ನಾವು ಘೋಷಿಸಿದ 5 ಗ್ಯಾರಂಟಿ ಜಾರಿಗೊಳಿಸುವುದು ನಿಶ್ಚಿತ: ಟ್ವೀಟ್ ಮೂಲಕ ಬಿಜೆಪಿಗೆ ರಾಜ್ಯ ಕಾಂಗ್ರೆಸ್​​ ಟಾಂಗ್​

|

Updated on: May 25, 2023 | 4:20 PM

ನಾವು ಘೋಷಿಸಿದ 5 ಗ್ಯಾರಂಟಿ ಜಾರಿಗೊಳಿಸುವುದು ನಿಶ್ಚಿತ. ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ ಎಂದು ಟ್ವೀಟ್ ಮೂಲಕ ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಘಟಕ ಟಾಂಗ್ ನೀಡಿದೆ.​

ನಾವು ಘೋಷಿಸಿದ 5 ಗ್ಯಾರಂಟಿ ಜಾರಿಗೊಳಿಸುವುದು ನಿಶ್ಚಿತ: ಟ್ವೀಟ್ ಮೂಲಕ ಬಿಜೆಪಿಗೆ ರಾಜ್ಯ ಕಾಂಗ್ರೆಸ್​​ ಟಾಂಗ್​
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ (Congress guarantee) ಬಗ್ಗೆ ಈಗ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕರು ಗ್ಯಾರಂಟಿಗಳ ಕುರಿತಾಗಿ ಟೀಕೆಗಳನ್ನು ಸಹ ಮಾಡುತ್ತಿದ್ದಾರೆ. ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳಿಂದ ರಾಜ್ಯದ ವಾತಾವರಣವನ್ನು ಹಾಳುಮಾಡುತ್ತಿದೆ ಎಂದು ಕಿಡಕಾರಿದ್ದು, ಸದ್ಯ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್​ ಮಾಡಿದೆ. ನಾವು ಘೋಷಿಸಿದ 5 ಗ್ಯಾರಂಟಿ ಜಾರಿಗೊಳಿಸುವುದು ನಿಶ್ಚಿತ ಎಂದು ಹೇಳುವ ಮೂಲಕ ಬಿಜೆಪಿಗೆ ಟಾಂಗ್​ ನೀಡಿದೆ. ನಾವು ನಮ್ಮ ಜನರ ಹಿತ ಕಾಪಾಡುವ ಬದ್ಧತೆ ಹೊಂದಿದ್ದೇವೆ. ಬಿಜೆಪಿ ನಾಯಕರಿಗೆ ಕರ್ನಾಟಕದ ಜನ ತಪರಾಕಿ ನೀಡಿದ್ದಾರೆ.

ಕನ್ನಡಿಗರು ನೀಡಿದ ತಪರಾಕಿಗೆ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯಲಿ. ಹಾಗೆಯೇ ವಿಪಕ್ಷ ನಾಯಕನ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಹುಡುಕಿಕೊಳ್ಳಲಿ ಎಂದು ಟ್ವೀಟ್ ಮೂಲಕ ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಘಟಕ ಟಾಂಗ್​ ನೀಡಿದೆ.​

ಇದನ್ನೂ ಓದಿ: ಜನರು ಗ್ಯಾರಂಟಿಗಳಿಗೆ ಕಾಯುತ್ತಿದ್ದರೆ, ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ದೆಹಲಿ ಸುತ್ತುತ್ತಿದ್ದಾರೆ; ಬಿಜೆಪಿ ಕಿಡಿ

