ಇನ್ನೂ 11 ಆಪ್ಗಳು ಬ್ಯಾನ್ ಆದವು! ಯಾವುವು? ಚೆಕ್ ಮಾಡಿ..
ಇತ್ತೀಚೆಗಷ್ಟೇ ಚೀನಾದ 59 ಌಪ್ಗಳಿಂದ ವೈಯಕ್ತಿಕ ಮಾಹಿತಿಯ ಸೋರಿಕೆಯಾಗುತ್ತಿದೆ ಎಂದು ಹೇಳಿ ಭಾರತ ಅವುಗಳನ್ನ ಬ್ಯಾನ್ ಮಾಡಿದ್ದವು. ಜೊತೆಗೆ, ಗೂಗಲ್ ಸಂಸ್ಥೆಗೆ ಅವುಗಳನ್ನು ತಮ್ಮ ಪ್ಲೇ ಸ್ಟೋರ್ನಿಂದ ಸಹ ತೆಗೆಯಲು ಸೂಚಿಸಿತ್ತು. ಇದೀಗ, ಗೂಗಲ್ ಸಂಸ್ಥೆಯು ತಾನಾಗಿಯೇ ಮತ್ತಷ್ಟು ಌಪ್ಗಳನ್ನ ತನ್ನ ಪ್ಲೇ ಸ್ಟೋರ್ನಿಂದ ಬ್ಯಾನ್ ಮಾಡಿದೆ. ಇದಕ್ಕೆ ಕಾರಣ ಜೋಕರ್ ಎಂಬ ಮಾಲ್ವೇರ್ (Malware). ಇದು ತಮಾಷೆಯಲ್ಲ.. ಈ ‘Joker’ನಿಂದ ನಿಮ್ಮ ಮೊಬೈಲ್ನ ಸ್ವಲ್ಪ ದೂರನೇ ಇಡಿ! ಹೌದು, ಚೆಕ್ ಪಾಯಿಂಟ್ ಎಂಬ ಸೈಬರ್ ಸೆಕ್ಯೂರಿಟಿ […]
ಇತ್ತೀಚೆಗಷ್ಟೇ ಚೀನಾದ 59 ಌಪ್ಗಳಿಂದ ವೈಯಕ್ತಿಕ ಮಾಹಿತಿಯ ಸೋರಿಕೆಯಾಗುತ್ತಿದೆ ಎಂದು ಹೇಳಿ ಭಾರತ ಅವುಗಳನ್ನ ಬ್ಯಾನ್ ಮಾಡಿದ್ದವು. ಜೊತೆಗೆ, ಗೂಗಲ್ ಸಂಸ್ಥೆಗೆ ಅವುಗಳನ್ನು ತಮ್ಮ ಪ್ಲೇ ಸ್ಟೋರ್ನಿಂದ ಸಹ ತೆಗೆಯಲು ಸೂಚಿಸಿತ್ತು. ಇದೀಗ, ಗೂಗಲ್ ಸಂಸ್ಥೆಯು ತಾನಾಗಿಯೇ ಮತ್ತಷ್ಟು ಌಪ್ಗಳನ್ನ ತನ್ನ ಪ್ಲೇ ಸ್ಟೋರ್ನಿಂದ ಬ್ಯಾನ್ ಮಾಡಿದೆ. ಇದಕ್ಕೆ ಕಾರಣ ಜೋಕರ್ ಎಂಬ ಮಾಲ್ವೇರ್ (Malware).
ಇದು ತಮಾಷೆಯಲ್ಲ.. ಈ ‘Joker’ನಿಂದ ನಿಮ್ಮ ಮೊಬೈಲ್ನ ಸ್ವಲ್ಪ ದೂರನೇ ಇಡಿ! ಹೌದು, ಚೆಕ್ ಪಾಯಿಂಟ್ ಎಂಬ ಸೈಬರ್ ಸೆಕ್ಯೂರಿಟಿ ಕಂಪನಿಯು ನಡೆಸಿದ ತನಿಖೆಯಲ್ಲಿ ಈ ಹೊಸ ಮಾಲ್ವೇರ್ ಅಥವಾ ಕಂಪ್ಯೂಟರ್ ವೈರಸ್ ಮಾದರಿಯ ತಂತ್ರಾಂಶವು ಕಂಡು ಬಂದಿದೆ. ಗೂಗಲ್ ಬ್ಯಾನ್ ಮಾಡಿರುವ ಆ 11 ಌಪ್ಗಳ ಮೂಲಕ ನಿಮ್ಮ ಮೊಬೈಲ್ಗೆ ಡೌನ್ಲೋಡ್ ಆಗುವ ಈ ಜೋಕರ್ ಮಾಲ್ವೇರ್ ನಿಮ್ಮ ಮೋಬೈಲ್ನಲ್ಲಿರುವ ವೈಯಕ್ತಿಕ ಮಾಹಿತಿ ಕದಿಯಲು ಮುಂದಾಗುತ್ತದೆ. ಇದರಲ್ಲಿ ಹಣಕಾಸಿನ ಮಾಹಿತಿ ಸಹ ಒಂದು.
ಹೀಗಾಗಿ, ಈ ಕೆಳಕಂಡ ಌಪ್ಗಳನ್ನು ಕೂಡಲೇ ಬ್ಯಾನ್ ಮಾಡುವುದರ ಜೊತೆಗೆ ಗೂಗಲ್ ಈ ಌಪ್ ಬಳಕೆದಾರರಿಗೆ ತಮ್ಮ ಮೊಬೈಲ್ನಿಂದ ಕೂಡಲೇ ಡಿಲೀಟ್ ಮಾಡಲು ಸೂಚಿಸಿದೆ. 1. imagecompress.android 2. contact.withme.texts 3. hmvoice.friendsms 4. relax. relaxation.androidsms 5. cheery.message.sendsms 6. peason.lovinglovemessage 7. file.recovefiles 8. LPlocker.lockapps 9. remindme.alram 10. training.memorygame
Published On - 3:45 pm, Sat, 11 July 20