ಹೊಸ ಸಂಶೋಧನೆ: ಭೂಮಿ ಕೇವಲ ಹಿರಿ ಅಜ್ಜಿ ಅಲ್ಲ.. ಹಿರಿಯ ಮುತ್ತಜ್ಜಿ! ಹೇಗಂತೆ?
ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ ಇವಳದೇನು ಕರುಣೆಯೋ ಪ್ರೀತಿಯೋ.. ಹೊಟ್ಟೆಯ ತುಂಬಾ ಅನ್ನದ ಮಕ್ಕಳ ಹೆತ್ತವಳೇ.. ಈ ಸುಗ್ಗಿ ತಂದವಳು ಯಾರಮ್ಮಾ.. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ ಎಂಬ ಪುಟ್ನಂಜ ಸಿನಿಮಾದ ಹಾಡಿನ ಸಾಲಿನಂತೆ ನಮ್ಮ ಭೂಮಿ ತಾಯಿಗೆ ಆಕೆಗೆ ಎಷ್ಟೇ ತೊಂದರೆ ಕೊಟ್ಟರೂ ಕ್ಷಮಯಾಧರಿತ್ರಿ ನಗುತ್ತಲೇ ನಮ್ಮನ್ನು ಹರಸುತ್ತಾಳೆ, ಪೋಷಿಸುತ್ತಾಳೆ. ಮಾನವಕುಲದ ಹುಟ್ಟಿಗಿಂತ ಮೊದಲೇ ಇತರೆ ಜೀವಿಗಳನ್ನು ಬೆಳೆಸುತ್ತಾ ಪೋಷಿಸುತ್ತಾ ಬಂದಿರುವ ಭೂಮಿ ತಾಯಿ ಒಂಥರಾ ಹಿರಿಯಜ್ಜಿ ಇದ್ದಂಗೆ. ಇದೀಗ, ಭೂವಿಜ್ಞಾನಿಗಳು ನಡೆಸಿರುವ ಸಂಶೋಧನೆಯ […]
ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ ಇವಳದೇನು ಕರುಣೆಯೋ ಪ್ರೀತಿಯೋ.. ಹೊಟ್ಟೆಯ ತುಂಬಾ ಅನ್ನದ ಮಕ್ಕಳ ಹೆತ್ತವಳೇ.. ಈ ಸುಗ್ಗಿ ತಂದವಳು ಯಾರಮ್ಮಾ.. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ ಎಂಬ ಪುಟ್ನಂಜ ಸಿನಿಮಾದ ಹಾಡಿನ ಸಾಲಿನಂತೆ ನಮ್ಮ ಭೂಮಿ ತಾಯಿಗೆ ಆಕೆಗೆ ಎಷ್ಟೇ ತೊಂದರೆ ಕೊಟ್ಟರೂ ಕ್ಷಮಯಾಧರಿತ್ರಿ ನಗುತ್ತಲೇ ನಮ್ಮನ್ನು ಹರಸುತ್ತಾಳೆ, ಪೋಷಿಸುತ್ತಾಳೆ. ಮಾನವಕುಲದ ಹುಟ್ಟಿಗಿಂತ ಮೊದಲೇ ಇತರೆ ಜೀವಿಗಳನ್ನು ಬೆಳೆಸುತ್ತಾ ಪೋಷಿಸುತ್ತಾ ಬಂದಿರುವ ಭೂಮಿ ತಾಯಿ ಒಂಥರಾ ಹಿರಿಯಜ್ಜಿ ಇದ್ದಂಗೆ. ಇದೀಗ, ಭೂವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ಭೂಮಿ ಕೇವಲ ಹಿರಿಯಜ್ಜಿಯಲ್ಲ.. ಹಿರಿ ಮುತ್ತಜ್ಜಿ!
ಹೌದು, ಸಂಶೋಧಕರು ನಡೆಸಿರುವ ಪ್ರಯೋಗಗಳಿಂದ ದೊರೆತಿರುವ ಮಾಹಿತಿ ಪ್ರಕಾರ ಭೂಗರ್ಭದ ಒಳಭಾಗದ (Solid inner core) ಕಾಲಾವಧಿ 1 ರಿಂದ 1.3 ಬಿಲಿಯನ್ (100 ಕೋಟಿ ವರ್ಷ) ವರ್ಷಗಳಂತೆ. ಈ ಹಿಂದೆ ಇದರ ಕಾಲಾವಧಿಯನ್ನು 565 ಮಿಲಿಯನ್ ವರ್ಷಗಳು ಎಂದು ಅಂದಾಜಿಸಲಾಗಿತ್ತು. ಆದರೆ, ಪರಿಷ್ಕೃತ ಕಾಲಾವಧಿಯ ಪ್ರಕಾರ ಭೂಗರ್ಭದ ಒಳಭಾಗವು ಮತ್ತಷ್ಟು ಹಳೆಯದು ಎಂದು ತಿಳಿದುಬಂದಿದೆ.