ನಿಮ್ಮ ಕೂದಲಿಗೆ ಡೈ ಬಳಸುವ ಮುನ್ನ ಇರಲಿ ಎಚ್ಚರ

ಯಂಗ್ ಆಗಿ ಕಾಣಿಸ್ಬೇಕು, ಚೆನ್ನಾಗಿ ಕಾಣಿಸ್ಬೇಕು.. ಕೂದಲಿನ ಕಲರ್‌ ಬಿಳಿ ಆದ್ರೆ ಚೆನ್ನಾಗಿರಲ್ಲ ಅಂತ ಕೆಲವರು ಹೇರ್‌ಡೈ ಮಾಡಿದ್ರೆ ಮತ್ತೆ ಕೆಲವರು ಸ್ಟೈಲು, ಫ್ಯಾಷನ್ನು ಅಂತ ವೆರೈಟಿ ವೆರೈಟಿ ಕಲರ್‌ನ ಕೂದಲಿಗೆ ಡೈ ಮಾಡಿಕೊಳ್ತಾರೆ. ಆದ್ರೆ ಕೂದಲಿಗೆ ಹೀಗೆ ಡೈ ಮಾಡುವ ಮುನ್ನ ಕೆಲವು ಅಂಶಗಳನ್ನು ನೆನಪಲ್ಲಿ ಇಟ್ಕೊಳ್ಳಬೇಕು.  ನಿಮ್ಮ ಕೂದಲಿನ ಬಣ್ಣ ಯಾವುದು?: ಮೊದಲು ನಿಮ್ಮ ಕೂದಲಿನ ಬಣ್ಣ ಯಾವುದು ಗುರುತಿಸಿಕೊಳ್ಳಿ. ನಂತ್ರ ಆ ಕೂದಲಿಗೆ ಯಾವ ಕಲರ್‌ ಬಳಸಿದ್ರೆ ಒಂದಕ್ಕೊಂದು ಮ್ಯಾಚ್ ಆಗುತ್ತೆ ಅನ್ನೋದು […]

ನಿಮ್ಮ ಕೂದಲಿಗೆ ಡೈ ಬಳಸುವ ಮುನ್ನ ಇರಲಿ ಎಚ್ಚರ
Follow us
ಸಾಧು ಶ್ರೀನಾಥ್​
|

Updated on:Sep 30, 2019 | 11:51 AM

ಯಂಗ್ ಆಗಿ ಕಾಣಿಸ್ಬೇಕು, ಚೆನ್ನಾಗಿ ಕಾಣಿಸ್ಬೇಕು.. ಕೂದಲಿನ ಕಲರ್‌ ಬಿಳಿ ಆದ್ರೆ ಚೆನ್ನಾಗಿರಲ್ಲ ಅಂತ ಕೆಲವರು ಹೇರ್‌ಡೈ ಮಾಡಿದ್ರೆ ಮತ್ತೆ ಕೆಲವರು ಸ್ಟೈಲು, ಫ್ಯಾಷನ್ನು ಅಂತ ವೆರೈಟಿ ವೆರೈಟಿ ಕಲರ್‌ನ ಕೂದಲಿಗೆ ಡೈ ಮಾಡಿಕೊಳ್ತಾರೆ. ಆದ್ರೆ ಕೂದಲಿಗೆ ಹೀಗೆ ಡೈ ಮಾಡುವ ಮುನ್ನ ಕೆಲವು ಅಂಶಗಳನ್ನು ನೆನಪಲ್ಲಿ ಇಟ್ಕೊಳ್ಳಬೇಕು

