ಕೊಡಗು ಹೇಳಿ ಕೇಳಿ ಪುಟ್ಟ ಜಿಲ್ಲೆ. ಹಾಗಾಗಿ ಈ ಜಿಲ್ಲೆಗೆ ಸ್ವಂತ ಲೋಕ ಸಭಾ ಅಭ್ಯರ್ಥಿಯೇ ಇಲ್ಲ. ಆದ್ರೆ ಇನ್ನೆರಡು ವರ್ಷಗಳಲ್ಲಿ ಲೋಸಭಾ ಕ್ಷೇತ್ರಗಳ ಮರುವಿಂಗಡಣೆ ಆಗಲಿದೆ. ಈ ಸಂದರ್ಭ ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ನೀಡುವಂತೆ ಜಿಲ್ಲೆಯ ಜನತೆ ಆಗ್ರಹಿಸಿದ್ದಾರೆ. ಇದಕ್ಕೆ ಸ್ವತಃ ಸಂಸದ ಪ್ರತಾಪ್ ಸಿಂಹ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆ ಈ ಮೊದಲು ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ವಿಲೀನ ಆಗಿತ್ತು. ಆದ್ರೆ ನಂತರ ಕ್ಷೇತ್ರ ಮರು ವಿಂಗಡಣೆ ಆದಾಗ ಜಿಲ್ಲೆಯನ್ನ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ವಿಲೀನಗೊಳಿಸಲಾಯಿತು. ಅಂದರೆ ಹಿಂದಿನಿಂದಲೂ ಕೊಡಗು ಜಿಲ್ಲೆಗೆ ಸ್ವತಂತ್ರ ಲೋಕಸಭಾ ಅಭ್ಯರ್ಥಿಯೇ ಇಲ್ಲ. ಬೇರೆ ಜಿಲ್ಲೆಯ ಪ್ರತಿನಿಧಿಗಳು ಕೊಡಗನ್ನೂ ಪ್ರತಿನಿಧಿಸುತ್ತಿದ್ದಾರೆ. ಇವರು ಕೊಡಗು ಜಿಲ್ಲೆಯ ಬೇಕು ಬೇಡಗಳನ್ನ ಲೋಕಸಭೆಯಲ್ಲಿ ಸಮರ್ಥವಾಗಿ ಮಂಡಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಅಸಮಾಧಾನ ಜಿಲ್ಲೆಯ ಜನತೆಯಲ್ಲಿದೆ.
ಹಾಗಾಗಿ ಬಹಳ ಹಿಂದಿನಿಂದಲೂ ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ನೀಡುವಂತೆ ಜಿಲ್ಲೆಯ ಜನರು ಆಗ್ರಹಿಸುತ್ತಿದ್ದಾರೆ. ಸಧ್ಯ ಇದೀಗ ಜಿಲ್ಲೆಯಲ್ಲಿ ಈ ಕೂಗು ಮತ್ತೆ ಜೋರಾಗಿದೆ. 2026ರಲ್ಲಿ ದೇಶವ್ಯಾಪಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಆಗಲಿದೆ. ಈ ಸಂದರ್ಭ ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ನೀಡುವಂತೆ ಜಿಲ್ಲೆಯ ಜನರು ಆಗ್ರಹಿಸಿದ್ದಾರೆ. ವಿಶೇಷ ಅಂದ್ರೆ ಜಿಲ್ಲೆಯ ಜನರ ಬೇಡಿಕೆಗೆ ಸಂಸದ ಪ್ರತಾಪ್ ಸಿಂಹ ಮುಕ್ತ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹೊಸ ಲೋಕಸಭಾ ಕ್ಷೇತ್ರಗಳ ಸೃಷ್ಟಿಗೆ ಅದರದ್ದೇ ಆದ ಮಾನದಂಡಗಳಿವೆ. ಒಂದು ಕ್ಷೇತ್ರದಲ್ಲಿ ಕನಿಷ್ಟ ಇಷ್ಟು ಮತದಾರರು ಇರಬೇಕೆಂಬ ನಿಯಮವಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಇರುವುದು ಕೇವಲ ನಾಲ್ಕು ಲಕ್ಷ ಮತದಾರರು. ಈ ನಿಟ್ಟಿನಲ್ಲಿ ನೀಡುವುದಾದರೆ ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ಸಿಗುವುದು ಕಷ್ಟವೇ. ಆದರೂ
Also Read: Kolar Lakes: ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಮನಸೋಇಚ್ಛೆ ಕೆರೆಗಳನ್ನು ಬಗೆಯುತ್ತಿರುವ ಹೈವೇ ಗುತ್ತಿಗೆದಾರರು
ಹಾಗೆ ನೋಡಿದ್ರೆ ಕೆಲವೊಂದು ವಿಶೇಷ ಅಂದರ್ಭಗಳಲ್ಲಿ ಮತದಾರರು ಕಡಿಮೆ ಇದ್ರೂ ಆ ಕ್ಷೇತ್ರದ ಸಾಂಸ್ಕೃತಿಕ ಆಚಾರ ವಿಚಾರ ಪದ್ಧತಿ ಪರಂಪರೆಗಳು ವಿಶಿಷ್ಟವಾಗಿದ್ದರೆ ಅದನ್ನು ಲೋಕಸಭಾ ಕ್ಷೇತ್ರವಾಗಿ ಘೋಷಿಸಿದ ಉದಾಹರಣೆಗಳಿವೆ. ಲಕ್ಷದ್ವೀಪ ಮತ್ತು ಡಾರ್ಜಿಲಿಂಗ್ ಇದೇ ಮಾದರಿಯಲ್ಲಿ ಸೃಷ್ಟಿಯಾದ ಲೋಕಸಭಾ ಕ್ಷೇತ್ರಗಳು. ಹಾಗಾಗಿ ಕೊಡಗು ಜಿಲ್ಲೆ ಕೂಡ ಅತಿ ವಿಶಿಷ್ಷ ಪದ್ಧತಿ ಪರಂಪರೆಗಳನ್ನ ಹೊಂದಿರುವ ಜಿಲ್ಲೆ. ಹಾಗಾಗಿ ಈ ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ದೊರಕುವ ಸಾಧ್ಯತೆಗಳಿವೆ ಎನ್ನುತ್ತಾರೆ ಮಾಜಿ ಶಾಸಕ ಕೆಜಿ ಬೋಪಯ್ಯ. ಯಾವುದಕ್ಕೂ ಹೊಸ ಲೋಕಸಭಾ ಕ್ಷೇತ್ರವಾಗಲು 2026ನೇ ಇಸವಿಯವರೆಗೆ ಕಾಯುವುದು ಅನಿವಾರ್ಯವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