ನನ್ನ ಜೊತೆ Friend ಆಗ್ತಿಯಾ? ಆನೆಯ ದೋಸ್ತಿ ವಿಡಿಯೋ ಆಯ್ತು ಫುಲ್​ Viral

ನನ್ನ ಜೊತೆ Friend ಆಗ್ತಿಯಾ? ಆನೆಯ ದೋಸ್ತಿ ವಿಡಿಯೋ ಆಯ್ತು ಫುಲ್​ Viral

ಅತ್ಯಂತ ಶಾಂತ ಹಾಗೂ ಮೃದು ಸ್ವಭಾವದ ಪ್ರಾಣಿಗಳಲ್ಲಿ ಆನೆ ಸಹ ಒಂದು. ತನ್ನ ಹಿಂಡಿನೊಂದಿಗೆ ಸೇರಿ ನೀರಿನಲ್ಲಿ ಆಡುವುದರಿಂದ ಹಿಡಿದು ತನ್ನ ಚಾಣಾಕ್ಷತೆಯನ್ನ ಬಳಸಿ ಹಣ್ಣು ಅಥವಾ ಕಬ್ಬು ಕದಿಯುವ ವಿಡಿಯೋಗಳು ಸಾಕಷ್ಟು ನೋಡಿದ್ದೇವೆ. ಆದರೆ, ಇಲ್ಲೊಂದು ಆನೆ ತನ್ನ ಹಿಂಡನ್ನು ಬಿಟ್ಟು ರಾಸುಗಳೊಂದಿಗೆ ದೋಸ್ತಿ ಮಾಡಿಕೊಳ್ಳಲು ಮುಂದಾದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

IFS ಅಧಿಕಾರಿ ಸುಶಾಂತ ನಂದ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಆನೆ ಮರಿಯೊಂದು ಪಕ್ಕದ ತೋಟದಲ್ಲಿ ಮೇಯುತ್ತಿದ್ದ ಹಸುಗಳೊಂದಿಗೆ ಆಟವಾಡಲು ಮುಂದಾಯಿತು. ತನ್ನ ಸೊಂಡಿಲನ್ನು ಬೇಲಿಯ ಆ ಬದಿಗೆ ಚಾಚಿ ಹಸುಗಳನ್ನು ಮುಟ್ಟಲು ಮುಂದಾದ ಅನೆ ಮರಿ, ಅಷ್ಟೇ ಅಲ್ಲದೆ ಹಸುಗಳ ಮುಂದೆ ಮಂಡಿ ಊರಿ ಆಟವಾಡಲು ಸಹ ಪ್ರಯತ್ನಿಸಿತು.

ಇವೆಲ್ಲವನ್ನು ಗಮನಿಸುವ ಹಸುಗಳು ಕೊಂಚ ಅಚ್ಚರಿಯಿಂದಲೇ ಆನೆಯತ್ತ ನೋಡುವುದನ್ನ ಬಿಟ್ಟರೆ ಅದರ ಬಳಿ ಬರುವ ಸಾಹಸವೇ ಮಾಡಲಿಲ್ಲ. ಆದರೆ, ಆನೆ ತನ್ನ ಪ್ರಯತ್ನ ಮಾತ್ರ ನಿಲ್ಲಿಸಲಿಲ್ಲ.

Click on your DTH Provider to Add TV9 Kannada