ಭೋಲೇನಾಥನ ಸನ್ನಿಧಿಯಲ್ಲಿ ಪ್ರದಕ್ಷಿಣೆ ಹಾಕುವ ಮುನ್ನ ನೆನಪಿರಲಿ ಈ ನಿಯಮ

|

Updated on: Apr 23, 2021 | 6:26 AM

ದೇವಾಲಯಗಳು ಪ್ರಶಾಂತತೆಯ ಚಿಹ್ನೆಗಳು. ಅಲ್ಲಿಗೆ ಹೋದರೆ ಮನಸ್ಸಿಗೆ ನೆಮ್ಮದಿ ಸಿಗುವುದಷ್ಟೇ ಅಲ್ಲ, ಆ ಪರಿಸರಗಳಲ್ಲಿ ಇರುವ ಪಾಸಿಟಿವ್ ಎನರ್ಜಿ ನಮಗೆ ಸಿಗುತ್ತೆ. ಇದರಿಂದ ಹೊಸ ಉತ್ಸಾಹ ನಮ್ಮಲ್ಲಿ ಮೂಡುತ್ತೆ.

ಭೋಲೇನಾಥನ ಸನ್ನಿಧಿಯಲ್ಲಿ ಪ್ರದಕ್ಷಿಣೆ ಹಾಕುವ ಮುನ್ನ ನೆನಪಿರಲಿ ಈ ನಿಯಮ
ಗಂಗಾಧರ
Follow us on

ಭಗವಂತನ ಅನುಗ್ರಹ ಪಡೆಯಲು ನಾವೆಲ್ಲರೂ ದೇವಸ್ಥಾನಗಳಿಗೆ ಹೋಗ್ತೀವಿ. ದೇವಾಲಯಕ್ಕೆ ಹೋದಾಗ ಪ್ರದಕ್ಷಿಣೆಯನ್ನು ಹಾಕ್ತೀವಿ. ಕೆಲವರು ಹರಕೆ ರೂಪವಾಗಿಯೂ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕ್ತಾರೆ. ಹಾಗಾದ್ರೆ ಈ ಪ್ರದಕ್ಷಿಣೆ ಹಾಕೋದು ಏಕೆ ಗೊತ್ತಾ? ಈ ಆಚರಣೆಯ ಹಿಂದೆ ಒಂದು ಅರ್ಥವಿದೆ. ನಿನ್ನನ್ನು ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ. ನೀನು ತೋರಿಸಿದ ಮಾರ್ಗದಲ್ಲಿಯೇ ನಡೆಯುತ್ತೇವೆ ಅನ್ನೋದು ಪ್ರದಕ್ಷಿಣೆಯ ನಿಜವಾದ ಅರ್ಥ. ಕೆಲವರು ಕೈ ಮುಗಿದು ಕಣ್ಣು ಮುಚ್ಚಿಕೊಂಡು ಪ್ರದಕ್ಷಿಣೆ ಹಾಕಿದರೆ, ಮತ್ತೆ ಕೆಲವರು ಮಂತ್ರವನ್ನು ಪಠಿಸ್ತಾ ಪ್ರದಕ್ಷಿಣೆ ಹಾಕ್ತಾರೆ. ಇದರಿಂದ ದೇವರು ನಮ್ಮ ಸನಿಹವೇ ಇದ್ದಾನೆ ಎನ್ನುವಂತಹ ಭಾವನೆ ಮೂಡುತ್ತೆ. ಅದ್ರಲ್ಲೂ ಶಿವನ ದೇವಾಲಯಕ್ಕೆ ಹೋದಾಗ ಪ್ರದಕ್ಷಿಣೆ ಹಾಕೋಕೆ ಕೆಲವು ನಿಯಮವಿದೆ. ಅದು ಹಲವರಿಗೆ ತಿಳಿದಿರುವುದಿಲ್ಲ. ಈ ಬಗ್ಗೆ ಇಲ್ಲಿ ತಿಳಿಯಿರಿ.

