ಕೊಂಡ ಹಾಯುವುದು ಗೊತ್ತು, ಆದರೆ ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆಯಲ್ಲಿ ದೇವರಿಗೆ ಉರಿಯುವ ಕೆಂಡವೇ ನೈವೇದ್ಯ! ಇದು ತಲೆ‌ತಲಾಂತರಗಳ ವಾಡಿಕೆ

kenda jatre: ಇಲ್ಲಿ ದೇವರಿಗೆ ಉರಿಯುವ ಕೆಂಡವೇ ನೈವೇದ್ಯ. ಕೆಂಡದ ರಾಶಿಯಿಂದ ಬರಿಗೈಲಿ ಕೊಳಗದಲ್ಲಿ ಅಳೆದು ಜೋಳಿಗೆಗೆ ಸುರಿದು ದೇವರಿಗೆ ನೈವೇದ್ಯೆ ಮಾಡಲಾಗುತ್ತೆ. ನಿಜಕ್ಕೂ ಮೈನವಿರೇಳಿಸುವ ಈ ಜಾತ್ರೆ ಎಲ್ಲಿ ನಡೆಯುವುದು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ

ಕೊಂಡ ಹಾಯುವುದು ಗೊತ್ತು, ಆದರೆ ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆಯಲ್ಲಿ ದೇವರಿಗೆ ಉರಿಯುವ ಕೆಂಡವೇ ನೈವೇದ್ಯ! ಇದು ತಲೆ‌ತಲಾಂತರಗಳ ವಾಡಿಕೆ
ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆಯಲ್ಲಿ ದೇವರಿಗೆ ಉರಿಯುವ ಕೆಂಡವೇ ನೈವೇದ್ಯ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 07, 2023 | 5:21 PM

ಚಾಮರಾಜನಗರ (Chamarajanagar) ತಾಲೂಕು ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆ ನಿಜಕ್ಕೂ ಮೈ ನವಿರೇಳಿಸುತ್ತದೆ. ಸಾಮಾನ್ಯವಾಗಿ ಜಾತ್ರೆಗಳಲ್ಲಿ ಹರಕೆ ಹೊತ್ತ ಭಕ್ತರು ಕೊಂಡ ಹಾಯುವುದನ್ನು (konda jatre) ನೋಡಿದ್ದೇವೆ. ಆದರೆ ಬಾಣಹಳ್ಳಿಯಲ್ಲಿ ನಡೆಯುವ ಸತ್ಯವತಿ ಜಾತ್ರೆಯಲ್ಲಿ ಉರಿಯುವ ಕೆಂಡವನ್ನೇ ದೇವರಿಗೆ ನೈವೇದ್ಯ ಮಾಡಲಾಗುತ್ತೆ. ಉರಿಯುವ ಕೆಂಡವನ್ನು ಬರಿಗೈಲಿ ತುಂಬಿ ಕೊಳಗದಲ್ಲಿ ಅಳೆದು ಬಟ್ಟೆಯ ಜೋಳಿಗೆಗೆ ಸುರಿಯಲಾಗುತ್ತೆ. ಕೆಂಡ ತುಂಬಿದ ಜೋಳಿಗೆಯನ್ನು ಗರ್ಭಗುಡಿಗೆ ಕೊಂಡೊಯ್ದು ಬಾಳೆ ಎಲೆ ಮೇಲೆ ಕೆಂಡ ಸುರಿದು ಸತ್ಯವತಿ ದೇವಿಗೆ ನೈವೇದ್ಯ ಮಾಡಲಾಗುತ್ತೆ. ಬೆಳಿಗ್ಗೆಯೇ ಕಾಡಿನಿಂದ ಹಸಿ ಮರ ಕಡಿದು ತಂದು ಸತ್ಯವತಿ ದೇವಸ್ಥಾನದ ಮುಂದೆ ರಾಶಿ ಮಾಡಿ ಕೊಂಡ ಸಿದ್ದಪಡಿಸಲಾಗುತ್ತೆ‌. ಸತ್ಯವತಿ ದೇವಸ್ಥಾನದ ಅರ್ಚಕ ಸುಬ್ಬಪ್ಪ ಅವರು ಬೆಳಿಗ್ಗೆಯಿಂದ ಉಪವಾಸವಿದ್ದು ಬಳಿಕ ಕೊಂಡ ಹಾಕುವ ಸ್ಥಳಕ್ಕೆಸತ್ತಿಗೆ ಸೂರಪಾನಿ ಗಳೊಂದಿಗೆ ಮೆರವಣಿಗೆಯಲ್ಲಿ ಬಂದು ಕೆಂಡದ ರಾಶಿಗೆ ಬರಿಗೈ ಹಾಕಿ ಕೆಂಡವನ್ನು ಕೊಳಗದಲ್ಲಿ ಅಳೆದ ಜೋಳಿಗೆಗೆ ತುಂಬುತ್ತಾರೆ ( kenda jatre).

ಬರಿಗೈಯಲ್ಲಿ ಕೆಂಡ ತುಂಬಿದರು ಅರ್ಚಕನ ಕೈ ಸುಡುವುದಿಲ್ಲವಂತೆ! ಜೋಳಿಗೆ ಸುಟ್ಟು ಹೋಗುವುದಿಲ್ಲವಂತೆ.ಈ ಜಾತ್ರೆ ತಲೆ‌ತಲಾಂತರಗಳಿಂದಲೂ ನಡೆದುಕೊಂಡು ಬಂದಿದೆಯಂತೆ. ಈ ಜಾತ್ರೆ ಹಾಗೂ ಇಲ್ಲಿನ ದೇವಿಯ ಶಕ್ತಿ ಬಗ್ಗೆ ಎಲ್ಲರಿಗೂ ನಂಬಿಕೆ ಇದೆ. ಇದರಿಂದ ಇದೆಲ್ಲಾ ಸತ್ಯವತಿ ದೇವಿಯ ಪವಾಡ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.

ಇದನ್ನೂ ಓದಿ:

ಕಲಬುರಗಿ: “ಸಣ್ಣ ರೈತರಿಗೆ ಕೃಷಿ ಉಪಕರಣಗಳ ಬಳಕೆ” ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ

ದೇವಸ್ಥಾನಕ್ಕೆ ಪ್ರವೇಶ ಮಾಡುವ ವಿವಾದದ ಹಿನ್ನೆಲೆ ಹಾಗೂ ಕೊರೊನಾ ಕಾರಣದಿಂದ ಸತ್ಯವತಿ ಜಾತ್ರೆ ಕಳೆದ ಐದು ವರ್ಷಗಳಿಂದ ನಿಂತು ಹೋಗಿತ್ತು. ಇದೀಗ ಐದು ವರ್ಷಗಳ ಬಳಿಕ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ಆಗಮಿಸಿ ಕೊಳಗಕ್ಕೆ ಕೆಂಡವನ್ನು ಬರಿಗೈಲಿ ಅಳೆದು ತುಂಬುವ ಮೈನವಿರೇಳಿಸುವ ದೃಶ್ಯ ಕಣ್ತುಂಬಿಕೊಂಡರು.

ವರದಿ: ದಿಲೀಪ್ ಚೌಡಹಳ್ಳಿ, ಟಿವಿ9, ಚಾಮರಾಜನಗರ

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:17 pm, Tue, 7 March 23

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು