AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿಯ ಎರಡನೇ ದಿನ.. ಬ್ರಹ್ಮಚಾರಿಣಿ ಆರಾಧನೆ ಹೇಗಿರಬೇಕು?

ನವರಾತ್ರಿಯ ಎರಡನೇ ದಿನ ಶಕ್ತಿದೇವತೆಯ ಆರಾಧನೆಗೆ ಪರ್ವಕಾಲ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಪ್ರತಿದಿನ ದೇವಿಯ ಬೇರೆ ಬೇರೆ ಸ್ವರೂಪವನ್ನು ಪೂಜಿಸಲಾಗುತ್ತೆ. ಹೀಗೆ ನವರಾತ್ರಿಯ ಎರಡನೇ ದಿನ ದುರ್ಗೆಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ ಮಾಡಲಾಗುತ್ತೆ. ಹಾಗಾದ್ರೆ ಬ್ರಹ್ಮಚಾರಿಣಿ ಯಾರು ಅಂದ್ರೆ ನವದುರ್ಗೆಯರಲ್ಲಿ ಬ್ರಹ್ಮಚಾರಿಣಿಯದ್ದು ಎರಡನೇ ರೂಪ. ಈಕೆ ಸೃಷ್ಟಿಕರ್ತನಾದ ಬ್ರಹ್ಮನಿಗೆೇ ಜ್ಞಾನ ಕೊಟ್ಟವಳು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಬ್ರಹ್ಮಚಾರಿಣಿಯದ್ದು ಸಾತ್ವಿಕ ಮತ್ತು ಸುಂದರ ರೂಪ. ಬ್ರಹ್ಮಚಾರಿಣಿ ಪೂರ್ಣ ಜ್ಯೋತಿರ್ಮಯ ಸ್ವರೂಪಿಯಾಗಿದ್ದಾಳೆ. ಬಲಗೈಯಲ್ಲಿ ಜಪಮಾಲೆ ಹಿಡಿದಿರುತ್ತಾಳೆ. ಎಡಗೈಯಲ್ಲಿ ಕಮಂಡಲವಿರುತ್ತೆ. ಸದಾ […]

ನವರಾತ್ರಿಯ ಎರಡನೇ ದಿನ.. ಬ್ರಹ್ಮಚಾರಿಣಿ ಆರಾಧನೆ ಹೇಗಿರಬೇಕು?
ಸಾಧು ಶ್ರೀನಾಥ್​
| Edited By: |

Updated on:Oct 18, 2020 | 9:32 AM

Share

ನವರಾತ್ರಿಯ ಎರಡನೇ ದಿನ ಶಕ್ತಿದೇವತೆಯ ಆರಾಧನೆಗೆ ಪರ್ವಕಾಲ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಪ್ರತಿದಿನ ದೇವಿಯ ಬೇರೆ ಬೇರೆ ಸ್ವರೂಪವನ್ನು ಪೂಜಿಸಲಾಗುತ್ತೆ. ಹೀಗೆ ನವರಾತ್ರಿಯ ಎರಡನೇ ದಿನ ದುರ್ಗೆಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ ಮಾಡಲಾಗುತ್ತೆ. ಹಾಗಾದ್ರೆ ಬ್ರಹ್ಮಚಾರಿಣಿ ಯಾರು ಅಂದ್ರೆ ನವದುರ್ಗೆಯರಲ್ಲಿ ಬ್ರಹ್ಮಚಾರಿಣಿಯದ್ದು ಎರಡನೇ ರೂಪ. ಈಕೆ ಸೃಷ್ಟಿಕರ್ತನಾದ ಬ್ರಹ್ಮನಿಗೆೇ ಜ್ಞಾನ ಕೊಟ್ಟವಳು ಎಂದು ಪುರಾಣದಲ್ಲಿ ಉಲ್ಲೇಖವಿದೆ.

ಬ್ರಹ್ಮಚಾರಿಣಿಯದ್ದು ಸಾತ್ವಿಕ ಮತ್ತು ಸುಂದರ ರೂಪ. ಬ್ರಹ್ಮಚಾರಿಣಿ ಪೂರ್ಣ ಜ್ಯೋತಿರ್ಮಯ ಸ್ವರೂಪಿಯಾಗಿದ್ದಾಳೆ. ಬಲಗೈಯಲ್ಲಿ ಜಪಮಾಲೆ ಹಿಡಿದಿರುತ್ತಾಳೆ. ಎಡಗೈಯಲ್ಲಿ ಕಮಂಡಲವಿರುತ್ತೆ. ಸದಾ ಧ್ಯಾನದಲ್ಲಿ ತಲ್ಲೀನಳಾಗ್ತಾಳೆ.

 ಪುರಾಣಗಳ ಪ್ರಕಾರ, ಶಿವನನ್ನು ಪಡೆಯಲು ಬ್ರಹ್ಮಚಾರಿಣಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡ್ತಾಳೆ. ಅಖಂಡ ತಪಸ್ಸನ್ನು ಮಾಡಿದ ಸಲುವಾಗೇ ಈಕೆ ಸದಾ ಧ್ಯಾನದಲ್ಲಿ ತಲ್ಲೀನಳಾಗಿರ್ತಾಳೆ. ನವರಾತ್ರಿಯ ಎರಡನೇ ದಿನ ಈ ತಾಯಿಯನ್ನು ಪೂಜಿಸಿದ್ರೆ ವಿಶೇಷ ವರಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ. ಸದಾ ಧ್ಯಾನ ಮಗ್ನಳಾದ ಬ್ರಹ್ಮಚಾರಿಣಿಗೆ ಭಕ್ತರ ಮೇಲೆ ಅಪಾರ ಕಾಳಜಿ. ನಿಷ್ಕಲ್ಮಷ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸಿದ್ರೆ ಬೇಡಿದ ವರಗಳನ್ನು ಕರುಣಿಸ್ತಾಳೆ ಎಂಬ ನಂಬಿಕೆ ಇದೆ.

ಇನ್ನು ಈ ಬ್ರಹ್ಮಚಾರಿಣಿ ಆರಾಧನೆಗೆ ವಿಶೇಷ ಮಂತ್ರವೊಂದಿದೆ. ಆ ಮಂತ್ರವನ್ನು ಪಠಿಸಿ ಪೂಜಿಸಿದ್ರೆ ಬ್ರಹ್ಮಚಾರಿಣಿ ಬೇಗ ಸಂತುಷ್ಟಳಾಗ್ತಾಳೆ ಎನ್ನಲಾಗುತ್ತೆ.

ಬ್ರಹ್ಮಚಾರಿಣಿ ಪೂಜಾ ಮಂತ್ರ ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ

ಬ್ರಹ್ಮಚಾರಿಣಿ ಪೂಜೆಯ ಫಲ ಅನಂತ ಫಲಗಳನ್ನು ನೀಡ್ತಾಳೆ. ಆಧ್ಯಾತ್ಮ ಸಾಧನೆ ಜೊತೆಗೆ ಮನಸ್ಸಿನ ಏಕಾಗ್ರತೆ ಸಾಧನೆಯಾಗುತ್ತೆ. ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತೆ. ಸಕಲ ಕಾರ್ಯದಲ್ಲೂ ವಿಜಯ ಪ್ರಾಪ್ತಿಯಾಗಲಿದೆ.

ಈ ಎಲ್ಲ ಕಾರಣಗಳಿಂದ ನವರಾತ್ರಿಯ ಎರಡನೇ ದಿನ ಯೋಗಿಗಳು ಬ್ರಹ್ಮಚಾರಿಣಿಯ ಉಪಾಸನೆ ಮಾಡ್ತಾರೆ. ಇದ್ರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗಿ, ಬ್ರಹ್ಮಚಾರಿಣಿಯ ಅನಂತ ಆಶೀರ್ವಾದಕ್ಕೆ ಪಾತ್ರರಾಗ್ತಾರೆ ಅನ್ನೋ ನಂಬಿಕೆ ಇದೆ.

Published On - 5:09 pm, Mon, 30 September 19

ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