿದಿದೆ. ಈಗ ಜನತೆಗೆ ಗ್ಯಾರಂಟಿ ಕೊಡಲು ಹೋಗುತ್ತಿದ್ದೀರಿ. ಹಿಂದೂಸ್ಥಾನದ ಜನತೆಗೆ ಕೊಡುತ್ತಿರುವ ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ಎಂದರೇ ಒಂದು ಲೂಟಿ ಇನ್ನೊಂದು ಲಾಠಿ ಏಟು. ರೈತರು ಮಹದಾಯಿ ನೀರಿಗಾಗಿ ಹೋರಾಟ ಮಾಡುತ್ತಿರುವಾಗ ಸಿದ್ದರಾಮಯ್ಯ ಅವರು ಲಾಠಿ ಚಾರ್ಜ್ ಮಾಡಿರುವುದನ್ನು ಜನತೆ ಇನ್ನೂ ಮರೆತಿಲ್ಲ.

ಕಾಂಗ್ರೆಸ್ ನಾಯಕರು ದೇಶವನ್ನು ಲೂಟಿ ಮಾಡುತ್ತಿದ್ದಾರೆ

ಕರೋನಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಮನೆ ಮನೆಗೆ ಬಂದು ರೇಶನ್ ನೀಡಿದರಾ. ಆದರೆ ಬಿಜೆಪಿ ಸರಕಾರ ಇಂತಹ ಸಂದರ್ಭದಲ್ಲಿ ಮನೆಗೆ ಮನೆಗೆ ಹೋಗಿ ರೇಶನ್ ನೀಡಿದ್ದು, ಜನರ ಹೃದಯ ಮುಟ್ಟಿದೆ. ಜನರು ಹೃದಯ ಮುಟ್ಟಿ ಹೇಳಲಿ ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಇಂತಹ ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತಿದ್ದರಾ, ಇಲ್ಲಾ. ಕಾಂಗ್ರೆಸ್ ನಾಯಕರು ದೇಶವನ್ನು ಲೂಟಿ ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದರು ಎನ್ನುವದು ಮಗವಿನಿಂದ ಹಿಡಿದು ಹಿರಿಯ ಜೀವಿವರೆಗೂ ಬಾಯಿಯಲ್ಲಿ ಬರುತ್ತದೆ. ಆದರೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರನು ಹಿಂದೂಸ್ತಾನ ಜನತೆಗೆ ಸಹಾಯ ಮಾಡಿದ್ದಾನೆ.

ಇದನ್ನೂ ಓದಿ: ಚುನಾವಣೆಗೋಸ್ಕರ ರಾಜಕಾರಣ ಮಾಡುವವರು ಬೆಕಾದಷ್ಟಿದ್ದಾರೆ ಎಂದು ಸಿಎಂ ಬೊಮ್ಮಾಯಿ, ಇದಕ್ಕೆ ‘ಅವರು ಕಳ್ಳರು ಕಳ್ಳರು’ ಎಂದ ಸಭಿಕ

ಶ್ರೀರಾಮನ ಹೆಸರಿನ ಮೇಲೆ ಸಂಕಲ್ಪ

ಬಿಜೆಪಿ ಕಾರ್ಯಕರ್ತರಿಗೆ ಹೇಳುವದು ಒಂದೇ, ಕಾರ್ಯಕ್ರಮದ ಮೊದಲು ನಾನು ರಾಮನ ಹೆಸರು ತೆಗೆದುಕೊಂಡಿದ್ದೇನೆ. ಶ್ರೀರಾಮನ ಹೆಸರಿನ ಮೇಲೆ ಸಂಕಲ್ಪ ಮಾಡಿ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಮತ್ತು ಹಿಂದೆ ಮಾಡಿದ ದುರಾಡಳಿತವನ್ನು ಜನತೆ ತಿಳಿಸುವ ಕೆಲಸ ಮಾಡಬೇಕಾಗಿದೆ. ಕೇಂದ್ರ ಸರಕಾರ ಯೋಜನೆ ಮುದ್ರಾ ಯೋಜನೆಯಿಂದ ಸಾಕಷ್ಟು ಜನರು ತಮ್ಮ ಜೀವನವನ್ನು ಅರ್ಥಪೂರ್ಣವಾಗಿ ರೂಪಿಸಿಕೊಂಡಿದ್ದಾರೆ. ಕಿಸಾನ್ ಸಮ್ಮಾನ ಯೋಜನೆ ಸೇರಿದಂತೆ ಅನೇಕ ಜನ ಭರವಸೆಯ ಯೋಜನೆಯೊಂದಿಗೆ ದೇಶದ ಜನತೆಯ ಜೀವನ ರೂಪಿಸುವ ಕೆಲಸ ಹಾಗೂ ದೇಶದ ಅಭಿವೃದ್ದಿ ಕಾರ್ಯವನ್ನು ಯಾವುದಾದ್ರೂ ಸರಕಾರ ಮಾಡಿದ್ದರೆ ಅದು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಎಂದರು.

ಕಾಂಗ್ರೆಸ್​ ಪಕ್ಷಕ್ಕೆ ಗ್ಯಾರಂಟಿ ಇಲ್ಲ

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಡಬಲ್ ಇಂಜಿನ ಸರಕಾರ ಇರುವುದರಿಂದ ರಾಷ್ಟ್ರ ಹಾಗೂ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ ನೀಡುತ್ತಿದ್ದು, ಪಕ್ಷಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಗ್ಯಾರಂಟಿ ವಾರಂಟಿ ತೆಗೆದುಕೊಂಡು ಜನ ಪರದಾಡುವದು ಗ್ಯಾರಂಟಿ ಮೋದಿಜಿ ಅವರನ್ನು ಎಷ್ಟು ಬೈತೀರಿ ಇನ್ನು ಹೆಚ್ಚು ಬಿಜೆಪಿಗೆ ಬಲ ಬರಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅನೇಕ ಜನಪ್ರಿಯ ಯೋಜನೆಗಳನ್ನು ತಂದು ಕರ್ನಾಟಕವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್