Friendship Day 2022: ಅಂತಾರಾಷ್ಟ್ರೀಯ ಸ್ನೇಹ ದಿನದ ಶುಭಾಶಯಗಳು, ಇತಿಹಾಸ, ಮಹತ್ವಗಳು ಇಲ್ಲಿವೆ

ಇಂದು ವಿಶ್ವದಾದ್ಯಂತ ಸ್ನೇಹ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜನರು, ದೇಶಗಳು, ಸಂಸ್ಕೃತಿಗಳು ಮತ್ತು ವ್ಯಕ್ತಿಗಳ ನಡುವಿನ ಸ್ನೇಹವು ಶಾಂತಿಯನ್ನು ಪ್ರೇರೇಪಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 30 ಅನ್ನು ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು.

Friendship Day 2022: ಅಂತಾರಾಷ್ಟ್ರೀಯ ಸ್ನೇಹ ದಿನದ ಶುಭಾಶಯಗಳು, ಇತಿಹಾಸ, ಮಹತ್ವಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Jul 30, 2022 | 6:10 AM

ಗಳಿಸಿದ ಹಣ ಬಳಸುವ ತನಕ, ಗಳಿಸಿದ ಸ್ನೇಹ ಮಣ್ಣಿನಲ್ಲಿ ಮಣ್ಣಾಗಿ ಹೋಗುವ ತನಕ. ಇಂತಹ ಸುಂದರ ಸ್ನೇಹದ ಬಂಧದಿಂದಾಗಿ ಜೀವನವು ಅದ್ಭುತಗಳನ್ನು ಮಾಡಬಲ್ಲದು, ಸ್ನೇಹಿತರೊಂದಿಗೆ ಬೆರೆತಾಗ ಮನಸ್ಸಿನ ಒತ್ತಡಗಳನ್ನು ಕಡಿಮೆ ಮಾಡಬಹುದು, ಸ್ನೇಹವು ವ್ಯಕ್ತಿಗಳ ನಡುವೆ ಶಾಂತಿಯನ್ನು ನೆಲೆಸುತ್ತದೆ, ಸ್ವಾಭಿಮಾನವನ್ನು ಬಲಪಡಿಸುತ್ತದೆ. ಯಾವುದಕ್ಕೂ ಸರಿಸಾಟಿ ಇಲ್ಲದ ಈ ಸ್ನೇಹ ಸಂಬಂಧವನ್ನು ಗೌರವಿಸುವ ನಿಟ್ಟಿನಲ್ಲಿ ಜು.30ರಂದು ಅಂತಾರಾಷ್ಟ್ರೀಯ ಸ್ನೇಹ ದಿನ (International Friendship Day)ವನ್ನಾಗಿ ಆಚರಿಸಲಾಗುತ್ತದೆ. ಹಾಗಿದ್ದರೆ ಸ್ನೇಹ ದಿನ ಪ್ರಾರಂಭವಾಗಿದ್ದು ಯಾವಾಗ? ಇದರ ಇತಿಹಾಸ ಮತ್ತು ಮಹತ್ವಗಳನ್ನು ಈ ಸುದ್ದಿ ಮೂಲಕ ತಿಳಿದುಕೊಳ್ಳೋಣ.

ಸ್ನೇಹ ದಿನದ ಇತಿಹಾಸ

ಹಾಲ್‌ಮಾರ್ಕ್ ಕಾರ್ಡ್‌ಗಳ ಸಂಸ್ಥಾಪಕ ಜಾಯ್ಸ್ ಹಾಲ್ ಅವರು 1930ರ ಆಗಸ್ಟ್ 2ರಂದು ಸ್ನೇಹ ದಿನವನ್ನು ಆಚರಿಸಲು ನಿರ್ಧರಿಸಿಎದರ. ಈ ಆಚರಣೆ ಕೆಲವು ವರ್ಷಗಳವರೆಗೆ ನಡೆದುಕೊಂಡು ಬಂತಾದರೂ ಕಾಲಾನಂತರದಲ್ಲಿ ಜನರು ಆಚರಣೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡರು. ಈ ಆಚರಣೆಯ ಉದ್ದೇಶ ಶುಭಾಶಯ ಪತ್ರಗಳನ್ನು ಮಾರಾಟ ಮಾಡುವ ಗಿಮಿಕ್ ಎಂದು ಭಾವಿಸಲಾಯಿತು. ಅಷ್ಟೇ ಅಲ್ಲದೆ ಯುನೈಟೆಡ್ ಸ್ಟೇಟ್ಸ್​ನಲ್ಲಿ ಸ್ನೇಹ ದಿನಕ್ಕೆ ಘೋಷಣೆ ಮಾಡಲಾಗಿದ್ದ ರಜಾದಿನ ಕೂಡ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು.

