ಮಾದಪ್ಪನ ಹುಂಡಿಗೆ ದಾಖಲೆ ಪ್ರಮಾಣದಲ್ಲಿ ಹರಿದುಬಂದ ಕಾಣಿಕೆ, ಎಷ್ಟು ಗೊತ್ತೇ?
ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ(Male Mahadeshwara Betta) ಮಹದೇಶ್ವರನ ಹುಂಡಿಯಲ್ಲಿ ದಾಖಲೆಯ ಪ್ರಮಾಣದ ಹಣ ಸಂಗ್ರಹವಾಗಿದೆ. ಕಳೆದ 26 ದಿನಗಳಲ್ಲಿ ಬರೊಬ್ಬರಿ 2 ಕೋಟಿ 86 ಲಕ್ಷ ರೂಪಾಯಿಗೂ ಹೆಚ್ಚು ನಗದು ಸಂಗ್ರಹವಾಗಿದೆ.
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ(Male Mahadeshwara Betta) ಮಹದೇಶ್ವರನ ಹುಂಡಿಯಲ್ಲಿ ದಾಖಲೆಯ ಪ್ರಮಾಣದ ಹಣ ಸಂಗ್ರಹವಾಗಿದೆ. ಹೌದು ಕಳೆದ 26 ದಿನಗಳ ಅವಧಿಯಲ್ಲಿ ಬರೊಬ್ಬರಿ 2 ಕೋಟಿ 86 ಲಕ್ಷ ರೂಪಾಯಿಗೂ ಹೆಚ್ಚು ನಗದು ಸಂಗ್ರಹವಾಗಿದ್ದು, ಇದರ ಜೊತೆಗೆ 90 ಗ್ರಾಂ ಚಿನ್ನ, 2 ಕೆಜಿ 825 ಗ್ರಾಂ ಬೆಳ್ಳಿ ಆಭರಣಗಳನ್ನು ಭಕ್ತರು ಅರ್ಪಿಸಿದ್ದಾರೆ. ನಿನ್ನೆ ತಡರಾತ್ರಿವರೆಗೂ ಹುಂಡಿಯ ಎಣಿಕೆ ಮಾಡಲಾಗಿದ್ದು, ದಾಖಲೆಯ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.
ಶಿವರಾತ್ರಿ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ
ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಇತ್ತಿಚೇಗೆ ನಡೆದ ಶಿವರಾತ್ರಿ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದು ಬಂದಿತ್ತು. ಮಲೆ ಮಾದಪ್ಪನಿಗೆ ಹರಕೆ ಹೊತ್ತ ಸಾವಿರಾರು ಭಕ್ತರು ಶಿವರಾತ್ರಿ ಹಬ್ಬಕ್ಕೆ ನಾಲ್ಕು ದಿನಗಳ ಮುನ್ನ ಬೆಂಗಳೂರು, ಕನಕಪುರ, ನೆಲಮಂಗಲ, ಮಾಗಡಿ, ಸಾತನೂರು, ಹಾರೋಹಳ್ಳಿ, ರಾಮನಗರ ಕಡೆಯಿಂದ ಕಾಲ್ನಡಿಗೆಯಲ್ಲಿ ಬಸವನ ಕಡಲು ಮೂಲಕ ಕಾವೇರಿ ನದಿ ದಾಟಿಕೊಂಡು (ಸಂಗಮ ನದಿ) ದುರ್ಗಮ ಕಾವೇರಿ ವನ್ಯಧಾಮದಲ್ಲಿ ಬರಿಗಾಲಿನಲ್ಲಿ ನಡೆದು ಬಂದಿದ್ದರು.
ಇದನ್ನೂ ಓದಿ:Chamarajanagara: ಶೀಘ್ರದಲ್ಲಿಯೇ ಮಲೈಮಹದೇಶ್ವರ ಬೆಟ್ಟದ ಮಾದಪ್ಪನಿಗೆ 530 ಕೆ.ಜಿ ತೂಕದ ಬೆಳ್ಳಿ ರಥ
108 ಅಡಿ ಎತ್ತರದ ಮಹದೇಶ್ವರ ಪ್ರತಿಮೆ
ಇನ್ನು ಇತ್ತೀಚಿನ ದಿನಗಳಲ್ಲಿ ಮಲೈಮಹದೇಶ್ವರ ಸನ್ನಿಧಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿವೆ. ಅದರಲ್ಲಿ ಪ್ರಮುಖವಾಗಿ ಭಕ್ತರ ಸೆಳೆಯಲು ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನ ಬಳಿ 108 ಅಡಿ ಎತ್ತರದ ಶ್ರೀ ಮಹದೇಶ್ವರ ಪ್ರತಿಮೆ ನಿರ್ಮಾಣವಾಗುತ್ತಿದೆ. ಇದರ ಅಭಿವೃದ್ಧಿ ಕೆಲಸ ಕೂಡ ನಡೆಯುತ್ತಿದ್ದು, ಇನ್ನೇನು ಉದ್ಘಾಟನೆ ಹಂತ ತಲುಪಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಮಲೈಮಹದೇಶ್ವರ ಸನ್ನಿಧಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿವೆ. ಅದರಲ್ಲಿ ಪ್ರಮುಖವಾಗಿ ಭಕ್ತರ ಸೆಳೆಯಲು ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನ ಬಳಿ 108 ಅಡಿ ಎತ್ತರದ ಶ್ರೀ ಮಹದೇಶ್ವರ ಪ್ರತಿಮೆ ನಿರ್ಮಾಣವಾಗುತ್ತಿದೆ. ಇದರ ಅಭಿವೃದ್ಧಿ ಕೆಲಸ ಕೂಡ ನಡೆಯುತ್ತಿದ್ದು, ಇನ್ನೇನು ಉದ್ಘಾಟನೆ ಹಂತ ತಲುಪಿದೆ.
ಇನ್ನು ನಿರ್ಮಾಣವಾಗುತ್ತಿರುವ ಪ್ರತಿಮೆಯಿಂದ ಸ್ಥಳೀಯ ರೈತರು ಅದು ತಮ್ಮ ಜಾಗ, ರಸ್ತೆಗಾಗಿ ಭೂಮಿ ಬಳಸಿಕೊಳ್ಳುತ್ತಿರುವುದರಿಂದ ತಮಗೆ ಅನ್ಯಾಯ ಆಗುತ್ತಿದೆ ಎಂದಿದ್ದಾರೆ. ಆದರೆ ಆ ಪ್ರದೇಶ ಸರ್ಕಾರಕ್ಕೆ ಸೇರಿದ್ದು, ಹಲವು ವರ್ಷಗಳಿಂದ ಇಲ್ಲಿನ ಸ್ಥಳೀಯರು ಅದನ್ನು ಉಳುಮೆ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ‘ಸುತ್ತಲಿನ ಐದು ಕುಟುಂಬಸ್ಥರು ಈ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಅದು ಸರ್ಕಾರಿ ಜಮೀನು ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಸ್. ಕಾತ್ಯಾಯಿನಿ ದೇವಿ ಹೇಳುತ್ತಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Wed, 8 March 23