2022ರಲ್ಲಿ ಬೋನಸ್ ನೀಡುತ್ತಿರುವ ಷೇರುಗಳಲ್ಲಿ ಸಿಂಧು ಟ್ರೇಡ್ ಲಿಂಕ್ಸ್ ಲಿಮಿಟೆಡ್ (Sindhu Trade Links Ltd) ಕಂಪನಿಯ ಮಲ್ಟಿ ಬ್ಲಾಗರ್ ಷೇರು (Multibagger penny stock) ಕೂಡ ಒಂದಾಗಿದೆ. 2022ರ ಮೇ ತಿಂಗಳಲ್ಲಿ ಈ ಕಂಪನಿಯು 2:1 ರ ಅನುಪಾತದಲ್ಲಿ ಬೋನಸ್ ಷೇರುಗಳನ್ನು ವಿತರಿಸಿದೆ. ದೀರ್ಘಾವಧಿಯ ಹೂಡಿಕೆದಾರರಿಗೆ ಈ ಬೋನಸ್ ಹೆಚ್ಚುವರಿ ಬಹುಮಾನವಾಗಿದ್ದು, ಷೇರಿನ ಮುಖಬೆಲೆ ಆರು ವರ್ಷಗಳಲ್ಲಿ ₹0.56 ರಿಂದ 19 ರೂ.ವರೆಗೆ ವೃದ್ಧಿಯಾಗಿದೆ. ಅಂದರೆ, ಆರು ವರ್ಷಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಈಗ ಬೋನಸ್ ಸೇರಿ 67 ಲಕ್ಷ ರೂ. ದೊರೆತಂತಾಗಿದೆ.
ಸಿಂಧು ಟ್ರೇಡ್ ಲಿಂಕ್ಸ್ ಷೇರು ಮೌಲ್ಯದ ಹಿನ್ನೆಲೆ
ಈ ವರ್ಷ ಫೆಬ್ರುವರಿಯಲ್ಲಿ ಕಂಪನಿಯ ಷೇರುಗಳು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 55.40 ರೂ.ಗೆ ತಲುಪಿದ್ದವು. ಬಳಿಕ ಈ ವರ್ಷದ ಲೆಕ್ಕಾಚಾರದ ಪ್ರಕಾರ ಶೇಕಡಾ 20ರಷ್ಟು ಕುಸಿತ ಕಂಡಿದ್ದವು. ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದ್ದರಿಂದ ಕಳೆದ ಒಂದು ವರ್ಷದಲ್ಲಿ ಈ ಪೆನ್ನಿ ಷೇರು ಶೂನ್ಯ ಗಳಿಕೆ ದಾಖಲಿಸಿದೆ. ಆದರೆ, ಕಳೆದ 5 ವರ್ಷಗಳ ಅವಧಿಯಲ್ಲಿ ಈ ಷೇರಿನ ಮೌಲ್ಯ 1.20 ರೂ.ನಿಂದ 19 ರೂ.ವರೆಗೆ ತಲುಪಿದೆ. ಇದರೊಂದಿಗೆ ಹೂಡಿಕೆದಾರರಿಗೆ ಶೇಕಡಾ 1,500ರಷ್ಟು ರಿಟರ್ನ್ಸ್ ತಂದುಕೊಟ್ಟಿದೆ. 2017ರ ಫೆಬ್ರುವರಿಯಲ್ಲಿ ಈ ಪೆನ್ನಿ ಷೇರು 0.56 ರೂ.ನಲ್ಲಿ ವಹಿವಾಟು ಮುಗಿಸಿತ್ತು. ಅಲ್ಲಿಂದ ಬಳಿಕ 19 ರೂ.ವರೆಗೆ ವೃದ್ಧಿ ದಾಖಲಿಸಿದೆ.
ಇದನ್ನೂ ಓದಿ: Paytm shares: ಪೇಟಿಎಂ ಷೇರು ಮೌಲ್ಯ ಭಾರಿ ಕುಸಿತ; ಈಗ ಷೇರು ಖರೀದಿ ಸೂಕ್ತವೇ?
