ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲವೆಂದು ಹಾಸನ ಅಭ್ಯರ್ಥಿಯ ಸುಳಿವು ನೀಡಿದ ದೇವೇಗೌಡ

| Updated By: ರಮೇಶ್ ಬಿ. ಜವಳಗೇರಾ

Updated on: Jan 18, 2024 | 7:31 PM

ಜೆಡಿಎಸ್​ ಎನ್​ಡಿಎ ಮೈತ್ರಿಕೂಟ ಸೇರಿದೆ. ಇದರ ಬೆನ್ನಲ್ಲೇ ಈ ಬಾರಿ ಲೋಕಸಭೆ ಚುನಾವನೆಯಲ್ಲಿ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಚೆರ್ಚೆಗಳು ಶುರುವಾಗಿದ್ದು, ಇದೀಗ ಈ ಬಗ್ಗೆ ಎಚ್​ಡಿ ದೇವೇಗೌಡ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಹಾಸನ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎನ್ನುವುದನ್ನು ಸುಳಿವು ಸಹ ಕೊಟ್ಟಿದ್ದಾರೆ.

ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲವೆಂದು ಹಾಸನ ಅಭ್ಯರ್ಥಿಯ ಸುಳಿವು ನೀಡಿದ ದೇವೇಗೌಡ
ಹೆಚ್​ಡಿ ದೇವೇಗೌಡ
Follow us on

ಹಾಸನ, (ಜನವರಿ 18): ಮುಂದಿನ ಲೋಕಸಭಾ ಚುನಾವಣೆಯಲ್ಲಿ (Loksabha Elections 2024)ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್​ಡಿ ದೇವೇಗೌಡ (HD Devegowda) ಮತ್ತೊಮ್ಮೆ ಘೋಷಣೆ ಮಾಡಿದ್ದಾರೆ. ಹಾಸನ (Hassan) ಜಿಲ್ಲೆಯ ಬೇಲೂರಿನಲ್ಲಿಂದ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದೇವೇಗೌಡ, ಕೆಲವರು ದೇವೇಗೌಡರು ನಿಲ್ಲಬೇಕು ಅಂತಾರೆ.ಆದ್ರೆ, ನಾನು ಈಗಾಗಲೆ ಹೇಳಿದ್ದು, ಎಲ್ಲೂ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಓರ್ವ ಯುವಕನನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಈ ಮೂಲಕ ಪರೋಕ್ಷವಾಗಿ ಮತ್ತೊಮ್ಮೆ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ವ್ಹೀಲ್ ಚೇರ್ ನಲ್ಲಿ ಬಂದು ಚನ್ನಕೇಶವ ನ ದರ್ಶನ ಪಡೆದು ಕೊಂಡಿದ್ದೇನೆ. ಈ ರಾಷ್ಟದ ಚುನಾವಣೆ ತುಂಬಾ ವಿಭಿನ್ನವಾಗಿದೆ. ನಿಮ್ಮ ಇಷ್ಡು ವರ್ಷ ದ ರಾಜಕೀಯ ಜೀವನದಲ್ಲಿ ಜಾತ್ಯಾತೀತ ತತ್ವದಡಿ ಕೆಲಸ ಮಾಡಿದ್ರಿ. ಆದರೆ ಕೊನೆಯ ಘಟ್ಟದಲ್ಲಿ ಯಾಕೆ ಮಾರ್ಪಾಡು ಅಂತಾ ಕೇಳ್ತಾರೆ. ಹೌದು ಮಾರ್ಪಾಡು ಮಾಡಿದ್ದೇನೆ. ನಾನು ಮೊಮ್ಮಗನ ಗೆಲ್ಲಿಸಿ ಅಂತಾ ಬಂದಿಲ್ಲ. ಈ ಜಿಲ್ಲೆಯ ಅಭಿವೃದ್ಧಿಗಾಗಿ ಬಂದಿದ್ದೇನೆ. ದೇವೇಗೌಡರು ದೇವೇಗೌಡರ ಮಕ್ಕಳು ಯಾರಿಗೆ ಅನ್ಯಾಯ ಮಾಡಿದ್ದೇವೆ ಹೇಳಿ ಎಂದು ತಮ್ಮ ಕುಟುಂಬದ ವಿರುದ್ಧದ ಟೀಕೆಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಅಮಿತ್ ಶಾ, ಜೆಪಿ ನಡ್ಡಾ ಭೇಟಿಯಾದ ಕುಮಾರಸ್ವಾಮಿ: ಲೋಕಸಭೆ ಸೀಟು ಹಂಚಿಕೆ ಯಾವಾಗ ಫೈನಲ್?

