AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನ ಭಕ್ತನಿಗೆ ಮೊದಲು ನಮಿಸುವ ಪ್ರಧಾನಿ ಮೋದಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬುಧವಾರದಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು, ಇದೇ ನಗರದ ಹನುಮಾನ್ ಗರ್ಹಿಯಲ್ಲಿರುವ ಭಗವಾನ್ ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಅವರು ಹಾಗೆ ಮಾಡಲು ಕಾರಣವಿದೆಯೆಂದು ಸುಮಾರು 1,700 ವರ್ಷಗಳಷ್ಟು ಪ್ರಾಚೀನ ಹನುಮಾನ್ ದೇವಸ್ಥಾನದ ಆರ್ಚಕ ಮಧುವನ್ ದಾಸ್ ಹೇಳುತ್ತಾರೆ. ಪ್ರಧಾನಿ ಮೋದಿಯವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಬುಧುವಾರ ಬೆಳಗ್ಗೆ 9:00 ಗಂಟೆಗೆ ಹನುಮಾನ್ ಮಂದಿರಕ್ಕೆ ಭೇಟಿ ನೀಡಲಿದ್ದು, ಅರ್ಚಕರು ಪೂಜಾ ಕೈಂಕರ್ಯಗಳನ್ನು ಪೂರೈಸಲು […]

ರಾಮನ ಭಕ್ತನಿಗೆ ಮೊದಲು ನಮಿಸುವ ಪ್ರಧಾನಿ ಮೋದಿ!
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 04, 2020 | 6:20 PM

Share

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬುಧವಾರದಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು, ಇದೇ ನಗರದ ಹನುಮಾನ್ ಗರ್ಹಿಯಲ್ಲಿರುವ ಭಗವಾನ್ ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಅವರು ಹಾಗೆ ಮಾಡಲು ಕಾರಣವಿದೆಯೆಂದು ಸುಮಾರು 1,700 ವರ್ಷಗಳಷ್ಟು ಪ್ರಾಚೀನ ಹನುಮಾನ್ ದೇವಸ್ಥಾನದ ಆರ್ಚಕ ಮಧುವನ್ ದಾಸ್ ಹೇಳುತ್ತಾರೆ.

ಪ್ರಧಾನಿ ಮೋದಿಯವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಬುಧುವಾರ ಬೆಳಗ್ಗೆ 9:00 ಗಂಟೆಗೆ ಹನುಮಾನ್ ಮಂದಿರಕ್ಕೆ ಭೇಟಿ ನೀಡಲಿದ್ದು, ಅರ್ಚಕರು ಪೂಜಾ ಕೈಂಕರ್ಯಗಳನ್ನು ಪೂರೈಸಲು ಏಳು ನಿಮಿಷಗಳ ಕಾಲಾವಕಾಶ ಒದಗಿಸಲಾಗಿದೆ. ಅವರ ಭೇಟಿಯ ಹಿಂದಿರುವ ಕಾರಣದ ಬಗ್ಗೆ ದಾಸ್ ಹೀಗೆ ಹೇಳುತ್ತಾರೆ.

“ಭಗವಾನ್ ರಾಮನ ಪರಮ ಭಕ್ತನಾದ ಭಗವಾನ್ ಹನುಮಾನನಿಲ್ಲದೆ ರಾಮನ ಯಾವ ಕಾರ್ಯವೂ ಆರಂಭವಾಗುವುದಿಲ್ಲ. ಹಾಗಾಗೇ, ಮೋದಿ ಜೀ ಮತ್ತು ಯೋಗೀ ಜೀ ಅವರು ಹನುಮಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸುತ್ತಾರೆ. ಅದಾದ ನಂತರವೇ ಅವರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ರಾಮಮಂದಿರ ನಿರ್ಮಾಣ ಕೆಲಸ ವಿಘ್ನಗಳಿಲ್ಲದೆ, ನಿರಾತಂಕವಾಗಿ ಪೂರ್ಣಗೊಳ್ಳಬೇಕಾದರೆ, ಭಗವಾನ್ ಹನುಮಾನನ ಆಶೀರ್ವಾದಗಳನ್ನು ಪಡೆಯುವುದು ಅತ್ಯಂತ ಅವಶ್ಯಕವಾಗಿದೆ”.

ಗಣ್ಯರ ದೇವಸ್ಥಾನದ ಭೇಟಿ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಸೂಚನೆ ಬಂದಿದೆಯೆಂದು ಹೇಳುವ ಅರ್ಚಕ ದಾಸ್, “ನಾವು ಆದೇಶವನ್ನು ಅಕ್ಷರಶಃ ಪಾಲಿಸುತ್ತೇವೆ. ಪ್ರಧಾನಿಯವರು, ಮಂದಿರದ ಆವರಣದಲ್ಲಿರುವಾಗ ಯಾರನ್ನೂ ಅವರ ಹತ್ತಿರಕ್ಕೆ ಬಿಡುವುದಿಲ್ಲ. ಹಾಗೆಯೇ, ಪ್ರಧಾನಿಗಳಿಗೆ ಪ್ರಸಾದ ನೀಡಬಾರದೆಂದು ಅರ್ಚಕರಿಗೆ ಸೂಚಿಸಲಾಗಿದೆ,” ಎಂದರು.