TV9 WITT Global Summit: ರಾಮ, ಅರ್ಜುನ, ಕೃಷ್ಣನ ಪಾತ್ರಗಳಿಗೆ ಮೋದಿಯನ್ನು ಹೋಲಿಸಿದ ಸಚಿವ ಧರ್ಮೇಂದ್ರ ಪ್ರಧಾನ್

Dharmendra Pradhan at Satta Sammelan: ನ್ಯೂಸ್9 ವಾಟ್ ಇಂಡಿಯಾ ಥಿಂಕ್ ಟುಡೇ ಜಾಗತಿಕ ಶೃಂಗಸಭೆಯ ಭಾಗವಾಗಿ ನಡೆದ ಸತ್ತಾ ಸಮ್ಮೇಳನದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿದರು. ರಾಹುಲ್ ಗಾಂಧಿ ಅವರ ಎಂಎಸ್​ಪಿ ಭರವಸೆ ವಿರುದ್ಧ ಹರಿಹಾಯ್ದ ಅವರು ನರೇಂದ್ರ ಮೋದಿ ನಾಮಬಲ ಬಿಜೆಪಿಗೆ ಯಾಕೆ ಬೇಕು ಎಂದು ಲಾಜಿಕ್ ಹೇಳಿದ್ದಾರೆ. ಒಡಿಶಾದಲ್ಲಿ ಬಿಜೆಪಿ 15 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

TV9 WITT Global Summit: ರಾಮ, ಅರ್ಜುನ, ಕೃಷ್ಣನ ಪಾತ್ರಗಳಿಗೆ ಮೋದಿಯನ್ನು ಹೋಲಿಸಿದ ಸಚಿವ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
Edited By:

Updated on: Feb 27, 2024 | 6:26 PM

ದೇಶದ ಅತಿ ದೊಡ್ಡ ಸುದ್ದಿ ನೆಟ್‌ವರ್ಕ್ ಎನಿಸಿದ ಟಿವಿ9 ಆಯೋಜಿಸಿದ ವಾಟ್ ಇಂಡಿಯಾ ಥಿಂಕ್ ಟುಡೇ (WITT 2024) ಗ್ಲೋಬಲ್ ಸಮಿಟ್ ಭಾಗವಾಗಿ ನಡೆಸಲಾದ ಸತ್ತಾ ಸಮ್ಮೇಳನದಲ್ಲಿ (Satta Sammelan) ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಹಲವಾರು ವಿಚಾರಗಳ ಬಗ್ಗೆ ಮಾತನಾಡಿದರು. ಲೋಕಸಭೆ ಚುನಾವಣೆಯಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿವರೆಗೆ ಟಿವಿ9ನ ಹಲವು ತೀಕ್ಷ್ಣ ಪ್ರಶ್ನೆಗಳಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಉತ್ತರಿಸಿದರು. ಒಡಿಶಾದಲ್ಲಿ 15 ಸ್ಥಾನ ಗೆಲ್ಲುವ ಗ್ಯಾರಂಟಿ ನೀಡುತ್ತಿದ್ದೀರಿ. ನೀವು ಒಡಿಶಾದಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಧರ್ಮೇಂದ್ರ ಪ್ರಧಾನ್ ಅವರು, ಒಡಿಶಾದಿಂದ ಸ್ಪರ್ಧಿಸಲು ಹೇಳಿದರೆ ಅದು ತನ್ನ ಅದೃಷ್ಟ ಎಂದು ಹೇಳಿಕೊಂಡಿದ್ದಾರೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಡಿಶಾದಲ್ಲಿ ಬಿಜೆಪಿ 8 ಸ್ಥಾನ ಗೆದ್ದಿತ್ತು. ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಿದೆ. ಹೀಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹಿಂದಿಗಿಂತಲೂ ಉತ್ತಮ ಸಾಧನೆ ಮಾಡಲಿದೆ. ಕಳೆದ ಬಾರಿಗಿಂತ ಇಲ್ಲಿ ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಆ ಸಂದರ್ಶನದಲ್ಲಿ ಧರ್ಮೇಂದ್ರ ಪ್ರಧಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 10 ವರ್ಷ ಅಧಿಕಾರದಲ್ಲಿದ್ದರೂ ಎಂಎಸ್​ಪಿ ಗ್ಯಾರಂಟಿ ಯಾಕೆ ಕೊಡಲಿಲ್ಲ? ರಾಹುಲ್ ಗಾಂಧಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಶ್ನೆ

