ಕ್ಷಮೆ ಎನ್ನುವುದು ನಮ್ಮ ಜೀವನದಲ್ಲಿ ಎಂತಹ ಪಾತ್ರವಹಿಸುತ್ತದೆ? ಗೊತ್ತಾ..

| Updated By: ಸಾಧು ಶ್ರೀನಾಥ್​

Updated on: Sep 10, 2020 | 3:53 PM

ಕ್ಷಮೆ ಎನ್ನುವುದು ನಮ್ಮ ಜೀವನದಲ್ಲಿ ಎಂತಹ ಪಾತ್ರವಹಿಸುತ್ತದೆ? ಕ್ಷಮಿಸುವ ಗುಣ ಎಂತಹದ್ದು ಅನ್ನೋದಕ್ಕೆ ಹಿತೋಕ್ತಿಯ ಸಾಲಿನಲ್ಲಿ ಆ ಒಂದು ಮಾತಿದೆ. ಅದು ಯಾವುದು ಅಂದ್ರೆ.. ಕ್ಷಮೆ ತಪ್ಪು ಮಾಡಿದವರಿಗೆ ತಿದ್ದಿಕೊಳ್ಳಲು ನೀಡುವ ಒಂದು ಸುವರ್ಣಾವಕಾಶ, ಕ್ಷಮೆಗೆ ಬೆಲೆ ಕಟ್ಟಲಾಗುವುದಿಲ್ಲ. ಅನ್ನೋದಕ್ಕೆ ಒಂದು ಹಿತೋಕ್ತಿಯು ಉತ್ತರವನ್ನ ನೀಡುತ್ತದೆ, ಆಧ್ಯಾತ್ಮದಲ್ಲಿರೋ ಆ ಹಿತೋಕ್ತಿಯಾದ್ರೂ ಯಾವುದು ಅಂದ್ರೆ ಕ್ಷಮಿಸುವುದರಿಂದ ಗತವು ಬದಲಾಗದೇ ಇರಬಹುದು. ಆದರೆ ಭವಿಷ್ಯತ್ತು ಮಾತ್ರ ಬದಲಾಗುತ್ತದೆ. ಶ್ರೀರಾಮಚಂದ್ರ, ಕೊಟ್ಟ ಮಾತಿಗೆ ತಪ್ಪಿ ನಡೆಯಲಾರದವನು. ರಘುಕುಲ ತಿಲಕ, ದಶರಥ ರಾಮನಿಗೆ, […]

ಕ್ಷಮೆ ಎನ್ನುವುದು ನಮ್ಮ ಜೀವನದಲ್ಲಿ ಎಂತಹ ಪಾತ್ರವಹಿಸುತ್ತದೆ? ಗೊತ್ತಾ..
Follow us on

ಕ್ಷಮೆ ಎನ್ನುವುದು ನಮ್ಮ ಜೀವನದಲ್ಲಿ ಎಂತಹ ಪಾತ್ರವಹಿಸುತ್ತದೆ? ಕ್ಷಮಿಸುವ ಗುಣ ಎಂತಹದ್ದು ಅನ್ನೋದಕ್ಕೆ ಹಿತೋಕ್ತಿಯ ಸಾಲಿನಲ್ಲಿ ಆ ಒಂದು ಮಾತಿದೆ. ಅದು ಯಾವುದು ಅಂದ್ರೆ..

ಕ್ಷಮೆ ತಪ್ಪು ಮಾಡಿದವರಿಗೆ ತಿದ್ದಿಕೊಳ್ಳಲು ನೀಡುವ ಒಂದು ಸುವರ್ಣಾವಕಾಶ, ಕ್ಷಮೆಗೆ ಬೆಲೆ ಕಟ್ಟಲಾಗುವುದಿಲ್ಲ. ಅನ್ನೋದಕ್ಕೆ ಒಂದು ಹಿತೋಕ್ತಿಯು ಉತ್ತರವನ್ನ ನೀಡುತ್ತದೆ, ಆಧ್ಯಾತ್ಮದಲ್ಲಿರೋ ಆ ಹಿತೋಕ್ತಿಯಾದ್ರೂ ಯಾವುದು ಅಂದ್ರೆ ಕ್ಷಮಿಸುವುದರಿಂದ ಗತವು ಬದಲಾಗದೇ ಇರಬಹುದು. ಆದರೆ ಭವಿಷ್ಯತ್ತು ಮಾತ್ರ ಬದಲಾಗುತ್ತದೆ.

