ಭಕ್ತರ ಎಲ್ಲಾ ಕೋರಿಕೆ ಈಡೇರಿಸುವ ಶಿವನಿಗೆ ಯಾವ ಅಭಿಷೇಕ ಮಾಡಿದರೆ ಏನು ಫಲ?
ಶಿವ ಅಭಿಷೇಕ ಪ್ರಿಯ. ಭಕ್ತಪ್ರಿಯ ಭೋಲೇನಾಥನಿಗೆ ಇಂಥಂದ್ದೇ ಅಭಿಷೇಕ ಮಾಡಬೇಕು ಎಂಬ ನಿಯಮಗಳಿಲ್ಲ. ಭಕ್ತಿ-ಭಾವದಿಂದ, ಶುದ್ಧ ಮನಸ್ಸಿನಿಂದ ಯಾವುದಾದ್ರೂ ವಸ್ತು ಬಳಸಿ ಅಭಿಷೇಕದಿಂದ ಮಾಡಿದ್ರೂ ಭಗವಂತ ನಮ್ಮ ಭಕ್ತಿಗೆ ಒಲಿಯುತ್ತಾನೆ.
ಸೃಷ್ಟಿಕರ್ತ ಮಹಾವಿಷ್ಣು ಅಲಂಕಾರಪ್ರಿಯ, ಲಯಕಾರಕ ಶಿವ ಅಭಿಷೇಕಪ್ರಿಯ. ಹೀಗಾಗಿಯೇ ಇಷ್ಟಾರ್ಥ ಸಿದ್ಧಿಗಾಗಿ ಶಿವನಿಗೆ ಅಭಿಷೇಕ ಮಾಡುವ ಪದ್ಧತಿ ಅನಾದಿಕಾಲದಿಂದಲೂ ಇದೆ. ಭಂ ಭಂ ಭೋಲೇನಾಥನಿಗೆ ಈ ವಸ್ತುಗಳಿಂದ ಅಭಿಷೇಕ ಮಾಡಿದರೆ ವಿಶೇಷ ಫಲಗಳನ್ನು ಪಡೆಯಬಹುದು. ಇಷ್ಟಕ್ಕೂ, ಶಿವನಿಗೆ ಯಾವ ಯಾವ ಅಭಿಷೇಕ ಮಾಡಿದ್ರೆ ಏನು ಫಲ? ಬನ್ನಿ ಆ ಬಗ್ಗೆ ಈಗ ಇಲ್ಲಿ ತಿಳಿಯಿರಿ..
ಯಾವ ಅಭಿಷೇಕದಿಂದ ಏನು ಫಲ? 1.ಪಂಚಗವ್ಯಗಳಾದ ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಗೋಮಯದ ಮಿಶ್ರಣದಿಂದ ಅಭಿಷೇಕ ಮಾಡಿದರೆ ಎಲ್ಲಾ ರೀತಿಯ ಪಾಪಗಳು ಪರಿಹಾರ. 2.ಬಾಳೆಹಣ್ಣು, ಬೆಲ್ಲ, ಸಕ್ಕರೆ, ಖರ್ಜೂರ, ಜೇನು ಹಾಗೂ ಒಣಹಣ್ಣುಗಳ ಅಭಿಷೇಕದಿಂದ ಸಂಪತ್ತು ಪ್ರಾಪ್ತಿ. 3.ತುಪ್ಪದ ಅಭಿಷೇಕದಿಂದ ಮೋಕ್ಷ ಪ್ರಾಪ್ತಿ. 4.ಹಾಲಿನ ಅಭಿಷೇಕದಿಂದ ದೀರ್ಘಾಯುಷ್ಯ. 5.ಜೇನುತುಪ್ಪದಿಂದ ಅಭಿಷೇಕ ಮಾಡಿದ್ರೆ ಉತ್ತಮ ಧ್ವನಿ, ಸಂಗೀತ ಸಿದ್ಧಿ. 6.ಅಕ್ಕಿ ಹಿಟ್ಟಿನಿಂದ ಗಂಗಾಧರನಿಗೆ ಅಭಿಷೇಕ ಮಾಡಿದ್ರೆ ಋಣ ವಿಮೋಚನೆ. 7.ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿದ್ರೆ ಆರೋಗ್ಯ ಭಾಗ್ಯ ಹಾಗೂ ಶತ್ರುನಾಶ. 8.ನಿಂಬೆಹಣ್ಣಿನ ಪಾನಕದಿಂದ ಅಭಿಷೇಕ ಮಾಡಿದ್ರೆ ಜೀವ ಭಯ ನಿವಾರಣೆ, ಆರೋಗ್ಯದಲ್ಲಿ ಚೇತರಿಕೆ. 9.ಎಳನೀರಿನಿಂದ ಅಭಿಷೇಕ ಮಾಡಿದ್ರೆ ಸಂತೃಪ್ತಿ. 10.ಪವಿತ್ರ ಜಲದಿಂದ ಅಭಿಷೇಕ ಮಾಡಿದ್ರೆ ನೆಮ್ಮದಿ. 11.ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿದರೆ ಅಪಮೃತ್ಯು ಭಯ ನಿವಾರಣೆ. 12.ಅರಿಶಿನದಿಂದ ಅಭಿಷೇಕ ಮಾಡಿದ್ರೆ ವಿವಾಹ ಭಾಗ್ಯ. 13.ಹಸುವಿನ ಹಾಲಿನಿಂದ ಅಭಿಷೇಕ ಮಾಡಿದ್ರೆ ನಾಗ ಭಯ ನಿವಾರಣೆ. 14.ಮೊಸರನ್ನದಿಂದ ಅಭಿಷೇಕ ಮಾಡಿದ್ರೆ ಅಲ್ಸರ್ನಂತಹ ರೋಗ ನಿವಾರಣೆ. 15.ತುಪ್ಪದಿಂದ ಅಭಿಷೇಕ ಮಾಡಿದ್ರೆ ಆರ್ಥಿಕ ಸಮಸ್ಯೆ ನಿವಾರಣೆ. 16.ಭಸ್ಮದಿಂದ ಅಭಿಷೇಕ ಮಾಡಿದ್ರೆ ಪಾಪ ಪರಿಹಾರ. 17.ಗಂಧದ ನೀರಿನಿಂದ ಅಭಿಷೇಕ ಮಾಡಿದ್ರೆ ಮಕ್ಕಳ ಏಳಿಗೆ.
ಶಿವ ಅಭಿಷೇಕ ಪ್ರಿಯ. ಭಕ್ತಪ್ರಿಯ ಭೋಲೇನಾಥನಿಗೆ ಇಂಥಂದ್ದೇ ಅಭಿಷೇಕ ಮಾಡಬೇಕು ಎಂಬ ನಿಯಮಗಳಿಲ್ಲ. ಭಕ್ತಿ-ಭಾವದಿಂದ, ಶುದ್ಧ ಮನಸ್ಸಿನಿಂದ ಯಾವುದಾದ್ರೂ ವಸ್ತು ಬಳಸಿ ಅಭಿಷೇಕದಿಂದ ಮಾಡಿದ್ರೂ ಭಗವಂತ ನಮ್ಮ ಭಕ್ತಿಗೆ ಒಲಿಯುತ್ತಾನೆ. ಏನೂ ಇಲ್ಲವಾದ್ರೆ ಶುದ್ಧ ಜಲದಿಂದ ಅಭಿಷೇಕ ಮಾಡಿದ್ರೂ ಸಾಕು ತನ್ನ ಭಕ್ತರ ಎಲ್ಲಾ ಕೋರಿಕೆಗಳನ್ನು ಈಡೇರಿಸ್ತಾನೆ ಅಂತಾ ಶಿವಪುರಾಣದಲ್ಲಿ ಉಲ್ಲೇಖವಿದೆ.
ಇದನ್ನೂ ಓದಿ: Maha Shivaratri 2021: ಶಿವನನ್ನು ಲಿಂಗರೂಪದಲ್ಲಿ ಯಾಕೆ ಆರಾಧಿಸುತ್ತಾರೆ ಗೊತ್ತೇ?; ಇಲ್ಲಿದೆ ಪುರಾಣ ಕಥೆ