ಅದಾಗ್ಯೂ, 1958ರಲ್ಲಿ ಅಂತಾರಾಷ್ಟ್ರೀಯ ನಾಗರಿಕ ಸಂಸ್ಥೆಯು ಜುಲೈ 30 ರಂದು ಮೊದಲ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಪ್ರಸ್ತಾಪಿಸಿತು. ಸೌಹಾರ್ದದ ಮೂಲಕ ಶಾಂತಿಯುತ ಸಂಸ್ಕೃತಿಯನ್ನು ಬೆಳೆಸಲು ಪ್ರಚಾರ ನಡೆಸಲಾಯಿತು. ವರ್ಷಗಳ ನಂತರ 1998 ರಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಜನರಲ್ ಕೋಫಿ ಅನ್ನಾನ್ ಅವರ ಪತ್ನಿ ನೇನ್ ಅನ್ನನ್ ಅವರು ವಿನ್ನಿ ದಿ ಪೂಹ್ ಅವರನ್ನು ಸ್ನೇಹಕ್ಕಾಗಿ ವಿಶ್ವದ ರಾಯಭಾರಿ ಎಂದು ಕರೆದರು. ಅಂತಿಮವಾಗಿ 2011ರ ಏಪ್ರಿಲ್ 27 ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಜುಲೈ 30 ಅನ್ನು ಅಧಿಕೃತ ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು.

ಸ್ನೇಹ ದಿನ ಮಹತ್ವ

ಜನರು, ದೇಶಗಳು, ಸಂಸ್ಕೃತಿಗಳು ಮತ್ತು ವ್ಯಕ್ತಿಗಳ ನಡುವಿನ ಸ್ನೇಹವು ಶಾಂತಿಯನ್ನು ಪ್ರೇರೇಪಿಸುತ್ತದೆ ಮತ್ತು ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂಬ ಉದ್ದೇಶದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 30 ಅನ್ನು ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು. ಈ ದಿನವನ್ನು ವಿಶೇಷ ದಿನವನ್ನಾಗಿ ಮಾಡಲು ಪ್ರಪಂಚದಾದ್ಯಂತ ಜನರು ತಮ್ಮ ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಾರೆ ಮತ್ತು ಒಟ್ಟಿಗೆ ಒಂದಷ್ಟು ಸಮಯ ಕಳೆಯುತ್ತಾರೆ, ಪಾರ್ಟಿಗಳನ್ನು ಆಯೋಜಿಸುತ್ತಾರೆ, ಲಾಂಗ್ ರೈಡ್ ಹೋಗುತ್ತಾರೆ, ಪ್ರವಾಸ ಕೈಗೊಳ್ಳುತ್ತಾರೆ, ಸುತ್ತಾಡಲು ಹೋಗುತ್ತಾರೆ. ಇನ್ನೂ ಕೆಲವರು ಉಡುಗೊರೆಗಳು, ಸಿಹಿತಿಂಡಿಗಳು, ಕಾರ್ಡ್‌ಗಳು ಮತ್ತು ಸ್ನೇಹ ಬ್ಯಾಂಡ್‌ಗಳನ್ನು ಕೂಡ ನೀಡಿ ಸ್ನೇಹ ದಿನವನ್ನು ಆಚರಿಸಿಕೊಳ್ಳುತ್ತಾರೆ.

ಯಾವೆಲ್ಲಾ ದೇಶಗಳಲ್ಲಿ ಯಾವ ದಿನಾಂಕದಂದು ಸ್ನೆಹ ದಿನ ಆಚರಿಸಲಾಗುತ್ತದೆ?

ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ವಾರ್ಷಿಕವಾಗಿ ಜುಲೈ 30 ರಂದು ಆಚರಿಸಲಾಗುತ್ತದೆ. ಆದಾಗ್ಯೂ, ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಾಂಗ್ಲಾದೇಶ, ಮಲೇಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ (ಯುಎಸ್) ಸೇರಿದಂತೆ ಅನೇಕ ದೇಶಗಳು ಪ್ರತಿ ವರ್ಷ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸುತ್ತವೆ.