ನಿಮ್ಮ ಕೂದಲಿನ ಬಣ್ಣ ಯಾವುದು?: ಮೊದಲು ನಿಮ್ಮ ಕೂದಲಿನ ಬಣ್ಣ ಯಾವುದು ಗುರುತಿಸಿಕೊಳ್ಳಿ. ನಂತ್ರ ಆ ಕೂದಲಿಗೆ ಯಾವ ಕಲರ್‌ ಬಳಸಿದ್ರೆ ಒಂದಕ್ಕೊಂದು ಮ್ಯಾಚ್ ಆಗುತ್ತೆ ಅನ್ನೋದು ತಿಳಿದಿರಲಿ. ಒರಿಜಿನಲ್‌ ಮತ್ತು ಆರ್ಟಿಫಿಶಿಯಲ್‌ ಕಲರಿಂಗ್‌ ಸರಿಯಾಗಿ ಹೊಂದಿಕೊಳ್ಳದೇ  ಇರಬಹುದು. ಹಾಗಾಗಿ ಈ ವಿಷ್ಯದಲ್ಲಿ ಫ್ಯಾಷನಿಸ್ಟ್‌ಗಳ ಸಲಹೆ ಪಡೆಯಿರಿ. ಕೆಲವರು ತುಂಬಾ ಸ್ಟೈಲಿಶ್ ಆಗಿ ಇರ್ತಾರೆ. ಅಂತವರು ತಮ್ಮ ಕೂದಲಿಗೆ ಎರಡು ಮೂರು ಹೇರ್‌ಕಲರ್‌ ಬಳಸೋದುಂಟು. ಆದ್ರೆ ಹಾಗೆಲ್ಲ ಬಳಸವಾಗ ವಿಗ್‌ಗೆ ಬಳಸಿ ನಂತ್ರ ಅದನ್ನು ಧರಿಸೋದು ಬೆಸ್ಟ್. ನಿಮ್ಮ ಒರಿಜಿನಲ್‌ ಹೇರ್‌ನಲ್ಲೇ ಟ್ರೈ ಮಾಡುವ ಮೊದಲು ಈ ಐಡಿಯಾ ಬಳಸಿ..

ನಿಮ್ಮ ಕೂದಲಿಗೆ ಒಂದು ಪ್ಯಾಕ್‌ ಹೇರ್‌ಡೈ ಸಾಕು ಅಂತ ನೀವಂದುಕೊಂಡಿರಬಹುದು. ಆದ್ರೆ ಅದು ಅಪ್ಲೈ ಮಾಡುವಾಗ ಕಡಿಮೆಯಾಗಿ ಬಿಡ್ಬಹುದು. ಸೋ ಹೇರ್‌ಡೈ ಪ್ಯಾಕ್‌ ಕೊಂಡುಕೊಳ್ಳುವಾಗ ಒಂದು ಪ್ಯಾಕ್‌ ಹೆಚ್ಚಾಗೇ ಕೊಂಡುಕೊಳ್ಳಿ.. ಆಗ ಕಡಿಮೆಯಾಗಿ ಅರ್ಧಂಬರ್ಧ ಹೇರ್‌ಗೆ ಡೈ ಮಾಡ್ಕೊಳ್ಳೋದು ತಪ್ಪುತ್ತೆ. ನಿಮ್ಗೆ ಬೇಕಾಗಿರುವ ಹಾಗೆ ಡೈ ಮಾಡ್ಕೊಳ್ಳಬಹುದುಶೇಡ್ಸ್‌ ನೋಡಿ ಖರೀದಿಸುವಾಗ ನೀವು ಆಯ್ಕೆ ಮಾಡಿಕೊಂಡಿರುವ ಶೇಡ್ಸ್​ಗಿಂತ ಸ್ವಲ್ಪ ಲೈಟಾಗಿರುವ ಶೇಡ್‌ ಖರೀದಿಸಿ. ಆಗ ಅದು ನಿಮ್ಮ ಕೂದಲಿಗೆ ಸೆಟ್‌ ಆಗುತ್ತೆ. ಐಟಂಲಿಸ್ಟ್‌ ನೋಡುವಾಗ ನಿಮ್ಗೆ ಶೇಡ್ಸ್‌ ಸ್ವಲ್ಪ ಡಾರ್ಕ್‌ ಆಗಿ ಕಾಣಿಸುತ್ತೆ. ಈ ವಿಚಾರದಲ್ಲಿ ನೀವು ಫ್ಯಾಷನಿಸ್ಟ್‌ಗಳ ಸಲಹೆ ಪಡೆಯೋದು ಸೂಕ್ತ.