ರಾಮ, ಕೃಷ್ಣ ಮತ್ತು ನರೇಂದ್ರ ಮೋದಿ

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400 ಸೀಟುಗಳನ್ನು ದಾಟುವುದು ಗ್ಯಾರಂಟಿಯಾ ಎಂಬ ಪ್ರಶ್ನೆಗೆ ಸ್ಪಂದಿಸಿದ ಅವರು, 400 ಸ್ಥಾನ ಗೆಲ್ಲುವುದು ಪಕ್ಷದ ಗುರಿ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸ್ಪಂದನೆಯೂ ಹುಮ್ಮಸ್ಸು ತಂದಿದೆ ಎಂದರು.

ಪ್ರಧಾನಿ ಮೋದಿಯವರ ಹೆಸರಿನಲ್ಲಿ ಭಾರತೀಯ ಜನತಾ ಪಕ್ಷವು ಪ್ರತಿ ಬಾರಿ ಚುನಾವಣೆಗೆ ಏಕೆ ಸ್ಪರ್ಧಿಸುತ್ತದೆ ಎಂಬ ಪ್ರಶ್ನೆ ಧರ್ಮೇಂದ್ರ ಪ್ರಧಾನ್​ಗೆ ಕೇಳಲಾಯಿತು. ಅದಕ್ಕೆ ಅವರು: ‘ನಮ್ಮ ಪಕ್ಷದ ಸಂಪೂರ್ಣ ಸಭ್ಯತೆ ನೋಡಿ. ರಾಮಾಯಣದ ಮೂಲ ಪಾತ್ರವು ಭಗವಾನ್ ರಾಮನೇ ಏಕೆ ಎಂದು ನೀವು ಕೇಳಬಹುದು? ಮಹಾಭಾರತದ ಮೂಲ ಪಾತ್ರಗಳು ಶ್ರೀಕೃಷ್ಣ ಮತ್ತು ಅರ್ಜುನ್ ಮಾತ್ರ ಏಕೆ? ಯಾವುದೇ ಘಟನೆಗೆ ಒಂದು ಪಾತ್ರದ ಪ್ರಭಾವ ಹೆಚ್ಚು ಇರುತ್ತದೆ’ ಎಂದು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ತೀರ್ಪು, ರೈತರ ಚಳವಳಿ ಬಗ್ಗೆ ಓವೈಸಿ ಅಭಿಪ್ರಾಯವೇನು?

ಕ್ಯಾಪ್ಟನ್ ಎಂದರೆ ಕ್ಯಾಪ್ಟನ್

ಇಂದು ಭಾರತದ ಗತಿ ಸೃಷ್ಟಿಯಾಗುತ್ತಿದೆ. ಭಾರತದ ಈ ಕ್ಷಣದಲ್ಲಿ ಮತ್ತು ಪ್ರಪಂಚದೊಳಗೆ ಒಂದು ಗತಿ ಸೃಷ್ಟಿಯಾಗಿದೆ. ಇದಕ್ಕೆ ಕಾರಣಕರ್ತ ಪ್ರಧಾನಿ ನರೇಂದ್ರ ಮೋದಿ. ಆದ್ದರಿಂದಲೇ ಕ್ಯಾಪ್ಟನ್ ಎನಿಸುವುದು. ತಂಡದಲ್ಲಿ 11 ಮಂದಿ ಕ್ರಿಕೆಟ್ ಆಡುತ್ತಾರೆ ಆದರೆ ನಾಯಕನ ಜವಾಬ್ದಾರಿಯೇ ಬೇರೆ. ಕ್ಯಾಪ್ಟನ್ ನಾಯಕತ್ವ ಎಲ್ಲರಿಗೂ ಸ್ವೀಕಾರವಿರುತ್ತದೆ. ಇದು ನಮ್ಮ ಪಕ್ಷದಲ್ಲೂ ಆಗಿದೆ ಎಂದು ಪೆಟ್ರೋಲಿಯಂ ಸಚಿವರೂ ಆದ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