ಬೆಂಗಳೂರಿನಲ್ಲಿ ಏರ್‌ ಶೋ-2021ಕ್ಕೆ ದಿನಾಂಕ ನಿಗದಿ; ಸಾರ್ವಜನಿಕರಿಗಿಲ್ಲ ಲೋಹದ ಹಕ್ಕಿ ಚಮತ್ಕಾರ ನೋಡುವ ಅವಕಾಶ

| Updated By: ಸಾಧು ಶ್ರೀನಾಥ್​

Updated on: Jan 06, 2021 | 5:13 PM

ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ಏರ್​ ಶೋಗೆ ಈ ವರ್ಷವೂ ಸಹ ದಿನಾಂಕ ನಿಗದಿ ಮಾಡಲಾಗಿದೆ. ಫೆಬ್ರುವರಿ 3 ರಿಂದ ಏರ್​ ಶೋ ಆರಂಭವಾಗಿ, ಫೆಬ್ರುವರಿ 5 ವರೆಗೂ ನಡೆಯಲಿದೆ. ಪ್ರತಿ ವರ್ಷ ಐದು ದಿನಗಳ ಕಾಲ ನಡೆಯುತ್ತಿದ್ದ ಏರ್​ ಶೋವನ್ನು ಕೊರೊನಾ ಕಾರಣ ನೀಡಿ ಐದು ದಿನದಿಂದ ಮೂರು ದಿನಕ್ಕೆ ಇಳಿಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಏರ್‌ ಶೋ-2021ಕ್ಕೆ ದಿನಾಂಕ ನಿಗದಿ; ಸಾರ್ವಜನಿಕರಿಗಿಲ್ಲ ಲೋಹದ ಹಕ್ಕಿ ಚಮತ್ಕಾರ ನೋಡುವ ಅವಕಾಶ
Follow us on

ಬೆಂಗಳೂರು: ನಗರದ ಪ್ರತಿಷ್ಠೆ ಎನಿಸಿಕೊಂಡಿರುವ ಲೋಹದ ಹಕ್ಕಿಗಳ ಹಾರಾಟ ಇಡೀ ಪ್ರಪಂಚದಲ್ಲಿಯೇ ಹೆಸರುವಾಸಿಯಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರತಿವರ್ಷ ನಡೆಯುವ ಏರ್ ಶೋಗೆ ವಿದೇಶದಿಂದಲೂ ನಾನಾ ಬಗೆಯ, ವಿಶಿಷ್ಟ ಎನಿಸುವ ಲೋಹದ ಹಕ್ಕಿಗಳು ಬರುತ್ತಿದ್ದವು. ಅಲ್ಲದೆ ಈ ಏರ್​ ಶೋ ನೋಡಲು ಭಾರತದಿಂದಲ್ಲದೆ ವಿದೇಶದಿಂದಲೂ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದರು.

ಏರ್ ಶೋ 2021ಗೆ ದಿನಾಂಕ ನಿಗದಿ..
ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ಏರ್​ ಶೋಗೆ ಈ ವರ್ಷವೂ ಸಹ ದಿನಾಂಕ ನಿಗದಿ ಮಾಡಲಾಗಿದೆ. ಫೆಬ್ರುವರಿ 3 ರಿಂದ ಏರ್​ ಶೋ ಆರಂಭವಾಗಿ, ಫೆಬ್ರುವರಿ 5 ವರೆಗೂ ನಡೆಯಲಿದೆ. ಪ್ರತಿ ವರ್ಷ ಐದು ದಿನಗಳ ಕಾಲ ನಡೆಯುತ್ತಿದ್ದ ಏರ್​ ಶೋವನ್ನು ಕೊರೊನಾ ಕಾರಣ ನೀಡಿ ಐದು ದಿನದಿಂದ ಮೂರು ದಿನಕ್ಕೆ ಇಳಿಕೆ ಮಾಡಲಾಗಿದೆ.

ಈ ಬಾರಿಯ ಏರ್​ ಶೋ ವೀಕ್ಷಿಸಲು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದು, ಕೇವಲ ಬ್ಯುಸಿನೆಸ್ ವಿಸಿಟರ್ಸ್​ಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರಲ್ಲಿ ಭಾರಿ ನಿರಾಸೆ ಉಂಟಾಗಿದ್ದು, ಗಗನದಲ್ಲಿ ಲೋಹದ ಹಕ್ಕಿಗಳು ನಿರ್ಮಿಸುತ್ತಿದ್ದ ಚಮತ್ಕಾರವನ್ನು ಕಣ್ತುಂಬಿಕೊಳ್ಳುವುದನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ.