ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವಾಗಿ ಬಿಂಬಿಸಿದ ರಷ್ಯಾದ ನಕ್ಷೆ
ರಷ್ಯಾ ಬಿಡುಗಡೆ ಮಾಡಿರುವ ಈ ನಕ್ಷೆಯು ವಿಶ್ವ ವೇದಿಕೆ ಮತ್ತು ಶಾಂಘೈ ಸಹಕಾರ ಸಂಸ್ಥೆಯ ನಡುವೆ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ
ರಷ್ಯಾ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧ ಐತಿಹಾಸಿಕವಾದದ್ದು. ಎರಡು ರಾಷ್ಟ್ರಗಳ ಗಟ್ಟಿ ಗೆಳತನ ಅನೇಕ ಸಂದರ್ಭಗಳಲ್ಲಿ ನಿಜವಾಗಿದೆ. ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ ಮತ್ತು ಚೀನಾಗೆ ರಷ್ಯಾ ಅಘಾತ ನೀಡಿದೆ. ಭಯೋತ್ಪಾದನೆ ಬಗ್ಗೆ ಒಂದೇ ಧ್ವನಿಯಲ್ಲಿ ಎರಡು ನೆರೆಯ ದೇಶಗಳು ಮಾತನಾಡುತ್ತಿರುವಾಗ ರಷ್ಯಾ ಭಾರತದ ನಕ್ಷೆಯನ್ನು ಬಿಡುಗಡೆ ಮಾಡಿದೆ. ಈ ನಕ್ಷೆ ಎರಡು ದೇಶಗಳು ಭಾರತದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಲು ಪ್ರಯತ್ನಿಸಿದೆ.
ಇತ್ತೀಚೆಗೆ ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಬಿಡುಗಡೆ ಮಾಡಿದ ನಕ್ಷೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಯ್ ಚಿನ್ ಜೊತೆಗೆ ಅರುಣಾಚಲ ಪ್ರದೇಶವನ್ನು ಭಾರತದ ಭಾಗವೆಂದು ತೋರಿಸಿದೆ. ಇದಲ್ಲದೆ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಸಹ ಭಾರತದ ಅವಿಭಾಜ್ಯ ಅಂಗವೆಂದು ತೋರಿಸಲಾಗಿದೆ. ಸ್ಪುಟ್ನಿಕ್ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಬಹಿರಂಗವಾಗಿದೆ.
ಈ ನಕ್ಷೆಯನ್ನು ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ರಾಷ್ಟ್ರ ರಷ್ಯಾದ ಸರ್ಕಾರವು ಬಿಡುಗಡೆ ಮಾಡಿದೆ. ಇಂಡೋ-ರಷ್ಯನ್ ಸ್ನೇಹದ ಆಳವಾದ ಬೇರುಗಳು ನಕ್ಷೆಯಿಂದ ಸ್ಪಷ್ಟವಾಗಿ ಗೋಚರಿಸುತ್ತವೆ. ಪಾಕಿಸ್ತಾನ ಮತ್ತು ಚೀನಾ ಸಹ ಶಾಂಘೈ ಸಹಕಾರ ಸದಸ್ಯರಾಗಿದ್ದಾರೆ ಎಂಬುದನ್ನು ಲೆಕ್ಕಿಸದೆ ರಷ್ಯಾ ಈ ನಕ್ಷೆಯನ್ನು ಬಿಡುಗಡೆ ಮಾಡಿದೆ. ರಷ್ಯಾ ಬಿಡುಗಡೆ ಮಾಡಿರುವ ಈ ನಕ್ಷೆಯು ವಿಶ್ವ ವೇದಿಕೆ ಮತ್ತು ಶಾಂಘೈ ಸಹಕಾರ ಸಂಸ್ಥೆಯ ನಡುವೆ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಶಾಂಘೈ ಸಹಕಾರ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ರಷ್ಯಾ ನಕ್ಷೆಯನ್ನು ಸರಿಯಾಗಿ ಚಿತ್ರಿಸುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ಭಾರತದ ಸರ್ಕಾರಿ ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಸಮಾವೇಶಕ್ಕಾಗಿ ಬಿಡುಗಡೆ ಮಾಡಿದ ತನ್ನ ನಕ್ಷೆಯಲ್ಲಿ ಚೀನಾ ಕೂಡ ಭಾರತದ ಕೆಲವು ಪ್ರದೇಶಗಳನ್ನು ತನ್ನದೇ ಎಂದು ಘೋಷಿಸಿದೆ. ಇದು ಅವರ ವಿಸ್ತರಣಾ ನೀತಿಯ ಸಂಕೇತವಾಗಿತ್ತು. ಒಟ್ಟಾರೆ ರಷ್ಯಾ ಅಧಿಕೃತವಾಗಿ ಬಿಡುಗಡೆ ಮಾಡಿರುವ ನಕ್ಷೆ ಭಾರತಕ್ಕೆ ವಿಶ್ವಮಟ್ಟದಲ್ಲಿ ಬಲ ಬಂದಿದೆ. ಭಾರತದ ಶತ್ರು ರಾಷ್ಟ್ರಗಳಿಗೂ ನಡುಕ ಶುರುವಾಗಿದೆ.
ಹರೀಶ್ ಜಿ.ಆರ್ . ಟಿವಿ9, ನವದೆಹಲಿ