ಶ್ರೀರಾಮಚಂದ್ರ, ಕೊಟ್ಟ ಮಾತಿಗೆ ತಪ್ಪಿ ನಡೆಯಲಾರದವನು. ರಘುಕುಲ ತಿಲಕ, ದಶರಥ ರಾಮನಿಗೆ, ರಾಮನೇ ಸಾಟಿ. ಕೊಟ್ಟ ಮಾತಿಗೆ ತಪ್ಪಿ ನಡೆಲಾರದ ಜಾನಕಿರಾಮ, ತನ್ನ ಕ್ಷಮಾ ಗುಣಕ್ಕೂ ಪ್ರಸಿದ್ಧಿಯಾದವನು.

ರಘುಕುಲೋತ್ತಮ ಶ್ರೀರಾಮಚಂದ್ರನ ಕ್ಷಮಾಗುಣಕ್ಕೆ ಉತ್ತಮ ಉದಾಹರಣೆ.. ತನ್ನ ಚಿಕ್ಕಮ್ಮ ಕೈಕೆಯಿ ತನ್ನ ಪಟ್ಟಾಭಿಷೇಕವನ್ನು ತಪ್ಪಿಸಿ ತನ್ನನ್ನು, ತನ್ನ ಮಡದಿ, ಸಹೊದರರ ಜೊತೆ ಕಾಡು ಪಾಲಾಗುವಂತೆ, ಮಾಡಿದಳು. ಆದರೂ ಅವಳ ಮೇಲೆ ಒಮ್ಮೆಯೂ ರಾಮ ಬೇಸರಗೊಳ್ಳಲಿಲ್ಲ. ವನವಾಸವನ್ನು ಮುಗಿಸಿ ಅರಮನೆಗೆ ಹಿಂತಿರುಗಿದಾಗ, ಕಾಡುಪಾಲು ಮಾಡಿದ ಚಿಕ್ಕಮ್ಮನ ಬಗ್ಗೆ ಮನಸ್ಸಲ್ಲಿ ಯಾವುದೇ ಕೋಪವನ್ನ ಇಟ್ಟುಕೊಳ್ಳಲಿಲ್ಲ. ಕೈಕೇಯಿಯನ್ನು ಮನ್ನಿಸುವುದರ ಮೂಲಕ ತಾನೆಷ್ಟು ದೊಡ್ಡ ತಪ್ಪನ್ನು ಮಾಡಿದೆ ಎಂಬುದನ್ನ ಕ್ಷಮೆ ಎಂಬ ಅಸ್ತ್ರದಿಂದ ಚಿಕ್ಕಮ್ಮನಿಗೆ ತನ್ನ ತಪ್ಪಿನ ಅರಿವನ್ನ ಮಾಡಿಸಿದ.

ತಪ್ಪು ಮಾಡುವುದು ಸಹಜ, ಅದನ್ನು ಕ್ಷಮಿಸೋದು ಬಹಳ ದೊಡ್ಡ ಗುಣ. ಹಾಗಾಗಿ ಕ್ಷಮೆಗೆ ಬಹಳ ಮಹತ್ವವಿದೆ. ಕ್ಷಮಿಸುವುದರಿಂದ ನಾವು ದೊಡ್ಡವರಾಗುತ್ತೇವೆಯೇ ವಿನಃ ಚಿಕ್ಕವರಾಗುವುದಿಲ್ಲ. ಒಂದು ಕ್ಷಮೆಯಿಂದ ಒಬ್ಬರ ಜೀವನವೇ ಬದಲಾಗಬಹುದು, ಒಂದು ಕೆಟ್ಟ ಪರಿಸ್ಥಿತಿಯು ಸರಿಯಾಗಬಹುದು. ಹಾಗಾಗಿ ಒಂದು ಕ್ಷಮೆಯಿಂದ ನಡೆದು ಹೋದ ತಪ್ಪನ್ನು ಬದಲಾಯಿಸಲು ಬಾರದಿದ್ದರೂ ಮುಂದೆ ಆಗುಬಹುದಾದ ಕೆಲವು ಉತ್ತಮ ಕೆಲಸಗಳಿಗೆ ಆ ಒಂದು ಕ್ಷಮೆ ಕಾರಣ ಆಗಬಹುದು.

ಕ್ಷಮೆ ಎಂಬುದು ಒಂದು ಪ್ರಬಲ, ಪರಿಣಾಮಕಾರಿ ಆಯುಧ. ಹಿಂಸೆ, ಕ್ರೌರ್ಯ, ಶಿಕ್ಷೆಯಿಂದ ಬದಲಾಗದ ಹಲವು ಸಮಸ್ಯೆಗಳು, ವ್ಯಕ್ತಿಗಳನ್ನು ಒಂದು ಕ್ಷಮೆ ಬದಲಾಯಿಸಬಹುದು.