ತೆಲಂಗಾಣ: ಬಿಜೆಪಿ ಪ್ರಜಾ ಸಂಗ್ರಾಮ ಯಾತ್ರೆ ವೇಳೆ ಟಿಆರ್​​ಎಸ್ ಕಾರ್ಯಕರ್ತರೊಂದಿಗೆ ಸಂಘರ್ಷ; ಹಲವರಿಗೆ ಗಾಯ

ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು  ಹೇಳಿದ  ಪೊಲೀಸರು  ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದುಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.  ನಮಗೆ ದೂರು ಬಂದರೆ, ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ತೆಲಂಗಾಣ: ಬಿಜೆಪಿ ಪ್ರಜಾ ಸಂಗ್ರಾಮ ಯಾತ್ರೆ ವೇಳೆ ಟಿಆರ್​​ಎಸ್ ಕಾರ್ಯಕರ್ತರೊಂದಿಗೆ ಸಂಘರ್ಷ;  ಹಲವರಿಗೆ ಗಾಯ
ಟಿಆರ್​​ಎಸ್- ಬಿಜೆಪಿ ಸಂಘರ್ಷ
Edited By:

Updated on: Aug 15, 2022 | 4:12 PM

ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರ ಪ್ರಜಾ ಸಂಗ್ರಾಮ ಯಾತ್ರೆ  ವೇಳೆ ಸೋಮವಾರ ಜಂಗಾವ್‌ನಲ್ಲಿ ಬಿಜೆಪಿ (BJP) ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (TRS) ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಕೆಲವು ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು  ಹೇಳಿದ  ಪೊಲೀಸರು  ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.  ನಮಗೆ ದೂರು ಬಂದರೆ, ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.


ಬಂಡಿ ಸಂಜಯ್ ಅವರ ಪಾದಯಾತ್ರೆ ಮೂರನೇ ಹಂತದಲ್ಲಿದ್ದು ಸೋಮವಾರ ಜಂಗಾವ್ ಜಿಲ್ಲೆ ತಲುಪಿತ್ತು. ಜನರ ಜತೆ ಸಂಪರ್ಕ, ಸಂವಾದಕ್ಕಾಗಿ ಐದು ಜಿಲ್ಲೆಗಳಾದ್ಯಂತ ಹಲವಾರು ಕ್ಷೇತ್ರಗಳಲ್ಲಿ 328 ಕಿಮೀ ಸಂಚರಿಸಲು ಬಂಡಿ ಸಂಜಯ್ ಉದ್ದೇಶಿಸಿದ್ದರು.

ದೇವರುಪ್ಪುಳ ಗ್ರಾಮದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಬಂಡಿ ಅವರು ಮಾತನಾಡುತ್ತಿದ್ದಾಗ ಅಲ್ಲಿಗೆ ಆಗಮಿಸಿದ ಟಿಆರ್‌ಎಸ್ ಕಾರ್ಯಕರ್ತರು ಭಾಷಣ ನಿಲ್ಲಿಸಲು ಯತ್ನಿಸಿದರು. ಬಿಜೆಪಿ ಕಾರ್ಯಕರ್ತರು ಟಿಆರ್‌ಎಸ್ ಕಾರ್ಯಕರ್ತರನ್ನು ತಡೆಯಲು ಯತ್ನಿಸಿದಾಗ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತು. ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದರು.

ಆದಾಗ್ಯೂ, ಟಿಆರ್ ಎಸ್ ಕಾರ್ಯಕರ್ತರು ಬಂಡಿ ಸಂಜಯ್ ಅವರ ಮೇಲೆ ಕಲ್ಲು ತೂರಾಟ ಮಾಡಲು ಪ್ರಯತ್ನಿಸಿದರು. ತಕ್ಷಣವೇ ಪೊಲೀಸರು ಮಧ್ಯಪ್ರವೇಶ ಮಾಡಿ ಎರಡೂ ಗುಂಪನ್ನು ಚದುರಿಸಿದ್ದಾರೆ. ಆರು ಟಿಆರ್ ಎಸ್ ಮತ್ತು ನಾಲ್ಕು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಸಚಿವ ಎರ್ರಬೆಲ್ಲಿ ದಯಾಕರ ರಾವ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ.

ಆಕ್ರೋಶ ವ್ಯಕ್ತ ಪಡಿಸಿ ಡಿಜಿಪಿಗೆ ದೂರವಾಣಿ ಕರೆ ಮಾಡಿದ ಬಂಡಿ ಸಂಜಯ್, ”ಬಿಜೆಪಿ ಕಾರ್ಯಕರ್ತರ ತಲೆ ಒಡೆಯುತ್ತಿರುವ ಪೊಲೀಸರು ಏನು ಮಾಡುತ್ತಿದ್ದಾರೆ? ಕೆಸಿಆರ್ ಜೇಬಿನಿಂದ ಪೊಲೀಸರಿಗೆ ಸಂಬಳ ನೀಡಲಾಗುತ್ತಿದೆಯೇ? ಕೂಡಲೇ ಪಾದಯಾತ್ರೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಿ’’ ಎಂದು ಗುಡುಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 3:29 pm, Mon, 15 August 22