ಬೆಂಗಳೂರನ್ನ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಕರೀತಾರೆ. ಈಗೀಗ ಗಾರ್ಬೇಜ್ ಸಿಟಿ, ಪಲ್ಯೂಶನ್ ಸಿಟಿ ಅಂತಾನೂ ಕರೀತಾರೆ. ಅಷ್ಟರಮಟ್ಟಿಗೆ ರಾಜಧಾನಿಯ ಗಾಳಿ ವಿಷಯುಕ್ತವಾಗ್ತಿದೆ. ಈಗಲೇ ಎಚ್ಚೆತ್ತುಕೊಂಡ್ರೆ ಒಳ್ಳೇದು. ಇಲ್ಲದಿದ್ರೆ ಮುಂದೊಂದು ದಿನ ದಿಲ್ಲಿ ಸ್ಥಿತಿ ಬೆಂಗಳೂರಿಗೂ ಬರೋ ಸಾಧ್ಯತೆ ದಟ್ಟವಾಗಿದೆ.
ಮುಂಜಾನೆ ವಾಕ್ ಮಾಡೋರಿಗೂ ಡೇಂಜರ್ ವೆದರ್:
ಸಿಲಿಕಾನ್ ಸಿಟಿ ಬೆಂಗಳೂರು ಕಳೆದೊಂದು ದಶಕದಿಂದ ಪಲ್ಯೂಶನ್ ಸಿಟಿ ಅನ್ನೋ ಹಣೆಪಟ್ಟಿ ಕಟ್ಟಿಕೊಳ್ತಿದೆ. ನಗರದಲ್ಲಿ ಹೆಚ್ಚಾಗ್ತಿರೋ ಧೂಳಿನ ಕಣಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಿಎಂ ಮೌಲ್ಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ರೋಗಗಳ ಸಂಖ್ಯೆ ಕೂಡ ಏರುತ್ತಿದೆ. ಅದ್ರಲ್ಲೂ ನವೆಂಬರ್ ಟು ಮಾರ್ಚ್ ಸಿಟಿ ಮಂದಿಗೆ ವೆರಿ ವೆರಿ ಡೇಂಜರಸ್.
ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ ಮಾಲಿನ್ಯ:
ಅಂದ್ಹಾಗೆ ಆರೋಗ್ಯಯುತ ಗಾಳಿಗೆ ಪಿಎಂ10 ಅಂದ್ರೆ ಧೂಳಿನ ಕಣಗಳ ಮೌಲ್ಯ 100ರೊಳಗೆ ಇರಬೇಕು. ಶುದ್ಧ ಗಾಳಿಗೆ ಪಿಎಂ10 ಮೌಲ್ಯ ಝೀರೋ ಟು 50 ವರೆಗೆ ಇರಬೇಕು. ಸದ್ಯ ನಗರದಲ್ಲಿ ಪಿಎಂ10 ಪ್ರಮಾಣ 400ರಿಂದ 500ರವರೆಗೆ ರೀಚ್ ಆಗಿದೆ. ಕಳೆದ ವರ್ಷ ಈ ಪ್ರಮಾಣ 350ರಿಂದ 400 ಇತ್ತು. ಈ ಸಲ 100 ರಷ್ಟು ಧೂಳಿನ ಕಣಗಳ ಪ್ರಮಾಣ ಹೆಚ್ಚಾಗಿದೆ. ವಾಹನ ಹಾಗೂ ಕಾರ್ಖಾನೆಗಳ ಹೊಗೆ, ಕಟ್ಟಡಗಳ ಧೂಳಿನಿಂದಲೇ ವಾಯು ಮಾಲಿನ್ಯ ಹೆಚ್ಚಾಗ್ತಿದೆ. ಇದರಿಂದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ, ಚರ್ಮ ರೋಗ, ಮೆದುಳಿಗೆ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚಿದೆ.
ಇಷ್ಟೆಲ್ಲಾ ಇದ್ರೂ ಮಾಲಿನ್ಯ ನಿಯಂತ್ರಣ ಮಂಡಳಿ ಸರಿಯಾಗಿ ಮಾಲಿನ್ಯವನ್ನ ನಿಯಂತ್ರಿಸುತ್ತಿಲ್ಲವೆಂಬ ಮಾತುಗಳು ಕೇಳಿ ಬಂದಿದೆ. ಹೀಗಾಗಿ, ದೆಹಲಿ ರೀತಿಯ ಸಿಚುವೇಶನ್ ಮುಂದಿನ ದಿನಗಳಲ್ಲಿ ಇಲ್ಲೂ ಬರಬಹುದು. ಸೋ ಈಗಲೇ ಎಚ್ಚೆತ್ತುಕೊಂಡ್ರೆ ಒಳ್ಳೇದು ಅಂತಾರೆ ಪರಿಸರ ತಜ್ಞರು.
Published On - 3:11 pm, Thu, 14 November 19