ಬಾಲಗಂಗಾಧರ ತಿಲಕ್, ಚಂದ್ರಶೇಖರ ಆಜಾದ್- ಸ್ವಾತಂತ್ರ್ಯ ಹೋರಾಟದ ಇಬ್ಬರು ಮಹಾನ್ ಮಾಣಿಕ್ಯಗಳ ಜನ್ಮ ದಿನ ಇಂದು

| Updated By: ಆಯೇಷಾ ಬಾನು

Updated on: Jul 23, 2021 | 2:59 PM

ಬಾಲಗಂಗಾಧರ ತಿಲಕರು ಸ್ವಾತಂತ್ರ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೆ ತೀರುತ್ತೇನೆ ಎಂದು ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದ ಯುವಕರಲ್ಲಿ ದೇಶಭಕ್ತಿ ಹುಟ್ಟಿಸಿದ ಮಹಾನ್ ನಾಯಕರು.

ಬಾಲಗಂಗಾಧರ  ತಿಲಕ್,  ಚಂದ್ರಶೇಖರ ಆಜಾದ್-  ಸ್ವಾತಂತ್ರ್ಯ ಹೋರಾಟದ ಇಬ್ಬರು ಮಹಾನ್ ಮಾಣಿಕ್ಯಗಳ ಜನ್ಮ ದಿನ ಇಂದು
ಬಾಲಗಂಗಾಧರ ತಿಲಕ್, ಚಂದ್ರಶೇಖರ ಆಜಾದ್
Follow us on

ಭಾರತೀಯ “ಸ್ವಾತಂತ್ರ್ಯ ಚಳುವಳಿಯ ನಾಯಕ” ಹಾಗೂ ಪ್ರಬಲ ಹಿಂದೂರಾಷ್ಟವಾದಿ ಎಂದೆ ಗುರುತಿಸಿಕೊಂಡ ಹಲವು ನಾಯಕರಿಗೆ ಗುರುಮಾರ್ಗದರ್ಶನ ನೀಡಿದ ಲೋಕಮಾನ್ಯ ಶ್ರೀ ಬಾಲಗಂಗಾಧರ ತಿಲಕ ಹಾಗೂ “ಮೈ ಆಜಾದ್ ಹೂ ಆಜಾದ್ ಹೀ ರಹೂಂಗಾ” ಎಂದು ಗುಡುಗಿ ಬ್ರಿಟಿಷರ ಎದೆಯಲ್ಲಿ ಬರಿ ಹೆಜ್ಜೆ ಸಪ್ಪಳದಿಂದಲೇ ನಡುಕ ಹುಟ್ಟಿಸುತ್ತಿದ್ದ ಕ್ರಾಂತಿಕಾರಿ ಚಳುವಳಿಯ ಹರಿಕಾರ ಚಂದ್ರಶೇಖರ ಆಜಾದ್ ಹುಟ್ಟಿದ ದಿನ ಇಂದು.

ಬಾಲಗಂಗಾಧರ ತಿಲಕರು ಸ್ವಾತಂತ್ರ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೆ ತೀರುತ್ತೇನೆ ಎಂದು ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದ ಯುವಕರಲ್ಲಿ ದೇಶಭಕ್ತಿ ಹುಟ್ಟಿಸಿದ ಮಹಾನ್ ನಾಯಕರು. ಇವರು ಹುಟ್ಟಿದ್ದು ಜುಲೈ 23, 1856 ಮಹಾರಾಷ್ಟ್ರದ ರತ್ನಗಿರಿಯಲ್ಲಿ. ಆಂಗ್ಲಶಿಕ್ಷಣ ವಿರೋಧಿಸುತ್ತ ಸಾಮಾಜಿಕ ಪಿಡುಕುಗಳ ಬಗ್ಗೆ ಜಾಗೃತಿ ಮೂಡಿಸುತ್ತ ಸಾರ್ವಜನಿಕ ಗಜಾನೋತ್ಸವ ