Stock Market Holiday: ಬಿಎಸ್​ಇ, ಎನ್​ಎಸ್​ಇ ಷೇರುಪೇಟೆಗಳಿಗೆ ಇಂದೇಕೆ ರಜೆ?

| Updated By: Ganapathi Sharma

Updated on: Oct 26, 2022 | 10:16 AM

ದೇಶದ ಷೇರುಪೇಟೆಗಳಾದ ಬಿಎಸ್​ಇ ಹಾಗೂ ಎನ್​ಎಸ್​ಇಗಳಿಗೆ ಇಂದು (ಬುಧವಾರ) ರಜೆ. ಕರೆನ್ಸಿ ವಹಿವಾಟು ಕೂಡ ಇಂದು ನಡೆಯುವುದಿಲ್ಲ.

Stock Market Holiday: ಬಿಎಸ್​ಇ, ಎನ್​ಎಸ್​ಇ ಷೇರುಪೇಟೆಗಳಿಗೆ ಇಂದೇಕೆ ರಜೆ?
ಬಿಎಸ್​ಇ (ಸಾಂದರ್ಭಿಕ ಚಿತ್ರ)
Follow us on

ಮುಂಬೈ: ದೇಶದ ಷೇರುಪೇಟೆಗಳಾದ (Stock market) ಬಿಎಸ್​ಇ (BSE) ಹಾಗೂ ಎನ್​ಎಸ್​ಇಗಳಿಗೆ (NSE) ಇಂದು (ಬುಧವಾರ) ರಜೆ. ಉಭಯ ಮಾರುಕಟ್ಟೆಗಳಲ್ಲಿ ಇಂದು ಯಾವುದೇ ವಹಿವಾಟು ನಡೆಯುತ್ತಿಲ್ಲ. ದೀಪಾವಳಿಯ (Diwali) ಬಲಿಪಾಡ್ಯಮಿ ನಿಮಿತ್ತ ಮಾರುಕಟ್ಟೆ ತೆರೆದಿಲ್ಲ. ಅಕ್ಟೋಬರ್ 26ರಂದು ಮಾರುಕಟ್ಟೆಗಳಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ ಎಂದು ಬಿಎಸ್​ಇ ಹಾಗೂ ಎನ್ಎಸ್​ಇ ವೆಬ್​ಸೈಟ್​ಗಳಲ್ಲಿ ಉಲ್ಲೇಖಿಸಲಾಗಿದೆ.

ಬಿಎಸ್​ಇ ಅಧಿಕೃತ ವೆಬ್​ಸೈಟ್​ನಲ್ಲಿ ಉಲ್ಲೇಖಿಸಿರುವ ಈ ವರ್ಷದ ರಜಾ ದಿನಗಳ ಪಟ್ಟಿಯಲ್ಲಿ ಇಂದೂ ಸೇರಿದೆ. ಈ ಮಧ್ಯೆ, ಕರೆನ್ಸಿ ವಹಿವಾಟಿಗೂ ಇಂದು ರಜೆ ಇದೆ. ಇನ್ನು, ಷೇರು ಮಾರುಕಟ್ಟೆಯ ಮೊದಲ ಮೂರು ದಿನಗಳಲ್ಲಿ ರಜೆ ಇರುವ ಕಮಾಡಿಟಿ ಮಾರುಕಟ್ಟೆ ಕೊನೆಯ ರಜೆಯ ದಿನದ ಎರಡನೇ ಅವಧಿಯಲ್ಲಿ, ಅಂದರೆ ಸಂಜೆ 5ರ ನಂತರ ತುಸು ಹೊತ್ತು ವಹಿವಾಟು ನಡೆಸಲಿದೆ.

ಇದನ್ನೂ ಓದಿ: Petrol Price on October 26: ನೊಯ್ಡಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ, ಲಕ್ನೋದಲ್ಲಿ ಏರಿಕೆ; ನಿಮ್ಮ ನಗರದಲ್ಲಿ ಇಂದಿನ ದರವೆಷ್ಟು?

