ಹದಿ ಹರೆಯದವರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರ ಮನಸೆಳೆದಿರುವ Facebook ಸಾಮಾಜಿಕ ಜಾಲತಾಣ ಇದೀಗ ತನ್ನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ಹೌದು, ಸೆಪ್ಟೆಂಬರ್ 1ರಿಂದ ಡಿಜಿಟಲ್ ದಿಗ್ಗಜ ತನ್ನ ಹಳೆಯ ಕ್ಲಾಸಿಕ್ ಲುಕ್ ಸ್ವರೂಪವನ್ನು ತ್ಯಜಿಸಿ ಶಾಶ್ವತವಾಗಿ ಹೊಸ, ಆಕರ್ಷಕ ಮತ್ತು ಜನಸ್ನೇಹಿ ಅವತಾರದಲ್ಲಿ ತನ್ನ ಬಳಕೆದಾರರಿಗೆ ಸಿಗಲಿದೆ. ಅಂದ ಹಾಗೆ, ಕಳೆದ ವರ್ಷವೇ Facebook ತನ್ನ ಈ ಹೊಸ ರೂಪವನ್ನು ಜನರಿಗೆ ಪರಿಚಯಿಸಿತ್ತು. ಆದರೆ, ಇದನ್ನು ಇಷ್ಟಪಡದ ಮತ್ತು ಈ ಸ್ಟೈಲ್ಗೆ ಒಗ್ಗದವರಿಗೆ ತನ್ನ […]
Follow us on
ಹದಿ ಹರೆಯದವರಿಂದ ಹಿಡಿದು ಇಳಿ ವಯಸ್ಸಿನವರವರೆಗೂ ಎಲ್ಲರ ಮನಸೆಳೆದಿರುವ Facebook ಸಾಮಾಜಿಕ ಜಾಲತಾಣ ಇದೀಗ ತನ್ನ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ.
ಹೌದು, ಸೆಪ್ಟೆಂಬರ್ 1ರಿಂದ ಡಿಜಿಟಲ್ ದಿಗ್ಗಜ ತನ್ನ ಹಳೆಯ ಕ್ಲಾಸಿಕ್ ಲುಕ್ ಸ್ವರೂಪವನ್ನು ತ್ಯಜಿಸಿ ಶಾಶ್ವತವಾಗಿ ಹೊಸ, ಆಕರ್ಷಕ ಮತ್ತು ಜನಸ್ನೇಹಿ ಅವತಾರದಲ್ಲಿ ತನ್ನ ಬಳಕೆದಾರರಿಗೆ ಸಿಗಲಿದೆ. ಅಂದ ಹಾಗೆ, ಕಳೆದ ವರ್ಷವೇ Facebook ತನ್ನ ಈ ಹೊಸ ರೂಪವನ್ನು ಜನರಿಗೆ ಪರಿಚಯಿಸಿತ್ತು. ಆದರೆ, ಇದನ್ನು ಇಷ್ಟಪಡದ ಮತ್ತು ಈ ಸ್ಟೈಲ್ಗೆ ಒಗ್ಗದವರಿಗೆ ತನ್ನ ಹಳೆಯ ರೂಪವನ್ನು ಸಹ ಆಯ್ಕೆ ಮಾಡಿ ಬಳಸುವ ಅವಕಾಶ ನೀಡಿತ್ತು.
ಆದರೆ, ಸೆಪ್ಟೆಂಬರ್ 1ರಿಂದ Facebook ಈ ಆಯ್ಕೆಯನ್ನು ಹಿಂಪಡೆಯಲಿದ್ದು ತನ್ನ ಬಳಕೆದಾರರಿಗೆ ಮತ್ತಷ್ಟು ಆಕರ್ಷಕ ಹಾಗೂ ಉಪಯೋಗಿಸಲು ಸುಲಭವಾಗುವಂಥ ಬಳಕೆದಾರರ ಅಂತರಸಂಪರ್ಕ (user interface) ನೀಡಲಿದೆ. ಇದೀಗ, Facebook ಹೊಸ ಅವತಾರವನ್ನು ಬಳಸಲು ಸಾಕಷ್ಟು ಜನ ಉತ್ಸುಕರಾಗಿದ್ದಾರೆ.
Facebook ನ ನೂತನ ಬಳಕೆದಾರರ ಅಂತರಸಂಪರ್ಕದಲ್ಲಿ ಹೊಸತೇನಿದೆ?
1. Facebookನ ಹಳೆಯ ನೀಲಾಕಾಶ ಬಣ್ಣದ ಯೂಸರ್ ಇಂಟರ್ಫೇಸ್ ಇನ್ಮುಂದೆ ಸಿಗುವುದಿಲ್ಲ
2. ಕೆಳಕಂಡ ಕಡುಕಪ್ಪು ಹಿನ್ನೆಲೆಯುಳ್ಳ ಡಾರ್ಕ್ ಮೋಡ್ನಲ್ಲಿ Facebook ಕಾಣಿಸಲಿದ್ದು ಇದರಿಂದ ಬಳಕೆದಾರರ ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬರುವುದಿಲ್ಲ
3. ಇದಲ್ಲದೆ, ಗ್ರೂಪ್ಸ್ ಟ್ಯಾಬ್ನಲ್ಲೂ ಸಹ ಪರಿವರ್ತನೆ ತರಲಾಗಿದ್ದು ಇದು ಮತ್ತಷ್ಟು ಬಳಕೆದಾರ ಸ್ನೇಹಿಯಾಗಲಿದೆ