ಶುಭಾಶಯ ಸಂದೇಶಗಳು

– ದೇವರ ನನಗೆ ಕೊಟ್ಟ ಅತ್ಯಂತ ಅಮೂಲ್ಯ ಕೊಡುಗೆ ನೀನು. ನಮ್ಮ ಜೀವನದುದ್ದಕ್ಕೂ ನಾವು ಉತ್ತಮ ಸ್ನೇಹಿತರಾಗಿ ಉಳಿಯಬೇಕೆಂದು ನಾನು ಬಯಸುತ್ತೇನೆ. ಸ್ನೇಹ ದಿನಾಚರಣೆಯ ಶುಭಾಶಯಗಳು!

– ನಿಜವಾದ ಸ್ನೇಹ ಸಿಗುವುದಿಲ್ಲ, ಅದನ್ನು ಗಳಿಸಬೇಕು. ನಿನ್ನ ಸ್ನೇಹ ನನಗೆ ಅತ್ಯಮೂಲ್ಯವಾದದ್ದು. ಏಕೆಂದರೆ ನಾನು ಅದನ್ನು ಗಳಿಸಿದ್ದೇನೆ. ಸ್ನೇಹಿತರ ದಿನದ ಶುಭಾಶಯಗಳು!

– ಹೇ ಬೆಸ್ಟೀ, ಹ್ಯಾಪಿ ಫ್ರೆಂಡ್​ಶಿಪ್​ ಡೇ! ನಾನು ಭೇಟಿಯಾದವರಲ್ಲಿ ಅತ್ಯಂತ ಕರುಣಾಮಯಿ ನೀವು, ತಮಾಷೆ ಮತ್ತು ಅತ್ಯಂತ ಸಹಾಯಕ ವ್ಯಕ್ತಿಗಳಲ್ಲಿ ನೀವೂ ಒಬ್ಬರು, ನಮ್ಮ ಸ್ನೇಹದ ಬಂಧ ಹೀಗೆ ಶಾಶ್ವತವಾಗಿ ಇರಲಿ… ಮತ್ತೊಮ್ಮೆ ಸ್ನೇಹ ದಿನದ ಶುಭಾಶಯಗಳು.

– ನಿಜವಾದ ಸ್ನೇಹದ ಅರ್ಥವನ್ನು ಅನುಭವಿಸಿದ ಅದೃಷ್ಟವಂತ ವ್ಯಕ್ತಿಗಳಲ್ಲಿ ನಾನೂ ಒಬ್ಬ. ನನ್ನ ಕುಚ್ಚಿಕು ಗೆಳೆಯನಿಗೆ ಸ್ನೇಹಿತರ ದಿನದ ಶುಭಾಶಯಗಳು.

ಉಲ್ಲೇಖಗಳು

“ಸ್ನೇಹವು ನಿಸ್ಸಂಶಯವಾಗಿ ನಿರಾಶೆಯ ಪ್ರೀತಿಯ ನೋವುಗಳಿಗೆ ಅತ್ಯುತ್ತಮವಾದ ಮುಲಾಮು” -ಜೇನ್ ಆಸ್ಟೆನ್

“ಸ್ನೇಹದ ಭಾಷೆ ಪದಗಳಲ್ಲ, ಆದರೆ ಅರ್ಥಗಳು” -ಹೆನ್ರಿ ಡೇವಿಡ್ ಥೋರೋ

“ನೀವು ಒರಟು ದಿನವನ್ನು ಹೊಂದಿರುವಾಗ ಸ್ನೇಹಿತರನ್ನು ಸಂಪರ್ಕಿಸುವುದು ಉತ್ತಮ” – ಜಸ್ಟಿನ್ ಬೈಬರ್

“ಯಾರಾದರೂ ಸ್ನೇಹಿತನ ದುಃಖದ ಬಗ್ಗೆ ಸಹಾನುಭೂತಿ ಹೊಂದಬಹುದು, ಆದರೆ ಸ್ನೇಹಿತನ ಯಶಸ್ಸಿನ ಬಗ್ಗೆ ಸಹಾನುಭೂತಿ ಹೊಂದಲು ಉತ್ತಮ ಸ್ವಭಾವದ ಅಗತ್ಯವಿದೆ” – ಆಸ್ಕರ್ ವೈಲ್ಡ್

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