ಸಿಂಧು ಟ್ರೇಡ್ ಲಿಂಕ್ಸ್ ಬೋನಸ್ ಷೇರಿನ ಇತಿಹಾಸ
ದೀರ್ಘಾವಧಿಯ ಹೂಡಿಕೆದಾರರಿಗೆ ಈ ಕಂಪನಿಯ ಷೇರುಗಳು ಉತ್ತಮ ಗಳಿಕೆ ತಂದುಕೊಟ್ಟಿವೆ. ಕಳೆದ ಆರು ವರ್ಷಗಳಲ್ಲಿ ಈ ಪೆನ್ನಿ ಷೇರು ಬೋನಸ್ಗಳನ್ನು ಕೊಡುತ್ತಾ ಬಂದಿದೆ. ಈ ವರ್ಷ ಮೇ ತಿಂಗಳಲ್ಲಿ ಕಂಪನಿಯ ನಿರ್ದೇಶಕರ ಮಂಡಳಿ 2:1ರ ಅನುಪಾತದಲ್ಲಿ ಬೋನಸ್ ನೀಡುವುದಾಗಿ ಘೋಷಿಸಿತ್ತು.
ಹೂಡಿಕೆದಾರರ ಮೇಲಿನ ಪರಿಣಾಮ
ಸಿಂಧು ಟ್ರೇಡ್ ಲಿಂಕ್ಸ್ನಲ್ಲಿ ಆರು ವರ್ಷಗಳ ಹಿಂದೆ 0.56 ರೂ.ನಂತೆ 1 ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಆಗ 1,78,571 ಷೇರುಗಳು ದೊರೆತಿರುತ್ತವೆ. ಈಗ ಕಂಪನಿಯು 2:1ರ ಅನುಪಾತದಲ್ಲಿ ಬೋನಸ್ ಘೋಷಿಸಿರುವುದರಿಂದ ಹೆಚ್ಚುವರಿ ಹೂಡಿಕೆ ಮಾಡದೆಯೇ ಅವರ ಬಳಿ ಇರುವ ಷೇರುಗಳ ಸಂಖ್ಯೆ 3,57,142 ತಲುಪಿರುತ್ತವೆ.
ಬೋನಸ್ ಷೇರುಗಳ ಪ್ರಯೋಜನ
ಆರು ವರ್ಷಗಳ ಹಿಂದೆ 0.56 ರೂ.ನಂತೆ 1 ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಆಗ 1,78,571 ಷೇರುಗಳು ದೊರೆತಿದ್ದವಷ್ಟೇ. ಈಗ ಬೋನಸ್ ಸಹ ಸೇರಿ ಅವರ ಕೈಯಲ್ಲಿ 3,57,142 ಷೇರುಗಳಿರುತ್ತವೆ. ಈಗ ಸಿಂಧು ಟ್ರೇಡ್ ಲಿಂಕ್ಸ್ ಮಲ್ಟಿಬ್ಲಾಗರ್ ಪೆನ್ನಿ ಷೇರಿನ ಮುಖಬೆಲೆ 19 ರೂ. ಇದೆ. ಪರಿಣಾಮವಾಗಿ ಆಗ 1 ಲಕ್ಷ ರೂ. ಹೂಡಿಕೆ ಮಾಡಿದ್ದವರಿಗೆ ಈಗ 67 ಲಕ್ಷ ರೂ. ದೊರೆತಂತಾಯಿತು.
ಸಿಂಧು ಟ್ರೇಡ್ ಲಿಂಕ್ಸ್ ಲಿಮಿಟೆಡ್ ಬಿಎಸ್ಇಯಲ್ಲಿ ಲಿಸ್ಟ್ ಆಗಿರುವ ಷೇರು ಆಗಿದ್ದು, ಪ್ರಸ್ತುತ 2,952 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ ಎಂದು ‘ಲೈವ್ ಮಿಂಟ್’ ವರದಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Thu, 17 November 22