16 ವರ್ಷಗಳ ಬಳಿಕ ತನ್ನ ಪ್ರಿಯತಮನನ್ನ ವರಿಸಿದ ಜಗತ್ತಿನ ಅತಿ ಕಿರಿಯ ಪ್ರಧಾನಿ!

ಬರೋಬ್ಬರಿ 16 ವರ್ಷಗಳ ಬಳಿಕ ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್ ತನ್ನ ಪ್ರಿಯಕರನನ್ನ ವರಿಸಿದ್ದಾರೆ. ಕಳೆದ ಶನಿವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ 34 ವರ್ಷದ ಪ್ರಧಾನಿ ಮರಿನ್​ ತನ್ನ ಬಹುದಿನಗಳ ಸಂಗಾತಿ ಹಾಗೂ ಮಾಜಿ ಫುಟ್​ಬಾಲ್​ ಆಟಗಾರ ಮಾರ್ಕಸ್​ ರಾಯಿಕೋನೆನ್​ರನ್ನ ವರಿಸಿದ್ದಾರೆ. ವಿವಾಹದ ಬಳಿಕ ಮಾತನಾಡಿದ ಸನ್ನಾ ಮರಿನ್ ನಾನು ಪ್ರೀತಿಸಿದ ಪುರುಷನೊಟ್ಟಿಗೆ ಬದುಕು ಹಂಚಿಕೊಳ್ಳುವ ಅವಕಾಶ ದೊರೆತಿರುವುದು ಸಂತಸ ತಂದುಕೊಟ್ಟಿದೆ ಎಂದು ತಮ್ಮ ಸಂತೋಷವನ್ನ ವ್ಯಕ್ತಪಡಿಸಿದರು. ನಾನು ಹಾಗೂ ನನ್ನ ಬಾಳ ಸಂಗಾತಿ ಜೀವನದಲ್ಲಿ […]

16 ವರ್ಷಗಳ ಬಳಿಕ ತನ್ನ ಪ್ರಿಯತಮನನ್ನ ವರಿಸಿದ ಜಗತ್ತಿನ ಅತಿ ಕಿರಿಯ ಪ್ರಧಾನಿ!
Follow us
KUSHAL V
|

Updated on: Aug 03, 2020 | 6:55 PM

ಬರೋಬ್ಬರಿ 16 ವರ್ಷಗಳ ಬಳಿಕ ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್ ತನ್ನ ಪ್ರಿಯಕರನನ್ನ ವರಿಸಿದ್ದಾರೆ. ಕಳೆದ ಶನಿವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ 34 ವರ್ಷದ ಪ್ರಧಾನಿ ಮರಿನ್​ ತನ್ನ ಬಹುದಿನಗಳ ಸಂಗಾತಿ ಹಾಗೂ ಮಾಜಿ ಫುಟ್​ಬಾಲ್​ ಆಟಗಾರ ಮಾರ್ಕಸ್​ ರಾಯಿಕೋನೆನ್​ರನ್ನ ವರಿಸಿದ್ದಾರೆ.

ವಿವಾಹದ ಬಳಿಕ ಮಾತನಾಡಿದ ಸನ್ನಾ ಮರಿನ್ ನಾನು ಪ್ರೀತಿಸಿದ ಪುರುಷನೊಟ್ಟಿಗೆ ಬದುಕು ಹಂಚಿಕೊಳ್ಳುವ ಅವಕಾಶ ದೊರೆತಿರುವುದು ಸಂತಸ ತಂದುಕೊಟ್ಟಿದೆ ಎಂದು ತಮ್ಮ ಸಂತೋಷವನ್ನ ವ್ಯಕ್ತಪಡಿಸಿದರು. ನಾನು ಹಾಗೂ ನನ್ನ ಬಾಳ ಸಂಗಾತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿದ್ದೇವೆ. ಆದರೆ, ಈ ಪಯಣದಲ್ಲಿ ನನ್ನೊಟ್ಟಿಗೆ ಸದಾ ಇದ್ದ ಮಾರ್ಕಸ್​ಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ ಎಂದರು.

ತಮ್ಮ 18 ನೇ ವಯಸ್ಸಿಗೇ ಪ್ರೀತಿಯಲ್ಲಿ ಬಿದ್ದ ಮರಿನ್​ ಹಾಗೂ ಮಾರ್ಕಸ್​ ಕಳೆದ 16 ವರ್ಷಗಳಿಂದ ಒಟ್ಟಾಗಿದ್ದಾರೆ. ಪ್ರೇಮ ಪಕ್ಷಿಗಳಿಗೆ ಮುದ್ದಾದ ಎರಡು ವರ್ಷದ ಹೆಣ್ಣುಮಗಳು ಸಹ ಇದ್ದಾಳೆ. ಕಳೆದ ಡಿಸೆಂಬರ್​ನಲ್ಲಿ ದೇಶದ ಪ್ರಧಾನ ಮಂತ್ರಿಯಾದ ಮರಿನ್​ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇವಲ 40 ಅತಿಥಿಗಳನ್ನ ಒಳಗೊಂಡ ಮದುವೆ ಸಮಾರಂಭದಲ್ಲಿ ಸನ್ನಾ ಮರೀನ್​ ಆಕರ್ಷಕ ವೈಟ್​ ಗೌನ್​ ಧರಿಸಿದ್ದು ಮಾರ್ಕಸ್​ ಟಕ್ಸೀಡೋದಲ್ಲಿ ಮಿಂಚುತ್ತಿದ್ದರು. ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ವಿವಾಹದ ಫೋಟೋಗಳನ್ನ ದಂಪತಿ ಹಂಚಿಕೊಂಡಿದ್ದು ಹಸನ್ಮುಖಿ ದಂಪತಿಯ ಕ್ಯೂಟ್​ ಫೋಟೋಗಳು ಇದೀಗ ಸಖತ್​ ಟ್ರೆಂಡ್​ ಆಗ್ತಿದೆ.

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