ವಿಜಯೇಂದ್ರ ನನ್ನ ಸ್ನೇಹಿತ‌, ಯಡಿಯೂರಪ್ಪ ಬಗ್ಗೆ ಗೌರವವಿದೆ – ಆದರೆ ಬಿಜೆಪಿ ಒಡೆದ ಮಡಿಕೆಯಾಗಿದೆ: ಕೃಷಿ ಸಚಿವ ಚಲುವರಾಯಸ್ವಾಮಿ ವಿಶ್ಲೇಷಣೆ

| Updated By: ಸಾಧು ಶ್ರೀನಾಥ್​

Updated on: Nov 12, 2023 | 12:15 PM

ಬಿಜೆಪಿ ಪಕ್ಷದ ಮಡಿಕೆ ಒಡೆದು ಹೋಗಿದೆ. ಒಡೆದ ಮಡಿಕೆಗೆ ಎಷ್ಟು ನೀರು ತುಂಬಿದರೂ ನೀರು ನಿಲ್ಲಲ್ಲ. ಮುಂದಿನ ಲೋಕಸಭಾ ಕ್ಷೇತ್ರದಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ ಎಂಬ ಬಿಜೆಪಿ ವಿಶ್ವಾಸ ವಿಚಾರವಾಗಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಈ ಸಲ ಬಿಜೆಪಿ ಸಂಸದರು ರಾಜ್ಯದಲ್ಲಿ 10 ಕ್ಕಿಂತ ಕಡಿಮೆ ಆಗ್ತಾರೆ ಎಂದು ಒಂದೇ ಸಾಲಿನಲ್ಲಿ ಹೇಳಿದರು.

ವಿಜಯೇಂದ್ರ ನನ್ನ ಸ್ನೇಹಿತ‌, ಯಡಿಯೂರಪ್ಪ ಬಗ್ಗೆ ಗೌರವವಿದೆ - ಆದರೆ ಬಿಜೆಪಿ ಒಡೆದ ಮಡಿಕೆಯಾಗಿದೆ: ಕೃಷಿ ಸಚಿವ ಚಲುವರಾಯಸ್ವಾಮಿ ವಿಶ್ಲೇಷಣೆ
ಬಿಜೆಪಿ ಒಡೆದ ಮಡಿಕೆಯಾಗಿದೆ: ಕೃಷಿ ಸಚಿವ ಚಲುವರಾಯಸ್ವಾಮಿ ವಿಶ್ಲೇಷಣೆ
Follow us on

ಬಿಜೆಪಿ ಪಕ್ಷದ ಮಡಿಕೆ ಒಡೆದು ಹೋಗಿದೆ. ಒಡೆದ ಮಡಿಕೆಗೆ ಎಷ್ಟು ನೀರು ತುಂಬಿದರೂ ನೀರು ನಿಲ್ಲಲ್ಲ. ವಿಜಯೇಂದ್ರ (BY Vijayendra) ಒಳ್ಳೆಯವನು, ಅವನ ಬಗ್ಗೆ ನನಗೆ ಗೌರವವಿದೆ, ವಿಜಯೇಂದ್ರ ನನ್ನ ಸ್ನೇಹಿತ‌. ಯಡಿಯೂರಪ್ಪನವರ‌ ಬಗ್ಗೆಯೂ ಗೌರವವಿದೆ. ಯಡಿಯೂರಪ್ಪ ಅವರನ್ನು ತೆಗೆದು ಹಾಕಿದ್ರಲ್ಲ ಅವತ್ತೇ ಬಿಜೆಪಿ (Karnataka BJP) ಮಡಿಕೆ ಒಡೆದು ಹೋಯ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕ ವಿಚಾರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ (Agriculture Minister N Chaluvarayaswamy) ನೀಡಿದ್ದಾರೆ.

