ಕಂಪ್ಯೂಟರ್​ ಮೂಷಿಕನ ಸಹ-ನಿರ್ಮಾತೃ ವಿಲಿಯಮ್​ ಇಂಗ್ಲಿಷ್​ ನಿಧನ

ಕಂಪ್ಯೂಟರ್​ ಬಳಸುವವರ ಜೀವನ ಸರಳಮಾಡಿಕೊಟ್ಟ ಮೌಸ್​ನ ಸಹ ಆವಿಷ್ಕಾರಕ ವಿಲಿಯಮ್​ ಇಂಗ್ಲಿಷ್​ ಜುಲೈ 26ರಂದು ನಿಧನರಾಗಿದ್ದಾರೆ. ಅಮೆರಿಕಾದ ಕೆಂಟಕಿಯಲ್ಲಿ ಜನಿಸಿದ 91 ವರ್ಷದ ಇಂಗ್ಲಿಷ್​ ತಮ್ಮ ಸಹೋದ್ಯೋಗಿ ಡಗ್​ ಎಂಗಲ್​ಬರ್ಟ್​ ಜೊತೆ ಸೇರಿ ಮೌಸ್​ ಸಾಧನವನ್ನ ಆವಿಷ್ಕರಿಸಿದ್ದರು. ಆದರೆ, 1963ರಲ್ಲಿ ಆವಿಷ್ಕರಿಸಲಾದ ಮೌಸ್​ ಜನಪ್ರಿಯವಾಗಿದ್ದು ಮಾತ್ರ ಹಲವು ದಶಕಗಳ ನಂತರ. ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಸಂಶೋಧನಾ ಸಂಸ್ಥೆಯಲ್ಲಿ ಈ ಜೋಡಿ ಕೆಲಸ ಮಾಡುವಾಗ ಕಂಪ್ಯೂಟರ್​ ಸ್ಕ್ರೀನ್​ ಮೇಲೆ ಕಾಣುವ ಪದಗಳು ಅಥವಾ ಅಕ್ಷರಗಳನ್ನು ಸುಲಭವಾಗಿ ಸೆಲೆಕ್ಟ್​ ಮಾಡಲು ಉಪಾಯವೊಂದನ್ನು […]

ಕಂಪ್ಯೂಟರ್​ ಮೂಷಿಕನ ಸಹ-ನಿರ್ಮಾತೃ ವಿಲಿಯಮ್​ ಇಂಗ್ಲಿಷ್​ ನಿಧನ
Follow us
KUSHAL V
| Updated By: ಆಯೇಷಾ ಬಾನು

Updated on:Nov 23, 2020 | 12:10 PM

ಕಂಪ್ಯೂಟರ್​ ಬಳಸುವವರ ಜೀವನ ಸರಳಮಾಡಿಕೊಟ್ಟ ಮೌಸ್​ನ ಸಹ ಆವಿಷ್ಕಾರಕ ವಿಲಿಯಮ್​ ಇಂಗ್ಲಿಷ್​ ಜುಲೈ 26ರಂದು ನಿಧನರಾಗಿದ್ದಾರೆ. ಅಮೆರಿಕಾದ ಕೆಂಟಕಿಯಲ್ಲಿ ಜನಿಸಿದ 91 ವರ್ಷದ ಇಂಗ್ಲಿಷ್​ ತಮ್ಮ ಸಹೋದ್ಯೋಗಿ ಡಗ್​ ಎಂಗಲ್​ಬರ್ಟ್​ ಜೊತೆ ಸೇರಿ ಮೌಸ್​ ಸಾಧನವನ್ನ ಆವಿಷ್ಕರಿಸಿದ್ದರು. ಆದರೆ, 1963ರಲ್ಲಿ ಆವಿಷ್ಕರಿಸಲಾದ ಮೌಸ್​ ಜನಪ್ರಿಯವಾಗಿದ್ದು ಮಾತ್ರ ಹಲವು ದಶಕಗಳ ನಂತರ. ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಸಂಶೋಧನಾ ಸಂಸ್ಥೆಯಲ್ಲಿ ಈ ಜೋಡಿ ಕೆಲಸ ಮಾಡುವಾಗ ಕಂಪ್ಯೂಟರ್​ ಸ್ಕ್ರೀನ್​ ಮೇಲೆ ಕಾಣುವ ಪದಗಳು ಅಥವಾ ಅಕ್ಷರಗಳನ್ನು ಸುಲಭವಾಗಿ ಸೆಲೆಕ್ಟ್​ ಮಾಡಲು ಉಪಾಯವೊಂದನ್ನು ಹುಡುಕುತ್ತಿದ್ದರು. ಆಗಲೇ ನೋಡಿ ಹುಟ್ಟಿದ್ದು ಕಂಪ್ಯೂಟರ್​ ಮೌಸ್​.

ಡಗ್​ ರಚಿಸಿದ ಮೌಸ್​ನ ವಿನ್ಯಾಸಕ್ಕೆ ರೂಪರೇಷೆ ನೀಡಿದ್ದು ವಿಲಿಯಮ್. ಮರದಿಂದ ಮಾಡಿರುವ ಪುಟ್ಟ ಡಬ್ಬಿಯಂತೆ ಹೋಲುತ್ತಿದ ಮೊದಲ ಮೌಸ್​ನಲ್ಲಿ ಕೇವಲ ಒಂದೇ ಬಟನ್​ ಹಾಗೂ ಎರಡು ಗಾಲಿಗಳನ್ನ ಲಂಬಕೋನಾಕಾರದಲ್ಲಿ (90 degrees) ಅಳವಡಿಸಲಾಗಿತ್ತು. ಇದರಿಂದ ಬಹು ಸುಲಭವಾಗಿ ಸ್ಕ್ರೀನ್​ ಮೇಲೆ ಪದಗಳನ್ನ ಸೆಲೆಕ್ಟ್​ ಮಾಡಲು ಸಾಧ್ಯವಾಗಿತ್ತು.

ಅಂದು ಸರಳವಾಗಿ ಬಳಕೆಗೆ ಮೌಸ್​ ಇದೀಗ ಹೊಸ ಹೊಸ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಅಚ್ಚರಿಯ ಸಂಗತಿಯೆಂದರೆ ಈ ಸಾಧನಕ್ಕೆ ಮೌಸ್​ ಎಂದು ಯಾರು ಹೆಸರಿಟ್ಟರು ಅನ್ನೋದು ಡಗ್​ ಮತ್ತು ವಿಲಿಯಮ್​ಗೆ ಗೊತ್ತೇಯಾಗಲಿಲ್ಲ. ಆದರೆ, ವಿಪರ್ಯಾಸವೆಂದರೆ, ಈ ಜೋಡಿ ತಮ್ಮ ಆವಿಷ್ಕಾರದಿಂದ ಒಂದು ನಯಾ ಪೈಸೆ ಗಳಿಸಲಿಲ್ಲವಂತೆ. ಆದರೂ, ತಮ್ಮ ಆವಿಷ್ಕಾರದ ಮೂಲಕ ಜನರ ಮನಸ್ಸಲ್ಲಿ ಶಾಶ್ವತವಾಗಿ ಗೌರವ ಪಡೆದಿದ್ದಾರೆ.

Published On - 12:57 pm, Tue, 4 August 20

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