AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆಯಲ್ಲಿ ಗೆಲ್ಲುವುದು ಹೇಗೆ? ಹೆಚ್​ಡಿ ಕುಮಾರಸ್ವಾಮಿಗೆ ಗುಟ್ಟು ಹೇಳಿದ ಹೆಚ್​​ಡಿ ದೇವೇಗೌಡ

ಜೆಡಿಎಸ್​ ಪಕ್ಷದ ಸೋಲಿಗೆ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದು, ಹಣ ಚುನಾವಣೆ ಗೆಲ್ಲಿಸಲ್ಲ, ಬದ್ಧತೆ ಇರಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ದಾರೆ.

ಚುನಾವಣೆಯಲ್ಲಿ ಗೆಲ್ಲುವುದು ಹೇಗೆ? ಹೆಚ್​ಡಿ ಕುಮಾರಸ್ವಾಮಿಗೆ ಗುಟ್ಟು ಹೇಳಿದ ಹೆಚ್​​ಡಿ ದೇವೇಗೌಡ
ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ದೇವೇಗೌಡ
ಗಂಗಾಧರ​ ಬ. ಸಾಬೋಜಿ
|

Updated on: May 25, 2023 | 7:18 PM

Share

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​​​ ಸೋಲು ಕಂಡಿದೆ. ಪಕ್ಷದ ಸೋಲಿಗೆ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ (HD Deve Gowda) ಬೇಸರ ವ್ಯಕ್ತಪಡಿಸಿದ್ದಾರೆ. ಹಣ ಚುನಾವಣೆ ಗೆಲ್ಲಿಸಲ್ಲ, ಬದ್ಧತೆ ಇರಬೇಕು ಎಂದು ಪುತ್ರ ಹೆಚ್.ಡಿ.ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ದಾರೆ. ಜೆಡಿಎಸ್ ಪಕ್ಷದ ಆತ್ಮವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ನಿಷ್ಠೆ ಇದ್ರೆ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಹಣ ಕೊಟ್ಟು ಕಳಿಸಿದ್ರಿ ಗೆದ್ರಾ? ಅವರು ಇಂದು ಈ ಸಭೆಗೆ ಬಂದಿದ್ದಾರಾ? ಪಕ್ಷದ ನಿಷ್ಠಾವಂತರು ಇಂದು ಬಂದಿದ್ದಾರೆ, ಬರದಿರುವವರನ್ನು ಬಿಟ್ಟುಬಿಡಿ ಎಂದು ಹೇಳಿದ್ದಾರೆ.

ನನ್ನ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುವೆ

ಪಕ್ಷದಿಂದ ಲಾಭ ಪಡೆಯುವವರು ಬೇಡ. ಕೊನೆಯುಸಿರು ಇರುವವರೆಗೂ ಪಕ್ಷಕ್ಕಾಗಿ ದುಡಿಯುವವರನ್ನು ಹುಡುಕಿ. ಉತ್ತರ ಕರ್ನಾಟಕ ಭಾಗದಲ್ಲಿ ನಾಯಕತ್ವದ ಕೊರತೆಯಿದೆ. ರಾಯಚೂರು ಸೇರಿದಂತೆ ರಾಜ್ಯಾದ್ಯಂತ ನಾನೇ ಪ್ರವಾಸ ಮಾಡುತ್ತೇವೆ. ಕಡೂರು ಕ್ಷೇತ್ರದಲ್ಲಿ ವೈಎಸ್​ವಿ ದತ್ತಾ ಪಾದಯಾತ್ರೆ ಮಾಡುವುದು ಬೇಡ. ನಿನ್ನ ಸೇವೆ ಪಕ್ಷಕ್ಕೆ ಬೇಕಾಗಿದೆ. ನನ್ನ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಬಗ್ಗೆ ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂಗಳಾದ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ

ಈ ಸರ್ಕಾರದ ಭವಿಷ್ಯ ಲೋಕಸಭಾ ಚುನಾವಣೆ ಮೇಲೆ ನಿಂತಿದೆ: ಕುಮಾರಸ್ವಾಮಿ 

ಹೆಚ್​​.ಡಿ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಇರುತ್ತೋ ಇಲ್ವೋ ಗೊತ್ತಿಲ್ಲ. ಈ ಸರ್ಕಾರದ ಭವಿಷ್ಯ ಲೋಕಸಭಾ ಚುನಾವಣೆ ಮೇಲೆ ನಿಂತಿದೆ. ನಾನು ಭವಿಷ್ಯ ಹೇಳುತ್ತಿಲ್ಲ. ರಾಜಕೀಯ ಸ್ಥಿತಿಗತಿ ನೋಡಿ ಹೇಳುತ್ತಿದ್ದೇನೆ ಹೇಳಿದರು.

ಇದನ್ನೂ ಓದಿ: Nikhil Kumaraswamy: ನಿಖಿಲ್ ಕುಮಾರಸ್ವಾಮಿ ರಾಜೀನಾಮೆ, ಮುಂದಿನ ಜೆಡಿಎಸ್​ ಯುವ ಸಾರಥಿ ಯಾರು?

ನಂಬಿದವರೇ ಬೆನ್ನಿಗೆ ಚೂರಿ ಹಾಕಿದರು

ನಂಬಿದವರೇ ನಮಗೆ ಮೋಸ ಮಾಡಿದ್ರು, ಬೆನ್ನಿಗೆ ಚೂರಿ ಹಾಕಿದರು. ಆದ್ದರಿಂದ ನಾನು ನಿಮಗೆ ಹಣ ಸಹಾಯ ಮಾಡಲು ಆಗಲಿಲ್ಲ. ಆದ್ದರಿಂದ ನಾನು ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ. ನಮ್ಮದು ಕುಟುಂಬ ರಾಜಕಾರಣ ಎಂದು ಟೀಕೆ ಮಾಡುತ್ತಾರೆ. ಹೀಗಾಗಿ ನೀವೆಲ್ಲರೂ ಮುಂದೆ ಬಂದು ಪಕ್ಷ ಸಂಘಟನೆ ಮಾಡಿ. ಸಿದ್ದರಾಮಯ್ಯ ಮೊಮ್ಮಗನನ್ನು ರಾಜಕೀಯಕ್ಕೆ ತರುತ್ತೇನೆ ಅಂತಾರೆ. ಅದು ಕುಟುಂಬ ರಾಜಕಾರಣ ಅಲ್ವಾ? ಯಾರೂ ಟೀಕೆ ಮಾಡಲ್ಲ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.