ಶಿವಾಲಯದಲ್ಲಿ ಪ್ರದಕ್ಷಿಣೆ ಹಾಕುವ ಕ್ರಮ
-ಈಶ್ವರನ ವಾಹನವಾದ ನಂದೀಶ್ವರನು ಪರಶಿವನ ಭಕ್ತರಲ್ಲಿ ಅಗ್ರಗಣ್ಯ. ಹೀಗಾಗೇ ಭಕ್ತಿ ಶ್ರದ್ಧೆಯಿಂದ ನಂದಿಯು ಶಿವಲಿಂಗವನ್ನು ಎಲ್ಲಾ ಸಮಯದಲ್ಲಿಯೂ ಪ್ರದರ್ಶಿಸುತ್ತಿರುತ್ತಾನೆ.
-ಭಕ್ತಾಗ್ರಣ್ಯನಾದ ನಂದೀಶ್ವರನ ಮೇಲೆ ಶಿವನು ತನ್ನ ಅನುಗ್ರಹ, ದೃಷ್ಟಿಯನ್ನು ನಿರಂತರವಾಗಿ ಪಸರಿಸ್ತಿರ್ತಾನೆ. ಈ ಕಾರಣದಿಂದ ಮನುಷ್ಯರು ಇವರಿಬ್ಬರ ನಡುವೆ ನಡೆದಾಡಿದರೆ ಅವರ ಪರಸ್ಪರ ದೃಷ್ಟಿ ಪ್ರಸಾರಕ್ಕೆ ತೊಂದರೆ ಉಂಟಾಗಿ ಅವರಿಬ್ಬರ ಕೋಪಕ್ಕೆ ಗುರಿಯಾಗುವ ಅವಕಾಶವಿದೆ ಎನ್ನಲಾಗುತ್ತೆ.
-ಶಿವಾಲಯದೊಳಗೆ ಹೋದ ಕೂಡಲೇ ನೇರವಾಗಿ ಶಿವನ ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ಹಾಕಬಾರದು.
-ಮೊದಲು ನಂದೀಶ್ವರನಿಗೆ ಪ್ರದಕ್ಷಿಣೆ ಪ್ರಾರಂಭಿಸಿ.
-ನಂದೀಶ್ವರನ ಬಳಿ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು. ಈ ರೀತಿ 3 ಸಲ ಮಾಡಿದರೆ ಸಾಕು ಅದರಿಂದ ಸಾಕಷ್ಟು ಪ್ರತಿಫಲ ಸಿಗುತ್ತೆ ಎಂಬ ನಂಬಿಕೆ ಇದೆ.
-ಶಿವನ ಗರ್ಭಗುಡಿಯ ಸುತ್ತಲೂ ವೃತ್ತಾಕಾರವಾಗಿ ಪ್ರದಕ್ಷಿಣೆ ಮಾಡಬಾರದು. ಯಾಕೆಂದರೆ ಲಿಂಗವನ್ನು ಅಭಿಷೇಕ ಮಾಡಿದ ಜಲ ಹೋಗುವ ದಾರಿ ಬಳಿ ಪ್ರಮಥ ಗಣಗಳು ನೆಲೆಸಿರುತ್ತವೆ. ಅವನ್ನು ದಾಟಿ ಪ್ರದಕ್ಷಿಣೆ ಮಾಡಬಾರದು.

ದೇವಾಲಯಗಳು ಪ್ರಶಾಂತತೆಯ ಚಿಹ್ನೆಗಳು. ಅಲ್ಲಿಗೆ ಹೋದರೆ ಮನಸ್ಸಿಗೆ ನೆಮ್ಮದಿ ಸಿಗುವುದಷ್ಟೇ ಅಲ್ಲ, ಆ ಪರಿಸರಗಳಲ್ಲಿ ಇರುವ ಪಾಸಿಟಿವ್ ಎನರ್ಜಿ ನಮಗೆ ಸಿಗುತ್ತೆ. ಇದರಿಂದ ಹೊಸ ಉತ್ಸಾಹ ನಮ್ಮಲ್ಲಿ ಮೂಡುತ್ತೆ. ಆದರೆ ಯಾರು ಯಾವ ದೇವಾಲಯಕ್ಕೆ ಹೋದರೂ ದೇವರ ದರ್ಶನ ಮಾಡುವ ಮುನ್ನ ಕಡ್ಡಾಯವಾಗಿ ಪ್ರದಕ್ಷಿಣೆ ಮಾಡಬೇಕು ಅಂತಾ ನಮ್ಮ ಶಾಸ್ತ್ರಗಳು ಹೇಳುತ್ತವೆ. ಕೆಲವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೆಚ್ಚು ಪ್ರದಕ್ಷಿಣೆ ಮಾಡಿದರೆ, ಇನ್ನು ಕೆಲವರು 3 ಪ್ರದಕ್ಷಿಣೆ ಸಾಕೆಂದು ಹೇಳಿ ಆ ಬಳಿಕ ದೇವರ ದರ್ಶನಕ್ಕೆ ಹೋಗುತ್ತಾರೆ. ಆದರೆ ಮೇಲೆ ತಿಳಿಸಿದ ರೀತಿಯಲ್ಲಿ ಶಿವಾಲಯದಲ್ಲಿ ಪ್ರದಕ್ಷಿಣೆ ಮಾಡಿದರೆ ಅದು 10 ಸಾವಿರ ಪ್ರದಕ್ಷಿಣೆಗಳಿಗೆ ಸಮಾನ ಅಂತಾ ಲಿಂಗ ಪುರಾಣದಲ್ಲಿ ಉಲ್ಲೇಖವಿದೆ.

ಇದನ್ನೂ ಓದಿ: ಭಕ್ತರ ಎಲ್ಲಾ ಕೋರಿಕೆ ಈಡೇರಿಸುವ ಶಿವನಿಗೆ ಯಾವ ಅಭಿಷೇಕ ಮಾಡಿದರೆ ಏನು ಫಲ?