.ನಾವು ರೈತರ ಮಕ್ಕಳು. ನಿಮ್ಮನ್ನ ಬಿಟ್ಟು ನಾವು ಎಲ್ಲಿಗೆ ಹೋಗೋಣ. ಇದೇ ಕೊನೆ‌ ಅಲ್ಲ, ಮತ್ತೆ ಬರುತ್ತೇನೆ. ಈ ದೇಶದಲ್ಲಿ ಕಾಂಗ್ರೆಸ್ ಗಾಗಿ ನನ್ನ ಪ್ರಾಣವನ್ನೇ ತೆತ್ತಿದ್ದೇನೆ. ನಾವು ಯಾರಿಗೆ ಅನ್ಯಾಯ ಮಾಡಿದ್ದೇವೆ ಸತ್ಯ ಹೇಳಿ. ನಾವು ಯಾರನ್ನು ಬಿಟ್ಟುಕೊಡುವುದಿಲ್ಲ. ನನ್ನ ಅಣ್ಣ ತಮ್ಮಂದಿರು ಮುಸ್ಲಿಂ ಬಾಂದವರು. ನಿಮ್ಮ‌ರಕ್ಷಣೆಗಾಗಿ ಈ ದೇಹ ಸವೆಸಿದ್ದೇನೆ ಎಂದು ಹೇಳುತ್ತ ಬಾವುಕರಾದರು.

ಯಾರೋ ಒಬ್ಬ ಅನಾವಶ್ಯಕವಾಗಿ ರೇವಣ್ಣ ಅವರ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಅವರು ದೊಡ್ಡೋರು, ತುಂಬಾ ದೊಡ್ಡ ವ್ಯಕ್ತಿ ಅವರು. ನಾನು ನನ್ನ ಹೆಂಡತಿ ಒಡವೆ ಅಡವಿಟ್ಟು ಪಡುವಲಹಿಪ್ಪೆ ಗ್ರಾಮದಲ್ಲಿ ಜಮೀನು ತಗೊಂಡ್ರೆ ನನ್ನ ಮೇಲೆ‌ ಕೇಸ್ ಹಾಕಿದ್ರು. ಸುಪ್ರೀಂಕೋರ್ಟ್ ವರೆಗೂ ತೆಗೆದುಕೊಂಡು ಹೋದರು.. ಇಂತಹ ನೋವಿನಿಂದ ಬಂದವನು ನಾನು ಎಂದರು.

ನಾನು ಮೋದಿಯವರ ಜೊತೆ ಸೇರಿದೆ. ಇದರಲ್ಲಿ ಸ್ವಾರ್ಥ ಇದೆಯಾ. ನಾನು ಏನು ಆಗಬೇಕಿದೆ ಹೇಳಿ, ಚುನಾವಣೆಗೆ ನಿಲ್ಲಬೇಕಾ. ಈ ದೇಶದ ನೂರು ಕೋಟಿ ಜನರಿಗೆ ನಾಯಕತ್ವ ಕೊಡುವ ವ್ಯಕ್ತಿತ್ವ ಇರೋದು ಮೋದಿಗೆ ಮಾತ್ರ. ಮತ್ಯಾರು ಮಮತಾ ಮಾಡ್ತಾರಾ, ಸ್ಟಾಲಿನ್ ಮಾಡ್ತಾರಾ ಎಂದು ಪ್ರಶ್ನಿಸಿದ ದೇವೇಗೌಡ, ಇವತ್ತು ಮಣಿಪಾಲ್ ನಿಂದ ಪಾದಯಾತ್ರೆ ಶುರು ಮಾಡಿದಾರೆ. ಕಾಂಗ್ರೆಸ್ ಬಗ್ಗೆ ನಾನು ಬಹಳ ಮಾತನಾಡಬಲ್ಲೆ. ಕೆಟ್ಟ ಅಪ ಪ್ರಚಾರಕ್ಕೆ ಮಾರು ಹೋಗಬೇಡಿ ಎಂದು ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