ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬಿಎಸ್ಇ (BSE) ಮತ್ತು ರಾಷ್ಟ್ರೀಯ ಷೇರುಪೇಟೆ ಎನ್ಎಸ್ಇ (NSE) 2023ರಲ್ಲಿ ವಾರದ ದಿನಗಳಲ್ಲಿ ಒಟ್ಟು 15 ರಜೆ ಹೊಂದಿವೆ. ಒಟ್ಟು 19 ರಜಾ ದಿನಗಳಿದ್ದರೂ ಈ ಪೈಕಿ ನಾಲ್ಕು ವಾರಾಂತ್ಯ ಬರುತ್ತವೆ. ಫೆಬ್ರವರಿ, ಜುಲೈಯಲ್ಲಿ ವಾರದ ದಿನಗಳಲ್ಲಿ ರಜೆ ಇಲ್ಲ. ಜನವರಿ, ಮೇ, ಜೂನ್, ಆಗಸ್ಟ್, ಸೆಪ್ಟೆಂಬರ್ ಹಾಗೂ ಡಿಸೆಂಬರ್ನಲ್ಲಿ ತಲಾ ಒಂದು ರಜೆ ಇದೆ. ಮಾರ್ಚ್, ಅಕ್ಟೋಬರ್ ಹಾಗೂ ನವೆಂಬರ್ನ ವಾರದ ದಿನಗಳಲ್ಲಿ ಬಿಎಸ್ಇ ಮತ್ತು ಎನ್ಎಸ್ಇಗೆ ತಲಾ ಎರಡು ರಜೆಗಳಿವೆ. ಏಪ್ರಿಲ್ನಲ್ಲಿ ಅತಿಹೆಚ್ಚು ರಜೆಗಳಿದ್ದು, ಮೂರು ದಿನ ಷೇರುಪೇಟೆ ಮುಚ್ಚಿರಲಿದೆ.
ಜನವರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ 26ರಂದು ರಜೆ ಇದೆ. ವರ್ಷದ ಮೊದಲ ತಿಂಗಳು ಷೇರು ಮಾರುಕಟ್ಟೆಗಳಿಗೆ ಇರುವ ಒಂದೇ ರಜೆ ಇದು. ಫೆಬ್ರವರಿಯಲ್ಲಿ 18ಕ್ಕೆ ಮಹಾಶಿವರಾತ್ರಿ ಪ್ರಯುಕ್ತ ರಜೆ ಇದ್ದರೂ ಅದು ಶನಿವಾರ ಬರುತ್ತದೆ.