ಮೈಸೂರು: ‘ಪುಟಗೋಸಿ’ ವಿಪಕ್ಷ ಸ್ಥಾನಕ್ಕಾಗಿ ಮೈತ್ರಿ ಸರ್ಕಾರ ತೆಗೆದಿದ್ದರು ಅಂತ ಸಿದ್ದರಾಮಯ್ಯ (Siddaramaiah) ವಿರುದ್ಧ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿಗೆ (HD Kumaraswamy) ಸಿದ್ದರಾಮಯ್ಯ ಪುತ್ರ ಯತೀಂದ್ರ (Dr Yathindra Siddaramaiah) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ನ 17 ಶಾಸಕರನ್ನ ಕಳೆದುಕೊಳ್ಳಲು ಮೈತ್ರಿ ಕಾರಣ ಅಂತ ಟ್ವೀಟ್ ಮೂಲಕ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ಗೆ 80 ಶಾಸಕರಿದ್ದರೂ ಮುಖ್ಯಮಂತ್ರಿ ಸ್ಥಾನವನ್ನ ಕುಮಾರಸ್ವಾಮಿ ರವರಿಗೆ ಬಿಟ್ಟುಕೊಟ್ಟೆವು. ಶಾಸಕರಿಗೆ ಕುಮಾರಸ್ವಾಮಿ ಸೂಕ್ತವಾಗಿ ಸ್ಪಂದಿಸಲಿಲ್ಲ. ಕಷ್ಟಗಳನ್ನ ಕೇಳಲಿಲ್ಲ ಇದರಿಂದ ಬೇಸತ್ತು ಬಿಟ್ಟು ಹೋಗಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರವೇನೂ ಇಲ್ಲ ಅಂತ ಹೇಳಿದ್ದಾರೆ.
ಸಿದ್ದರಾಮಯ್ಯ ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಅವರು ಕಾಂಗ್ರೆಸ್ ಶಾಸಕರ ಕೆಲಸ ಮಾಡಿಕೊಡಬಹುದಿತ್ತು. ಅವರು ವಿಪಕ್ಷ ಸ್ಥಾನ ತೆಗೆದುಕೊಂಡು ಏನು ಮಾಡಬೇಕು? ಅದೇನು ಮುಖ್ಯಮಂತ್ರಿ ಸ್ಥಾನನಾ? ಅಂತ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೆಚ್ಡಿ ಕುಮಾರಸ್ವಾಮಿಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಹೆಚ್ಡಿಕೆ ಆರೋಪಗಳು ನಗೆಪಾಟಲಿಗೆ ಗುರಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ
ನಿಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಯಾರ ಅಪ್ಪಣೆ ಬೇಕಿಲ್ಲ. ಅದೇ ರೀತಿ ಜೆಡಿಎಸ್ ತಪ್ಪು ತಿಳಿಸಲೂ ಅಪ್ಪಣೆ ಬೇಕಾಗಿಲ್ಲ. ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ ಅಂತ ಸರಣಿ ಟ್ವೀಟ್ ಮೂಲಕ ಶಾಸಕ ಯತೀಂದ್ರ ತಿರುಗೇಟು ನೀಡಿದ್ದಾರೆ.
ನಾವು @JanataDal_S ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ, ನಮ್ಮ 17 ಜನ ಶಾಸಕರು ನಮ್ಮ ಜೊತೆನೆ ಉಳಿಯುತ್ತಿದ್ದರು. ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜೊತೆಗೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಬೇಕಿತ್ತು.
2/9— Dr Yathindra Siddaramaiah (@Dr_Yathindra_S) October 12, 2021
ಇದನ್ನೂ ಓದಿ
ಅಮೃತ ಗ್ರಾಮ ಯೋಜನೆಗೆ ಧಾರವಾಡದ 17 ಗ್ರಾಮಗಳ ಆಯ್ಕೆ; ಹೈಟೆಕ್ ಆಗಲಿವೆ ಹಳ್ಳಿಗಳು
ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ; ಅದೇ ನನ್ನ ಕೊನೆಯ ಹೋರಾಟ: ಹೆಚ್ಡಿ ಕುಮಾರಸ್ವಾಮಿ