ಟೈಟ್ ಜೀನ್ಸ್ ಧರಿಸ್ತಾ ಇದ್ದೀರಾ.. ಹಾಗಾದ್ರೆ ನಾಳೆಯಿಂದ ಅದನ್ನ ಗ್ಯಾರೆಂಟಿ ಮರೀತೀರಾ..!
ನೀವು ಟೈಟ್ ಜೀನ್ಸ್ ಧರಿಸ್ತೀರಾ? ಹಾಗಿದ್ರೆ ಹುಷಾರ್! ಜೀನ್ಸ್ ವಾಸ್ತವವಾಗಿ ಗಣಿಯ ಕೆಲಸಗಾರರು ತೊಡಲು ನಿರ್ಮಿಸಿದ್ದ ಬಹುಕಾಲ ಬಾಳಿಕ ಬರುವ ಒರಟು ಬಟ್ಟೆಯಾಗಿದ್ದು, ಗಣಿ ಕೆಲಸಗಾರರನ್ನು ಅನುಸರಿಸಲು ಪಡ್ಡೆ ಹುಡುಗರು ಭಾರೀ ಬೇಡಿಕೆ ಇರಿಸಿದ್ದರಿಂದ ಪ್ರಾರಂಭವಾದ ಫ್ಯಾಷನ್ ಇಂದು ಹಿರಿಯ ಕಿರಿಯ, ಮಹಿಳೆಯರು, ಪುರುಷರು ಎನ್ನದೇ ಎಲ್ಲರೂ ತೊಡುತ್ತಿದ್ದಾರೆ. ಆದರೆ ಇದು ಮೊದಲು ಚರ್ಮಕ್ಕೆ ಅಂಟಿಕೊಂಡೇನು ಇರಲಿಲ್ಲ, ನಮ್ಮ ವಸ್ತ್ರ ವಿನ್ಯಾಸಕರೇ ಬಿಗಿಯಾಗಿಸಿ, ಅಲ್ಲಲ್ಲಿ ಬೇಕೆಂದೇ ಹರಿದು, ಬಣ್ಣವನ್ನು ಮಾಸಲುಗೊಳಿಸಿ ತೊಟ್ಟವರಿಗೆ ತಾವು ಫ್ಯಾಷನ್ ಜಗತ್ತಿನ ಅತ್ಯುನ್ನತ […]
ನೀವು ಟೈಟ್ ಜೀನ್ಸ್ ಧರಿಸ್ತೀರಾ? ಹಾಗಿದ್ರೆ ಹುಷಾರ್!
ಜೀನ್ಸ್ ವಾಸ್ತವವಾಗಿ ಗಣಿಯ ಕೆಲಸಗಾರರು ತೊಡಲು ನಿರ್ಮಿಸಿದ್ದ ಬಹುಕಾಲ ಬಾಳಿಕ ಬರುವ ಒರಟು ಬಟ್ಟೆಯಾಗಿದ್ದು, ಗಣಿ ಕೆಲಸಗಾರರನ್ನು ಅನುಸರಿಸಲು ಪಡ್ಡೆ ಹುಡುಗರು ಭಾರೀ ಬೇಡಿಕೆ ಇರಿಸಿದ್ದರಿಂದ ಪ್ರಾರಂಭವಾದ ಫ್ಯಾಷನ್ ಇಂದು ಹಿರಿಯ ಕಿರಿಯ, ಮಹಿಳೆಯರು, ಪುರುಷರು ಎನ್ನದೇ ಎಲ್ಲರೂ ತೊಡುತ್ತಿದ್ದಾರೆ. ಆದರೆ ಇದು ಮೊದಲು ಚರ್ಮಕ್ಕೆ ಅಂಟಿಕೊಂಡೇನು ಇರಲಿಲ್ಲ, ನಮ್ಮ ವಸ್ತ್ರ ವಿನ್ಯಾಸಕರೇ ಬಿಗಿಯಾಗಿಸಿ, ಅಲ್ಲಲ್ಲಿ ಬೇಕೆಂದೇ ಹರಿದು, ಬಣ್ಣವನ್ನು ಮಾಸಲುಗೊಳಿಸಿ ತೊಟ್ಟವರಿಗೆ ತಾವು ಫ್ಯಾಷನ್ ಜಗತ್ತಿನ ಅತ್ಯುನ್ನತ ಶಿಖರದ ಮೇಲಿರುವಂತೆ ಭಾವಿಸುವಂತೆ ಮಾಡಿದ್ದಾರೆ.
ಟೈಟ್ ಜೀನ್ಸ್ ಆರೋಗ್ಯಕ್ಕೆ ಮಾರಕ: ಯಾವುದೇ ಬಿಗಿಯಾದ ಉಡುಗೆಯಂತೆಯೇ ಬಿಗಿಯಾದ ಜೀನ್ಸ್ ಸಹಾ ಆರೋಗ್ಯಕ್ಕೆ ಮಾರಕವಾಗಿದೆ. ವಿಶೇಷವಾಗಿ ಬಿಗಿಯಾದ ಪ್ಯಾಂಟ್ ತೊಡುವುದರಿಂದ ಪುರುಷರಿಗೂ ಮಹಿಳೆಯರಿಗೂ ಕೆಲವಾರು ವಿಧಗಳಲ್ಲಿ ಆರೋಗ್ಯವನ್ನು ಬಾಧಿಸುತ್ತದೆ.