ಇದನ್ನೂ ಓದಿ
Petrol Price on October 26: ನೊಯ್ಡಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ, ಲಕ್ನೋದಲ್ಲಿ ಏರಿಕೆ; ನಿಮ್ಮ ನಗರದಲ್ಲಿ ಇಂದಿನ ದರವೆಷ್ಟು?
Gold Price Today: ಚಿನ್ನದ ದರ ತುಸು ಇಳಿಕೆ, ಹೆಚ್ಚಿದ ಬೆಳ್ಳಿ ಬೆಲೆ, ಪ್ರಮುಖ ನಗರಗಳ ದರ ವಿವರ ಇಲ್ಲಿದೆ
CCI Penalty on Google: ಗೂಗಲ್​ಗೆ ಮತ್ತೊಮ್ಮೆ ಭಾರಿ ದಂಡ ವಿಧಿಸಿದ ಸಿಸಿಐ, ಕಾರಣ ಇಲ್ಲಿದೆ
ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್​ನಿಂದ ಈ ವರ್ಷ ಪಡೆದ ಲಾಭಾಂಶವೆಷ್ಟು?

ನವೆಂಬರ್ 8ರಂದು ಕೂಡ ಬಿಎಸ್​ಇ, ಎನ್ಎಸ್​ಇ ರಜೆ ಇರಲಿವೆ. ಷೇರುಪೇಟೆ ರಜಾ ದಿನಗಳಂದು ಈಕ್ವಿಟಿ ವಿಭಾಗ, ಇಕ್ವಿಟಿ ಉತ್ಪನ್ನ ವಿಭಾಗ ಮತ್ತು ಎಸ್​ಎಲ್​ಬಿ ವಿಭಾಗಗಳಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ ಎಂದು ಬಿಎಸ್​ಇ ಹೇಳಿದೆ.

ಈ ಮಧ್ಯೆ, ದೇಶದ ಷೇರುಪೇಟೆಗಳ 7 ದಿನಗಳ ಓಟಕ್ಕೆ ಮಂಗಳವಾರ ತಡೆ ಬಿದ್ದಿತ್ತು. ಸತತ ಗಳಿಕೆಯ ಓಟ ಮುಂದುವರಿಸಿದ್ದ ಬಿಎಸ್​ಇ ಹಾಗೂ ಎನ್​ಎಸ್​ಇಗಳು ಮಂಗಳವಾರದ ವಹಿವಾಟಿನ ಕೊನೆಯಲ್ಲಿ ತುಸು ಕುಸಿತ ಕಂಡಿದ್ದವು. ಬಿಎಸ್​ಇ 317.87 ಅಂಶ ಇಳಿಕೆಯೊಂದಿಗೆ 59,513.79 ರಲ್ಲಿ ವಹಿವಾಟು ಕೊನೆಗೊಳಿಸಿದ್ದರೆ, ಎನ್​ಎಸ್​ಇ ನಿಫ್ಟಿ ಕೂಡ 74.40 ಇಳಿಕೆಯಾಗಿ 17,656.35 ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು. ಟೆಕ್ ಮಹೀಂದ್ರಾ, ಮಾರುತಿ, ಎಲ್​ ಆ್ಯಂಡ್ ಟಿ, ಡಾ. ರೆಡ್ಡೀಸ್, ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎನ್​ಟಿಪಿಸಿ ಷೇರುಗಳು ಗಳಿಕೆ ದಾಖಲಿಸಿದ್ದವು. ಸೋಮವಾರ ಸಂಜೆ ನಡೆದಿದ್ದ ಮುಹೂರ್ತ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ 524.51 ಅಂಶ ಏರಿಕೆ ಕಂಡು 89,831.66ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ನಿಫ್ಟಿ 154.45 ಅಂಶ ಚೇತರಿಕೆ ಕಂಡು 17,730.75ರಲ್ಲಿ ವಹಿವಾಟು ಕೊನೆಗೊಳಿಸಿತ್ತು.

ರೂಪಾಯಿ ಮೌಲ್ಯ ಮಾತ್ರ ಮಂಗಳವಾರ ಸಂಜೆ ವೇಳೆಗೆ ತುಸು ಚೇತರಿಕೆ ದಾಖಲಿಸಿ ಭರವಸೆ ಮೂಡಿಸಿತ್ತು. ಅಮೆರಿಕನ್ ಡಾಲರ್ ವಿರುದ್ಧ 7 ಪೈಸೆ ಚೇತರಿಕೆ ದಾಖಲಿಸಿದ ರೂಪಾಯಿ ಮೌಲ್ಯ ಕೊನೆಯಲ್ಲಿ 82.81 ರಲ್ಲಿ ವಹಿವಾಟು ಕೊನೆಗೊಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