AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಜೋರಾಯ್ತು ಪುತ್ಥಳಿ ಪಾಲಿಟಿಕ್ಸ್; ಮರಾಠಾ ಆಯ್ತು ಈಗ ಲಿಂಗಾಯತ ಮತಗಳ ಓಲೈಕೆಗೆ ಮುನ್ನುಡಿ ಬರೆದ ಬಿಜೆಪಿ ಸರ್ಕಾರ

ಚುನಾವಣೆ ಹೊಸ್ತಿಲಲ್ಲಿ ಮರಾಠಾ ಆಯ್ತು, ಈಗ ಲಿಂಗಾಯತ ಮತಗಳ ಓಲೈಕೆಗೆ ಸರ್ಕಾರ ಮುನ್ನುಡಿ ಬರೆದಿದೆ. ಮುಖ್ಯಮಂತ್ರಿಗಳು ಕುಂದಾನಗರಿಯಲ್ಲಿ ನೂತನ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಗೆ ಶಿಲಾನ್ಯಾಸ ನೇರವೇರಿಸಿದ್ದಾರೆ. ಈ ಮೂಲಕ ಲಿಂಗಾಯತ ಮತಗಳಿಗೆ ಗಾಳ ಹಾಕಿದ್ದಾರೆ.

ಬೆಳಗಾವಿಯಲ್ಲಿ ಜೋರಾಯ್ತು ಪುತ್ಥಳಿ ಪಾಲಿಟಿಕ್ಸ್; ಮರಾಠಾ ಆಯ್ತು ಈಗ ಲಿಂಗಾಯತ ಮತಗಳ ಓಲೈಕೆಗೆ ಮುನ್ನುಡಿ ಬರೆದ ಬಿಜೆಪಿ ಸರ್ಕಾರ
ಬೆಳಗಾವಿಯಲ್ಲಿ ಜೋರಾಯ್ತು ಪುತ್ಥಳಿ ಪಾಲಿಟಿಕ್ಸ್
ಕಿರಣ್ ಹನುಮಂತ್​ ಮಾದಾರ್
|

Updated on: Mar 17, 2023 | 12:18 PM

Share

ಬೆಳಗಾವಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸರ್ಕಾರಕ್ಕೆ ಮಹಾಪುರುಷರ ಬಗ್ಗೆ ಅಪಾರ ಪ್ರೀತಿ ಹುಟ್ಟಿಕೊಂಡಿದೆ. ಇತ್ತಿಚೆಗಷ್ಟೇ ಸಿಎಂ ಬೊಮ್ಮಾಯಿ ಬೆಳಗಾವಿ ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಮೂರ್ತಿ ಲೋಕಾರ್ಪಣೆ ಮಾಡಿ ಮರಾಠಾ ಮತಗಳನ್ನ ಸೆಳೆಯುವ ಪ್ರಯತ್ನ ಮಾಡಿದ್ದರು. ಇದರಿಂದ ಲಿಂಗಾಯತ ಸಮುದಾಯ ಸೇರಿ ಕನ್ನಡಿಗರ ಕೆಂಗಣ್ಣಿಗೆ ಸಿಎಂ ಬೋಮ್ಮಾಯಿ ಗುರಿಯಾಗಿದ್ದರು. ಈಗ ಆಗಿರುವ ಡ್ಯಾಮೆಜ್ ಕಂಟ್ರೋಲ್ ಮಾಡಿಕೊಳ್ಳುವ ಕಾರ್ಯವನ್ನ ಸಿಎಂ ಬೊಮ್ಮಾಯಿ ಮಾಡಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ 15 ಅಡಿ ಎತ್ತರದ 30 ಲಕ್ಷ ರೂ. ವೆಚ್ಚದ ನೂತನ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಶಿಲಾನ್ಯಾಸ ಮತ್ತು ಬಸವಾದಿ ಶರಣರ ಚರಿತ್ರೆ ಸಾರುವ ಯೋಜನೆಯ ಶಂಕುಸ್ಥಾಪನೆಯನ್ನ ಸಿಎಂ ನೆರವೇರಿಸಿದ್ದಾರೆ.

ಬಸವಣ್ಣನವರ ಮೂರ್ತಿ‌ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮಠಾಧೀಶರು, ಬಿಜೆಪಿ ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಈರಣ್ಣ ಕಡಾಡಿ ಸೇರಿದಂತೆ ಕಾಂಗ್ರೆಸ್ ಬಿಜೆಪಿ ನಾಯಕರು ಸಾಕ್ಷಿಯಾಗಿದ್ದರು. ಚುನಾವಣೆ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಸರ್ಕಾರ ಬೆಳಗಾವಿ ಜಿಲ್ಲೆಯ 18 ಮತಕ್ಷೇತ್ರದ ಲಿಂಗಾಯತ ಮತಗಳ ಓಲೈಕೆಗೆ ಕೈ ಹಾಕಿದ್ದಾರೆ. ವೀರಶೈವ ಲಿಂಗಾಯತ ಮಹಾಸಭಾದ ವರ್ಷಗಳ ಬೇಡಿಕೆಗೆ ಸಿಎಂ ಬೊಮ್ಮಾಯಿ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಸ್ಪಂದಿಸಿ ಸಾಕಾರಗೊಳಿಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿಯವರು ಬಸವಣ್ಣನವರ ವಿಚಾರ ಧಾರೆಗಳನ್ನ ಕೊಂಡಾಡಿದ್ದರು.