ಬಿಜೆಪಿಗೆ ಕಾಂಗ್ರೆಸ್​ ಸಾಲು ಸಾಲು ಪ್ರಶ್ನೆ

ಚುನಾವಣೆಯಲ್ಲಿ ಹೀನಾಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡುವವರು ಬಿಜೆಪಿಯಲ್ಲಿ ಯಾರೂ ಇಲ್ಲವೆ? ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹೊಣೆ ಯಾರದ್ದು? ಅಮಿತ್ ಶಾ ಅವರದ್ದೋ? ಬಸವರಾಜ ಬೊಮ್ಮಾಯಿ ಅವರದ್ದೋ? ನರೇಂದ್ರ ಮೋದಿಯವರದ್ದೋ? ನಳಿನ್ ಕುಮಾರ್ ಕಟೀಲುರದ್ದೋ? ಬಿಜೆಪಿ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡುವವರು ಯಾರು ಎಂದು ಬಿಜೆಪಿಗೆ ಕಾಂಗ್ರೆಸ್​ ಸಾಲು ಸಾಲು ಪ್ರಶ್ನೆ ಮಾಡಿದೆ.

ಇದನ್ನೂ ಓದಿ: Congress 5 Guarantee: ಐದು ಗ್ಯಾರಂಟಿ ಜಾರಿಗೆಗೆ ಸದ್ದಿಲ್ಲದೆ ನಡೆದಿದೆ ಮಾಹಿತಿ ಸಂಗ್ರಹ

ಕಾಂಗ್ರೆಸ್​​ ವಿರುದ್ಧ ಬಿಜೆಪಿ ಕಿಡಿ

ಕಾಂಗ್ರೆಸ್​ ಗ್ಯಾರಂಟಿಗಳ ಕುರಿತು ಬಿಜೆಪಿ ಟ್ವೀಟ್​ ಮಾಡಿದ್ದು, ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳು ರಾಜ್ಯದ ವಾತಾವರಣವನ್ನು ಹಾಳುಮಾಡುತ್ತಿದೆ. ಜನರು ಗ್ಯಾರಂಟಿಗಳಿಗೆ ಕಾಯುತ್ತಿದ್ದರೆ, ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ದೆಹಲಿ ಸುತ್ತುತ್ತಿದ್ದಾರೆ. ರಾಜ್ಯದಲ್ಲಿ ನಿತ್ಯ ನಿರಂತರ ಜರುಗುತ್ತಿರುವ ಇಂತಹ ಹಲವಾರು ಘಟನೆಗಳಿಗೆ ಸಿದ್ಧರಾಮಯ್ಯ ಅವರ ನೇತೃತ್ವದ ಎಟಿಎಂ ಸರ್ಕಾರ (#ATMSarkara) ವೇ ನೇರ ಹೊಣೆ ಎಂದು ಕಿಡಿಕಾರಿದೆ.

ಕಾಂಗ್ರೆಸ್‌ ಸಾರಿರುವ ಸುಳ್ಳುಗಳಿಂದ ಜನಸಾಮಾನ್ಯರ ಹಾಗೂ ಸರ್ಕಾರಿ ಸಿಬ್ಬಂದಿಗಳ ನಡುವೆ ಅನಾವಶ್ಯಕ ಸಂಘರ್ಷ ನಡೆಯುವಂತಾಗಿದೆ. ಸರ್ಕಾರದ ಗ್ಯಾರಂಟಿಗಳಿಂದ ಬಸ್ಸುಗಳಲ್ಲಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆಯುತ್ತಿದೆ ಎಂದು ಅಸಹಾಯಕತೆಯಿಂದ ಕೆಎಸ್‌ಆರ್‌ಟಿಸಿ ನೌಕರರ ಸಂಘ ಪತ್ರ ಬರೆದಿದೆ.

ಸಾರ್ವಜನಿಕರ ಭಾವನೆಗಳೊಂದಿಗೆ ಚೆಲ್ಲಾಟವಾಡುವ ಹಾಗೂ ಸರ್ಕಾರದ ಈ ಹೊಣೆಗೇಡಿತನದ ವಿರುದ್ಧ ರಾಜ್ಯದ ಜನ ಸಿಡಿದೇಳುವ ಕಾಲ ದೂರವಿಲ್ಲ ಎಂದು ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ಮಾಡಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:20 pm, Thu, 25 May 23