ಯಂಗ್ ಆಗಿ ಕಾಣಿಸ್ಬೇಕು, ಚೆನ್ನಾಗಿ ಕಾಣಿಸ್ಬೇಕು.. ಕೂದಲಿನ ಕಲರ್ ಬಿಳಿ ಆದ್ರೆ ಚೆನ್ನಾಗಿರಲ್ಲ ಅಂತ ಕೆಲವರು ಹೇರ್‌ಡೈ ಮಾಡಿದ್ರೆ ಮತ್ತೆ ಕೆಲವರು ಸ್ಟೈಲು, ಫ್ಯಾಷನ್ನು ಅಂತ ವೆರೈಟಿ ವೆರೈಟಿ ಕಲರ್‌ನ ಕೂದಲಿಗೆ ಡೈ ಮಾಡಿಕೊಳ್ತಾರೆ. ಆದ್ರೆ ಕೂದಲಿಗೆ ಹೀಗೆ ಡೈ ಮಾಡುವ ಮುನ್ನ ಕೆಲವು ಅಂಶಗಳನ್ನು ನೆನಪಲ್ಲಿ ಇಟ್ಕೊಳ್ಳಬೇಕು.
ನಿಮ್ಮ ಕೂದಲಿನ ಬಣ್ಣ ಯಾವುದು?:
ನಿಮ್ಮ ಕೂದಲಿಗೆ ಒಂದು ಪ್ಯಾಕ್ ಹೇರ್‌ಡೈ ಸಾಕು ಅಂತ ನೀವಂದುಕೊಂಡಿರಬಹುದು. ಆದ್ರೆ ಅದು ಅಪ್ಲೈ ಮಾಡುವಾಗ ಕಡಿಮೆಯಾಗಿ ಬಿಡ್ಬಹುದು. ಸೋ ಹೇರ್‌ಡೈ ಪ್ಯಾಕ್ ಕೊಂಡುಕೊಳ್ಳುವಾಗ ಒಂದು ಪ್ಯಾಕ್ ಹೆಚ್ಚಾಗೇ ಕೊಂಡುಕೊಳ್ಳಿ.. ಆಗ ಕಡಿಮೆಯಾಗಿ ಅರ್ಧಂಬರ್ಧ ಹೇರ್‌ಗೆ ಡೈ ಮಾಡ್ಕೊಳ್ಳೋದು ತಪ್ಪುತ್ತೆ. ನಿಮ್ಗೆ ಬೇಕಾಗಿರುವ ಹಾಗೆ ಡೈ ಮಾಡ್ಕೊಳ್ಳಬಹುದು. ಶೇಡ್ಸ್ ನೋಡಿ ಖರೀದಿಸುವಾಗ ನೀವು ಆಯ್ಕೆ ಮಾಡಿಕೊಂಡಿರುವ ಶೇಡ್ಸ್ಗಿಂತ ಸ್ವಲ್ಪ ಲೈಟಾಗಿರುವ ಶೇಡ್ ಖರೀದಿಸಿ. ಆಗ ಅದು ನಿಮ್ಮ ಕೂದಲಿಗೆ ಸೆಟ್ ಆಗುತ್ತೆ. ಐಟಂಲಿಸ್ಟ್ ನೋಡುವಾಗ ನಿಮ್ಗೆ ಶೇಡ್ಸ್ ಸ್ವಲ್ಪ ಡಾರ್ಕ್ ಆಗಿ ಕಾಣಿಸುತ್ತೆ. ಈ ವಿಚಾರದಲ್ಲಿ ನೀವು ಫ್ಯಾಷನಿಸ್ಟ್‌ಗಳ ಸಲಹೆ ಪಡೆಯೋದು ಸೂಕ್ತ.
ಯಾವ ಶಾಂಪು ಬಳಸಿ ಹೇರ್‌ಕ್ಲೀನ್ ಮಾಡ್ತೀರ?
ನೀವು ಯಾವುದೇ ಹೇರ್‌ಡೈ ಬಳಸಿ. ಅದ್ರಲ್ಲಿ ಹೈಡ್ರೋಜನ್ ಫರಾಕ್ಸೈಡ್ ಇದ್ದೇ ಇರುತ್ತೆ. ಈ ಹೈಡ್ರೋಜನ್ ಫೆರಾಕ್ಸೈಡೇ ನಿಮ್ಮ ಕೂದಲಿಗೆ ಬಣ್ಣ ಬದಲಾಗುವಂತೆ ಮಾಡೋದು. ಇದ್ರ ಜೊತೆಗೆ ಇನ್ನೂ ಅನೇಕ ರೀತಿಯ ಕೆಮಿಕಲ್‌ಗಳು ಡೈನಲ್ಲಿ ಇರುತ್ತೆ. ಎಷ್ಟೇ ಒಳ್ಳೇ ಕ್ವಾಲಿಟಿ ಡೈ ಅಂದ್ರೂ ಅದ್ರಲ್ಲಿ ಕೆಮಿಕಲ್ ಕಾಮನ್. ಹಾಗಾಗಿ ಇದ್ರಿಂದ ಕೂದಲು ಡ್ಯಾಮೇಜ್ ಆಗೋದು ಮಾಮೂಲಿ. ಸೋ ಸರಿಯಾಗಿ ಕೂದಲನ್ನು ಡೈ ಆದ ನಂತ್ರ ಮೈಂಟೇನ್ ಮಾಡ್ಬೇಕು. ಆ ಮೂಲಕ ಮುಂದಾಗುವ ಅಪಾಯವನ್ನು ತಪ್ಪಿಸಿ.
ಹೇರ್ವಾಷ್ಗೆ ಎಂತಹ ನೀರು ಬಳಸ್ಬೇಕು?
ತೀರಾ ಬಿಸಿಯೂ ಅಲ್ಲ,. ತೀರಾ ತಣ್ಣಗೂ ಇರದ ಹೂಬೆಚ್ಚಗಿನ ನೀರಿನಲ್ಲಿ ಹೇರ್‌ವಾಷ್ ಮಾಡಿ. ಆ ಮೂಲಕ ಕೂದಲಿಗೆ ಆಗುವ ಕೆಟ್ಟ ಪರಿಣಾಮವನ್ನು ತಪ್ಪಿಸಿ.
Published On - 4:28 pm, Sun, 29 September 19