ಇದನ್ನೂ ಓದಿ:ಮಾ.20ರಂದು ಕರ್ನಾಟಕಕ್ಕೆ ರಾಹುಲ್​ ಗಾಂಧಿ, ಬೆಳಗಾವಿಯಿಂದಲೇ ಚುನಾವಣೆಗೆ ರಣ ಕಹಳೆ

ಲಿಂಗಾಯತ ಮತಗಳನ್ನ ಗಟ್ಟಿಗೊಳಿಸಲು ಸಿಎಂ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಅಸ್ತ್ರ ಪ್ರಯೋಗ ಇನ್ನು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಬರೀ ಈಗ ಬೆಳಗಾವಿ ಜಿಲ್ಲೆಗೆ ಸಿಮೀತಗೊಂಡಿಲ್ಲ. ಉತ್ತರ ಕರ್ನಾಟಕವನ್ನ ಗಮನದಲ್ಲಿಟ್ಟುಕೊಂಡು ಘಟಪ್ರಭಾ ನದಿ ತೀರದಲ್ಲಿ 108 ಅಡಿ ಎತ್ತರದ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಮುಂದಾಗಲಿದೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಸಿಎಂ ಮರಾಠಾ ಮತಗಳ ಜೊತೆಗೆ ಲಿಂಗಾಯತ ಮತಗಳನ್ನ ಗಟ್ಟಿಗೊಳಿಸಲು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಅಸ್ತ್ರವನ್ನ ಪ್ರಯೋಗ ಮಾಡಿದ್ದಾರೆ.

ಹೌದು ವಿಶ್ವ ಮಟ್ಟದ ಪ್ರವಾಸಿ ತಾಣ ಮಾಡಿ ಬಸವಣ್ಣನವರ ವಿಚಾರಧಾರೆಗಳನ್ನ ಸಾರುವ ಕೆಲಸ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಆದಷ್ಟು ಬೇಗ ನದಿ ತೀರದಲ್ಲಿ ಬಸವಣ್ಣನವರ ಮೂರ್ತಿ ಕುರಿಸಲು ಆದೇಶ ಕೂಡ ಮಾಡುತ್ತೇನೆ ಎಂದಿದ್ದಾರೆ. ಇದೇ ವೇಳೆ ಬೆಳಗಾವಿ ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಮೂರ್ತಿ ಶುದ್ಧೀಕರಣಕ್ಕೆ ನಾಡದ್ರೋಹಿ ಎಂಇಎಸ್ ಮುಂದಾಗಿದ್ದು, ಇದಕ್ಕೂ ಸಿಎಂ ಬೊಮ್ಮಾಯಿ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ. ಈಗಾಗಲೇ ಸರ್ಕಾರದಿಂದ ಸಿಎಂ ಮೂರ್ತಿ ಲೋಕಾರ್ಪಣೆ ಮಾಡಿದ್ದಾರೆ. ಅದನ್ನ ನಮ್ಮ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಎಂಇಎಸ್ ಪುಂಡಾಟಕ್ಕೆ ಬ್ರೇಕ್ ಹಾಕುವ ಮುನ್ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ಕಾಂಗ್ರೆಸ್​-ಬಿಜೆಪಿಯಿಂದ ಶಿವಾಜಿ ಪ್ರತಿಮೆ ಉದ್ಘಾಟನೆ, ಪ್ರತಿಮೆಯ ಶುದ್ಧೀಕರಣಕ್ಕೆ ಮುಂದಾದ ಎಂಇಎಸ್

ಒಟ್ಟಿನಲ್ಲಿ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಬಿಜೆಪಿ ನಾಯಕರಿಂದ ಮರಾಠಾ ಲಿಂಗಾಯತ ಮತಗಳ ಓಲೈಕೆಗೆ ಮಹಾಪುರುಷರ ಮೂರ್ತಿಯನ್ನೆ ಅಸ್ತ್ರವಾಗಿಸಿಕೊಳ್ಳುತ್ತಿದ್ದಾರೆ. ಇದು ಮತದಾರ ಪ್ರಭುಗಳ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ ಅನ್ನೋದನ್ನ ಚುನಾವಣೆ ರಿಸಲ್ಟ್ ಬರುವವರೆಗೂ ಕಾದುನೋಡಬೇಕಿದೆ.

ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