‘ನಾನು ಪ್ರತಿ ದಿನ.. ಮುಕ್ಕೋಟಿ ದೇವರು ನೆಲೆಸಿರುವ ಕಾಮಧೇನುವಿನ ಗೋಮೂತ್ರ ಕುಡಿತೀನಿ’

‘ನಾನು ಪ್ರತಿ ದಿನ.. ಮುಕ್ಕೋಟಿ ದೇವರು ನೆಲೆಸಿರುವ ಕಾಮಧೇನುವಿನ ಗೋಮೂತ್ರ ಕುಡಿತೀನಿ’

ಸರಳ, ಸಜ್ಜನ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತ ಸೇರಿದಂತೆ ವಿದೇಶದಲ್ಲೆಲ್ಲ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಕ್ಷಯ್ ಕುಮಾರ್ ಬೆಳಗಿನ ಜಾವ  4ರಿಂದ ರಾತ್ರಿ 9 ಗಂಟೆವರೆಗೂ ಕಾರ್ಯ ನಿರ್ವಹಿಸುವುದು, ಅವರ ಸರಳತೆ, ಅವರ ಯೋಗಾಭ್ಯಾಸ, ದೇಹ ದಂಡನೆ ಇದೆಲ್ಲ ಅವರ ಅಭಿಮಾನಿಗಳಿಗೆ ಗೊತ್ತಿರೋ ವಿಷಯ. ಈಗ ಅಕ್ಷಯ್, ತಮ್ಮ ಆರೋಗ್ಯದ ಹಿತಕ್ಕಾಗಿ ಪ್ರತಿ ನಿತ್ಯ ಗೋಮೂತ್ರ ಸೇವಿಸುತ್ತಾರೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಮತ್ತಷ್ಟು ಹೆಮ್ಮೆ ತಂದಿದೆ.

ಹೌದು ನಟ ಅಕ್ಷಯ್ ಕುಮಾರ್ ಕೆಲ ದಿನಗಳ ಹಿಂದೆ ಬಂಡೀಪುರದಲ್ಲಿ ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಕಾರ್ಯಕ್ರಮದ ಶೂಟಿಂಗ್ ಮಾಡಲಾಗಿತ್ತು. ಈ ಹಿಂದೆ ಇದೇ ಕಾರ್ಯಕ್ರಮದಲ್ಲಿ ತಲೈವಾ ರಜನೀಕಾಂತ್ ಭಾಗವಹಿಸಿದ್ದರು. ಅದು ಸಿಕ್ಕಪಟ್ಟೆ ಮೆಚ್ಚಿಗೆ ಪಡೆದಿತ್ತು.

ಅದೇ ರೀತಿ ಅಕ್ಷಯ್ ಕುಮಾರ್ ಬೇರ್ ಗ್ರಿಲ್ಸ್ ಜೊತೆ ಕಾಡು ಸುತ್ತಿದ್ದರು. ಆದರೆ ಈ ಕಾರ್ಯಕ್ರಮವಿನ್ನೂ ಪ್ರಸಾರವಾಗಿಲ್ಲ. ಪ್ರಸರಣ ಹಂತಕ್ಕೆ ಬಂದಿದೆ. ಹೀಗಾಗಿ ನಟ ಅಕ್ಷಯ್ ಕುಮಾರ್ ಹಾಗೂ ಬೇರ್ ಗ್ರಿಲ್ಸ್ ವಿಡಿಯೋ ಲೈವ್ ಚಾಟ್ ಮೂಲಕ ಶೂಟಿಂಗ್ ವೇಳೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರು ಅಲ್ಲಿ ಕುಡಿದ ಆನೆಯ ಮಲದಲ್ಲಿ ಮಾಡಿದ ಚಹಾ ಬಗ್ಗೆ ಕೂಡ ಪ್ರಸ್ತಾಪಿಸಿದ್ದಾರೆ. ಈ ವೇಳೆ ಅಕ್ಷಯ್ ಕುಮಾರ್ ನಾನು ಪ್ರತಿ ದಿನ ಗೋವಿನ ಗಂಜಲ ಕುಡಿಯುತ್ತೇನೆ ಎಂದು ಹೇಳಿದ್ರು.

ಮುಕ್ಕೋಟಿ ದೇವರುಗಳು ನೆಲೆಸಿರುವ ಕಾಮಧೇನುವಿನ ಗಂಜಲಕ್ಕೆ ಔಷಧೀಯ ಗುಣಗಳಿವೆ ಹಾಗೂ ಅದು ಶ್ರೇಷ್ಠವಾಗಿದೆ . ಈ ಬಗ್ಗೆ ಆಯುರ್ವೇದದಲ್ಲೂ ಉಲ್ಲೇಖಿಸಲಾಗಿದೆ. ಹೀಗಾಗಿ ಅಕ್ಷಯ್ ಕುಮಾರ್ ಕೂಡ ತಮ್ಮ 53ರ ವಯಸ್ಸಿನಲ್ಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದಾರಂತೆ.

Click on your DTH Provider to Add TV9 Kannada