ಬದುಕುಳಿದರೂ, ಅಡಿಯಿಂದ ಮುಡಿಯವರೆಗೆ ಕಾಡಲಿದೆ ಕೊರೊನಾ ಕ್ರಿಮಿ! ಏನದು?
ಎಷ್ಟೇ ಪ್ರಯತ್ನಪಟ್ರೂ ಹೆಮ್ಮಾರಿ ಕೊರೊನಾ ನಿಯಂತ್ರಣ ಮಾಡಲು ಆಗುತ್ತಿಲ್ಲ. ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಾ ಜನರನ್ನ ಬೆಚ್ಚಿ ಬೀಳಿಸುತ್ತಿದೆ. ಇದೀಗ ಬದುಕುಳಿದರೂ ಅಡಿಯಿಂದ ಮುಡಿಯವರೆಗೆ ಕೊರೊನಾ ಕ್ರಿಮಿ ಕಾಡಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಶ್ವಾಸಕೋಶಗಳಿಗೆ ಅಟ್ಯಾಕ್ ಆಗುವ ಕೊರೊನಾ ಕ್ರಿಮಿ, ನಿಧಾನವಾಗಿ ತಲೆಯಿಂದ ಕಾಲಿನ ಬೆರಳಿನವರೆಗೂ ವೈರಸ್ನಿಂದ ರಕ್ತ ಹೆಪ್ಪುಗಟ್ಟುತ್ತಿರುವುದು ಗೋಚರವಾಗುತ್ತಿದೆ. ಇದು ಕಳೆದ ಎರಡು ತಿಂಗಳಲ್ಲಿ ವಿಶ್ಯದಾದ್ಯಂತ ಅನೇಕ ವೈದ್ಯರ ಗಮನಕ್ಕೆ ಬಂದಿದ್ದು, ಅದರ ಆಧಾರದ ಮೇಲೆ ಈ ರೋಗ ಲಕ್ಷಣಗಳು ಪತ್ತೆಯಾಗಿವೆ. 1. […]
ಎಷ್ಟೇ ಪ್ರಯತ್ನಪಟ್ರೂ ಹೆಮ್ಮಾರಿ ಕೊರೊನಾ ನಿಯಂತ್ರಣ ಮಾಡಲು ಆಗುತ್ತಿಲ್ಲ. ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಾ ಜನರನ್ನ ಬೆಚ್ಚಿ ಬೀಳಿಸುತ್ತಿದೆ. ಇದೀಗ ಬದುಕುಳಿದರೂ ಅಡಿಯಿಂದ ಮುಡಿಯವರೆಗೆ ಕೊರೊನಾ ಕ್ರಿಮಿ ಕಾಡಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.
ಶ್ವಾಸಕೋಶಗಳಿಗೆ ಅಟ್ಯಾಕ್ ಆಗುವ ಕೊರೊನಾ ಕ್ರಿಮಿ, ನಿಧಾನವಾಗಿ ತಲೆಯಿಂದ ಕಾಲಿನ ಬೆರಳಿನವರೆಗೂ ವೈರಸ್ನಿಂದ ರಕ್ತ ಹೆಪ್ಪುಗಟ್ಟುತ್ತಿರುವುದು ಗೋಚರವಾಗುತ್ತಿದೆ. ಇದು ಕಳೆದ ಎರಡು ತಿಂಗಳಲ್ಲಿ ವಿಶ್ಯದಾದ್ಯಂತ ಅನೇಕ ವೈದ್ಯರ ಗಮನಕ್ಕೆ ಬಂದಿದ್ದು, ಅದರ ಆಧಾರದ ಮೇಲೆ ಈ ರೋಗ ಲಕ್ಷಣಗಳು ಪತ್ತೆಯಾಗಿವೆ.
1. ಸೋಂಕಿತರಲ್ಲಿ ಮಾರಣಾಂತಿಕವಾಗಿ ರಕ್ತ ಹೆಪ್ಪುಗಟ್ಟಬಹುದು. ಇದಕ್ಕೆ ದೀರ್ಘಕಾಲಿಕ ಚಿಕಿತ್ಸೆ ನೀಡಬೇಕಾಗುತ್ತದೆ. 2. ಪಾದದ ಮೇಲೆ,ಕಾಲಿನ ಬೆರಳುಗಳ ಸುತ್ತ ಗಂಟುಗಳು ಆಗುವುದು. ಅದನ್ನು ವೈದ್ಯರು ಕೊವಿಡ್ ಟೊ (covid toe) ಎಂದು ಕರೆಯತೊಡಗಿದ್ದಾರೆ 3. ಅಲ್ಲದೆ, ಕೊರೊನಾ ಸೋಂಕಿನ ಪ್ರಭಾವದಿಂದ ಪಾರ್ಶ್ವವಾಯು ಸಹ ಕಾಣಿಸಬಹುದು.
Published On - 3:07 pm, Tue, 5 May 20