Stock Market Today: ಸೆನ್ಸೆಕ್ಸ್ 550 ಅಂಶ ಚೇತರಿಕೆ, 17,486ರಲ್ಲಿ ವಹಿವಾಟು ಮುಗಿಸಿದ ನಿಫ್ಟಿ
ಮುಂಬೈ ಷೇರುಪೇಟೆ ಸೂಚ್ಯಂಕ ಬಿಎಸ್ಇ ಮಂಗಳವಾರ 549.62 ಅಂಶ ಚೇತರಿಕೆಯೊಂದಿಗೆ 58,960.60ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ ಕೂಡ ಸತತ ಮೂರನೇ ದಿನವೂ ಉತ್ತಮ ವಹಿವಾಟು ದಾಖಲಿಸಿ ಶೇಕಡಾ 1ರ ಚೇತರಿಕೆ ಕಂಡಿದೆ.
ಮುಂಬೈ: ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ಮುಂಬೈ ಷೇರುಪೇಟೆ (Stock Market) ಸಂವೇದಿ ಸೂಚ್ಯಂಕ ಬಿಎಸ್ಇ (BSE) ಮಂಗಳವಾರ 549.62 ಅಂಶ ಚೇತರಿಕೆಯೊಂದಿಗೆ 58,960.60ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ (Nifty) ಕೂಡ ಸತತ ಮೂರನೇ ದಿನ ಉತ್ತಮ ವಹಿವಾಟು ದಾಖಲಿಸಿ ಶೇಕಡಾ 1ರ ಚೇತರಿಕೆ ಕಂಡಿದೆ. 175.15 ಅಂಶ ಚೇತರಿಕೆಯೊಂದಿಗೆ 17,486.95ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.
0.75 ಶೇಕಡಾ ಚೇತರಿಕೆಯೊಂದಿಗೆ ದಿನದ ಆರಂಭದ ವಹಿವಾಟು ಆರಂಭಿಸಿದ್ದ ಸೆನ್ಸೆಕ್ಸ್ ಒಂದು ಹಂತದಲ್ಲಿ 59,143.66 ರ ವರೆಗೂ ತಲುಪಿತ್ತು. ನಿಫ್ಟಿ ಸಹ ಒಂದು ಹಂತದಲ್ಲಿ 17,527.80 ರ ವರೆಗೆ ವಹಿವಾಟು ದಾಖಲಿಸಿತ್ತು.
ಉತ್ತಮ ಗಳಿಕೆ ದಾಖಲಿಸಿ ಕಂಪನಿಗಳು:
ಸೆನ್ಸೆಕ್ಸ್ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನೆಸ್ಲೆ ಇಂಡಿಯಾ, ಐಟಿಸಿ, ಭಾರ್ತಿ ಏರ್ಟೆಲ್, ಇಂಡಸ್ಇಂಡ್ ಬ್ಯಾಂಕ್, ಎಲ್ ಆ್ಯಂಡ್ ಟಿ, ಮಹೀಂದ್ರಾ & ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಎಚ್ಸಿಎಲ್ ಟೆಕ್ನಾಲಜೀಸ್ ಉತ್ತಮ ಗಳಿಕೆ ದಾಖಲಿಸಿವೆ.
ಮತ್ತೊಂದೆಡೆ ಎಚ್ಡಿಎಫ್ಸಿ, ಎನ್ಟಿಪಿಸಿ, ಟೆಕ್ ಮಹೀಂದ್ರಾ, ಸನ್ ಫಾರ್ಮಾಸ್ಯೂಟಿಕಲ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್ ಷೇರು ಮೌಲ್ಯದಲ್ಲಿ ಕುಸಿತವಾಗಿದೆ.
ಜಾಗತಿಕ ಮಾರುಕಟ್ಟೆ ವಹಿವಾಟು ಹೇಗಿದೆ?:
ಯುರೋಪ್ ಮತ್ತು ಏಷ್ಯಾ ಮಾರುಕಟ್ಟೆಗಳಲ್ಲಿ ಮಂಗಳವಾರ ಸಂಜೆ 5 ಗಂಟೆ ವೇಳೆಗೆ ಷೇರು ಮೌಲ್ಯ ವೃದ್ಧಿಯಾಗಿವೆ. ಯುಎಸ್ ಫ್ಯೂಚರ್ಸ್ ಅಡ್ವಾನ್ಸ್ಡ್ ಗಳಿಕೆ ದಾಖಲಿಸಿದೆ. ಜಪಾನಿನ ಯೆನ್ ಕರೆನ್ಸಿ ಎದುರು ಅಮೆರಿಕನ್ ಡಾಲರ್ 149ರಲ್ಲಿ ವಹಿವಾಟು ನಡೆಸಿದೆ.
ಇದನ್ನೂ ಓದಿ: GPF Rule Change 2022: ಜಿಪಿಎಫ್ನಲ್ಲಿ ವರ್ಷಕ್ಕೆ ಎಷ್ಟು ಹೂಡಿಕೆ ಮಾಡಬಹುದು? ನಿಯಮದಲ್ಲಿ ಬದಲಾವಣೆ ಮಾಡಿದ ಕೇಂದ್ರ
ಜರ್ಮನಿಯ ಡಿಎಎಕ್ಸ್ ಶೇಕಡಾ 0.9ರಷ್ಟು ಏರಿಕೆ ಕಂಡಿದೆ. ಪ್ಯಾರಿಸ್ನಲ್ಲಿ ‘ಸಿಎಸಿ 40’ ಶೇಕಡಾ 0.4 ಏರಿಕೆ ದಾಖಲಿಸಿದೆ. ಲಂಡನ್ನಲ್ಲಿ ‘ಎಫ್ಟಿಎಸ್ಇ 100’ ಶೇಕಡಾ 0.06 ಗಳಿಕೆ ದಾಖಲಿಸಿದೆ.
ವಾರದ ಆರಂಭದ ವಹಿವಾಟಿನಲ್ಲಿ ಸೋಮವಾರ ಬೆಳಿಗ್ಗೆ ಬಿಎಸ್ಇ ಹಾಗೂ ನಿಫ್ಟಿ ತುಸು ಕುಸಿತ ಕಂಡಿದ್ದವು. ಆದರೆ ದಿನದ ಕೊನೆಯಲ್ಲಿ ತುಸು ಹೆಚ್ಚಳ ದಾಖಲಿಸುವ ಮೂಲಕ ಭರವಸೆ ಮೂಡಿಸಿದ್ದವು.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Tue, 18 October 22