ಮಂಡ್ಯ ಜಿಲ್ಲೆ (Mandya) ನಾಗಮಂಗಲದಲ್ಲಿ ಮಾತನಾಡಿದ ಅವರು, ವಿಜಯೇಂದ್ರರನ್ನ ಮಂತ್ರಿ ಮಾಡಿ ಅಂದಾಗ ಮಾಡ್ಲಿಲ್ಲ. ಪರಿಸ್ಥಿತಿ ಗೊತ್ತಾಗಿ ಇವಾಗ ಅದನ್ನ ಪ್ಯಾಚಪ್​ ಮಾಡೋಕೆ ಹೋಗಿದ್ದಾರೆ. ಹಿಂದೆ ಯಡಿಯೂರಪ್ಪ ಇದ್ದಾಗ ಬಿಜೆಪಿಗೆ ಇದ್ದ ಶಕ್ತಿ ಯಾವುದೇ ಕಾರಣಕ್ಕೂ ಈಗ ಆಗಲ್ಲ.ಯಡಿಯೂರಪ್ಪ ಇದ್ದಾಗಲೇ 115 ದಾಟಿಲ್ಲ. ಇವಾಗ ಆ ಶಕ್ತಿ ಬರೋದೆ ಇಲ್ಲ ಎಂದು ಹೇಳಿದರು.

ಬಿಜೆಪಿಯಿಂದ ವಂಶ ರಾಜಕಾರಣ ವಿಚಾರವಾಗಿ ಮಾತನಾಡಿ, ವಂಶ ನಾದರೂ ಮಾಡ್ಲಿ, ಇನ್ನೊಂದು ಮಾಡಿಕೊಳ್ಳಲಿ. ನಾನು ಮಾತನಾಡಲ್ಲ. ಎಲ್ಲ ಪಕ್ಷದಲ್ಲಿಯೂ ಕುಟುಂಬ ರಾಜಕಾರಣ ಇದ್ದದ್ದೆ. ಕುಮಾರಸ್ವಾಮಿ ವಂಶ ರಾಜಕಾರಣ ಮಾಡ್ತಿಲ್ವ. ಎಲ್ಲ ಪಾರ್ಟಿಯಲ್ಲಿ ವಂಶ ರಾಜಕಾರಣ ಇರುತ್ತೆ. ಬಿಜೆಪಿ ಪಾರ್ಲಿಮೆಂಟ್ ಎಲೆಕ್ಷನ್ ನಲ್ಲಿ ರೀಚ್ ಆಗೋಕೆ ಆಗಲ್ಲ. ಕುಮಾರಸ್ವಾಮಿಯನ್ನ ಸೇರಿಸಿಕೊಳ್ಳೋಕೆ ಹೇಗೆ ಓಡಾಡ್ತಿದ್ದಾರೆ, ಹಾಗೆ ಇವರನ್ನ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಎಂದು ಕಟಕಿಯಾಡಿದರು.

ಮುಂದಿನ ಲೋಕಸಭಾ ಕ್ಷೇತ್ರದಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ ಎಂಬ ಬಿಜೆಪಿ ವಿಶ್ವಾಸ ವಿಚಾರವಾಗಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಈ ಸಲ ಬಿಜೆಪಿ ಸಂಸದರು ರಾಜ್ಯದಲ್ಲಿ 10 ಕ್ಕಿಂತ ಕಡಿಮೆ ಆಗ್ತಾರೆ ಎಂದು ಒಂದೇ ಸಾಲಿನಲ್ಲಿ ಹೇಳಿದರು. ಜೆಡಿಎಸ್‌ ಹಾಗೂ ಬಿಜೆಪಿಯಿಂದ ಬರ ಅಧ್ಯಯನ ವಿಚಾರವಾಗಿ ಮಾತನಾಡಿ, ಬರ ಅಧ್ಯಯನ ರಾಜಕೀಯ, ನಾಟಕೀಯ. ವಿರೋಧ ಪಕ್ಷದ ನಾಯಕರನ್ನೇ ಇನ್ನೂ ಮಾಡಿಲ್ಲ. ಕಷ್ಟಪಟ್ಟು ನಿನ್ನೆಯಷ್ಟೆ ರಾಜ್ಯಾಧ್ಯಕ್ಷರ ನೇಮಕ ಮಾಡಿದ್ದಾರೆ. ಮೊದಲು ವಿರೋಧ ಪಕ್ಷದ ನಾಯಕನನ್ನ ಮಾಡಿ. ಆಮೇಲೆ ನಾವು ಕೊಟ್ಟ ಕಾರ್ಯಕ್ರಮದ ರೈತರಿಗೆ ತಲುಪಿದೆಯಾ ಇಲ್ವಾ ಅಂತಾ ಅಧ್ಯಯನ ಮಾಡಿ ಎಂದರು.