ಯಾವ ಶಾಂಪು ಬಳಸಿ ಹೇರ್‌ಕ್ಲೀನ್‌ ಮಾಡ್ತೀರ? ಡಾಂಡ್ರಫ್‌ ನಿವಾರಿಸುವ ಶಾಂಪುಗಳನ್ನು ಬಳಸಿದ್ರೆ ಅದ್ರಲ್ಲಿರುವ ಸಲ್ಫೇಟ್‌ ಮತ್ತು ಇತರೆ ಕೆಮಿಕಲ್‌ಗಳಿಂದಾಗಿ ನಿಮ್ಮ ಹೇರ್‌ಕಲರ್‌ ಸರಿಯಾಗಿ ಅಪ್ಲೈ ಆಗದೆ ಇರಬಹುದು ಮತ್ತು ಬೇಗನೆ ಕಲರ್‌ ಹೋಗಿಬಿಡುವ ಸಾಧ್ಯತೆ ಇರುತ್ತೆ. ಹಾಗಾಗಿ ಮೈಲ್ಡ್‌ ಶಾಂಪು ಬಳಸಿ.

ನೀವು ಯಾವುದೇ ಹೇರ್‌ಡೈ ಬಳಸಿ. ಅದ್ರಲ್ಲಿ ಹೈಡ್ರೋಜನ್ ಫರಾಕ್ಸೈಡ್‌ ಇದ್ದೇ ಇರುತ್ತೆ. ಈ ಹೈಡ್ರೋಜನ್‌ ಫೆರಾಕ್ಸೈಡೇ ನಿಮ್ಮ ಕೂದಲಿಗೆ ಬಣ್ಣ ಬದಲಾಗುವಂತೆ ಮಾಡೋದು. ಇದ್ರ ಜೊತೆಗೆ ಇನ್ನೂ ಅನೇಕ ರೀತಿಯ ಕೆಮಿಕಲ್‌ಗಳು ಡೈನಲ್ಲಿ ಇರುತ್ತೆ. ಎಷ್ಟೇ ಒಳ್ಳೇ ಕ್ವಾಲಿಟಿ ಡೈ ಅಂದ್ರೂ ಅದ್ರಲ್ಲಿ ಕೆಮಿಕಲ್‌ ಕಾಮನ್. ಹಾಗಾಗಿ ಇದ್ರಿಂದ ಕೂದಲು ಡ್ಯಾಮೇಜ್‌ ಆಗೋದು ಮಾಮೂಲಿ. ಸೋ ಸರಿಯಾಗಿ ಕೂದಲನ್ನು ಡೈ ಆದ ನಂತ್ರ ಮೈಂಟೇನ್ ಮಾಡ್ಬೇಕು. ಆ ಮೂಲಕ ಮುಂದಾಗುವ ಅಪಾಯವನ್ನು ತಪ್ಪಿಸಿ.

ಹೇರ್‌ವಾಷ್​ಗೆ ಎಂತಹ ನೀರು ಬಳಸ್ಬೇಕು? ತೀರಾ ಬಿಸಿಯೂ ಅಲ್ಲ,. ತೀರಾ ತಣ್ಣಗೂ ಇರದ ಹೂಬೆಚ್ಚಗಿನ ನೀರಿನಲ್ಲಿ ಹೇರ್‌ವಾಷ್‌ ಮಾಡಿ. ಆ ಮೂಲಕ ಕೂದಲಿಗೆ ಆಗುವ ಕೆಟ್ಟ ಪರಿಣಾಮವನ್ನು ತಪ್ಪಿಸಿ.

Published On - 4:28 pm, Sun, 29 September 19