ಬಿಗಿಯಾಗಿದ್ದರೇನು ಎಂದು ದಾರ್ಷ್ಟ್ಯದ ಪ್ರಶ್ನೆ ಕೇಳುವವರಿಗೆ ಜೀನ್ಸ್ ಬಟ್ಟೆ ಇತರ ಬಟ್ಟೆಗಳಂತಲ್ಲದೇ ಬಿಗಿಯಾಗಿರುವ ಕಾರಣ ಚರ್ಮ ಗಾಳಿಯ ಸಂಪರ್ಕವನ್ನು ಪಡೆಯಲು ಸಾಧ್ಯವಾಗದೇ ಉಸಿರಾಡಲು ಕಷ್ಟಪಡಬೇಕಾಗುತ್ತದೆ. ಪರಿಣಾಮವಾಗಿ ನರಗಳು ಬಾಧೆಗೊಳಗಾಗಿ ರಕ್ತಸಂಚಾರಕ್ಕೂ ತೊಡಕಾಗುತ್ತದೆ. ಇಷ್ಟೇ ಅಲ್ಲ, ಮಹಿಳೆಯರು ಬಿಗಿಯಾದ ಜೀನ್ಸ್ ತೊಡುವ ಮೂಲಕ ಇವರಲ್ಲಿ ಮೂತ್ರಕೋಶದ ಸೋಂಕು ಉಂಟಾಗುವ ಸಾಧ್ಯತೆ ಅತಿ ಹೆಚ್ಚಾಗುತ್ತದೆ.
ಏಕೆಂದರೆ ಜೀನ್ಸ್ ತೊಟ್ಟು ನಡೆದಾಡುವಾಗ ಗಾಳಿಯ ಕೊರತೆಯಿಂದ ಜನಾಂಗದ ಒಳಭಾಗದಲ್ಲಿ ಹೆಚ್ಚು ಬಿಸಿಯಾಗಿ ಈ ಭಾಗದಲ್ಲಿ ಶಿಲೀಂಧ್ರದ ಸೋಂಕು ಉಂಟಾಗುವ ಸಾಧ್ಯತೆ ತುಂಬಾ ಹೆಚ್ಚುತ್ತದೆ. ಪರಿಣಾಮವಾಗಿ ಮೂತ್ರಕೋಶ ಸೋಂಕಿಗೊಳಗಾಗುವ ಸಾಧ್ಯತೆಯೂ ಹೆಚ್ಚುತ್ತದೆ.
ಸಂಶೋಧನೆ ಏನು ಹೇಳುತ್ತೆ: ಕೆಲವು ಸಂಶೋಧನೆಗಳ ಪ್ರಕಾರ ಬಿಗಿಯಾದ ಜೀನ್ಸ್ ತೊಡುವ ಮೂಲಕ ಸೊಂಟದ ಮೂಳೆಗಳ ಸಂಧುಗಳಿಗೂ ಅಪಾಯವಿದೆ. ಅದು ಹೇಗೆ? ಪ್ಯಾಂಟ್ ಬಿಗಿಯಾಗಿದ್ದಷ್ಟೂ ಕಾಲುಗಳು ಚಲಿಸಬಹುದಾದ ಕೋನ ಕಡಿಮೆಯಾಗುತ್ತಾ, ಅಂದರೆ ಹೆಜ್ಜೆ ತುಂಬಾ ಚಿಕ್ಕದಾಗಿದ್ದು ಇದರಿಂದ ನಡಿಗೆಯ ಸಾಮಾನ್ಯ ಶೈಲಿ ಬದಲಾಗಿ ಸೊಂಟದ ಮೂಳೆಗಳ ಮತ್ತು ಮೂಳೆಸಂದುಗಳ ಒಂದೇ ಭಾಗದಲ್ಲಿ ಹೆಚ್ಚಿನ ಒತ್ತಡ ಬಿದ್ದು ಅಪಾಯ ಎದುರಾಗಬಹುದು. ಇದರಿಂದ ಪರೋಕ್ಷವಾಗಿ ಬೆನ್ನುಹುರಿಯೂ ಅಪಾಯಕ್ಕೆ ಒಳಗಾಗಬಹುದು.
ಪ್ಯಾಂಟ್ ಬಿಗಿಯಾಗಿದ್ದಂತೆಯೇ ಸೊಂಟ ಅಥವಾ ಹೊಟ್ಟೆಯ ಮೇಲೆ ಕಟ್ಟುವ ಬೆಲ್ಟ್ ಸಹಾ ಬಿಗಿಯಾಗಿರುತ್ತದೆ. ಇದರಿಂದ ದುಗ್ಧ ಗ್ರಂಥಿಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಇವುಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಅಲ್ಲದೇ ಹೊಟ್ಟೆ ಬಿಗಿಯಾದಷ್ಟೂ ರಕ್ತಪರಿಚಲನೆ ಮತ್ತು ಜೀರ್ಣಕ್ರಿಯೆಗೂ ತೊಂದರೆಯಾಗುತ್ತದೆ.
ಜೀನ್ಸ್ ಬಿಗಿಯಾದಷ್ಟೂ ಚರ್ಮದ ಮೇಲೆ ಒತ್ತಡ ಹೇರಿ ಈ ಒತ್ತಡ ಚರ್ಮದ ಅಡಿಯಲ್ಲಿ ಹಾದು ಹೋಗುವ ನರಗಳ ಮೇಲೂ ಬಿದ್ದು ಇದರಿಂದ ದೇಹದ ತುದಿಭಾಗಗಳಿಗೆ ತಲುಪುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಪರಿಣಾಮವಾಗಿ ಪಾದಗಳಲ್ಲಿ ಸೂಚಿ ಚುಚ್ಚಿದಂತೆ ನೋವಾಗುವುದು ಮತ್ತು ಬೆಂಕಿ ಹತ್ತಿಕೊಂಡಂತೆ ಉರಿಯಾಗುವ ಅನುಭವವಾಗುತ್ತದೆ.
Published On - 3:37 pm, Mon, 30 September 19