ಕಾವೇರಿ ಸಮಸ್ಯೆ, ಬರ ವಿಚಾರದಲ್ಲಿ ಮಾತನಾಡಲು ಕೇಂದ್ರ ಅವಕಾಶ ಕೊಡಲಿಲ್ಲ. ಬಿಜೆಪಿ ಜೆಡಿಎಸ್‌‌ನವರಿಗೆ ಜನರ ಬಳಿ ಹೋಗಿ ಕೇಳಲು ಯೋಗ್ಯತೆ ಇದ್ಯಾ? ಕಳೆದ ಮೂರು ತಿಂಗಳ ನರೇಗಾ ಕೂಲಿ ಕೊಟ್ಟಿರಲಿಲ್ಲ. ಯಾವ ಯೋಗ್ಯತೆ ಇಟ್ಟುಕೊಂಟು ಅಧ್ಯಯನ ಮಾಡ್ತಿದ್ದಾರೆ? ಅವರ ಕೈಲಿ ಏನಿದೆ ಎಂದು ತನಿಖೆ ಮಾಡ್ತಾರೆ? ನಾವು ಯಾವ ಕಾರ್ಯಕ್ರಮವನ್ನೂ ನಿಲ್ಲಿಸಿಲ್ಲ. ಕುಡಿಯುವ ನೀರು, ಬರ ಪರಿಹಾರ ಯಾವ ಕಾರ್ಯಕ್ರಮದಿಂದಲೂ ಹಿಂಜರಿದಿಲ್ಲ. ಕೇಂದ್ರ ಸರ್ಕಾರ ಕೊಡದಿದ್ದರೂ ರಾಜ್ಯ ಸರ್ಕಾರ ಜವಾಬ್ದಾರಿ ಮೆರೆದಿದೆ.

ಕೇಂದ್ರ ಸರ್ಕಾರ ಪುಕ್ಸಟ್ಟೆ ಕೊಡಲ್ಲ. ನಮ್ಮ ರಾಜ್ಯದಿಂದ ಪ್ರತಿ ವರ್ಷ 3.5-4 ಲಕ್ಷ ಕೋಟಿ ತೆರಿಗೆ ಹೋಗುತ್ತದೆ. ಅವರು 50 ಸಾವಿರ ಕೋಟಿಯನ್ನು ಕೊಡುತ್ತಿಲ್ಲ. ಬಿಜೆಪಿ ಜೆಡಿಎಸ್‌ ಬರ ಅಧ್ಯಯನ ಬರೀ ರಾಜಕೀಯ ತೀಟೆ. ಅಧ್ಯಯನ ಮಾಡಿ ಯಾರಿಗೆ ವರದಿ ಸಲ್ಲಿಸುತ್ತಾರೋ ಗೊತ್ತಿಲ್ಲ. ಜನರಿಂದ ಆಯ್ಕೆಯಾದ ಸರ್ಕಾರ‌ ನಾವು ವರದಿ ಕೊಟ್ಟಿದ್ದೇವೆ. ಅವರು ಕೇಂದ್ರಕ್ಕೆ ಒತ್ತಡ ತರಬಹುದಿತ್ತು. ನಮ್ಮ ರಾಜ್ಯದ ಬೇಡಿಕೆಗೆ ಸ್ಪಂದಿಸಿ ಎಂದು ಕೇಳಬಹುದಿತ್ತು. ಅವ್ರನ್ನ ಕೇಂದ್ರ ಸರ್ಕಾರ ಬರ ಅಧ್ಯಯನಕ್ಕೆ ನೇಮಕ ಮಾಡಿದ್ಯ? ನೀವು ಒಂದು ವರದಿ ಕೊಡಿ ಎಂದು ಹೇಳಿದೆಯಾ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.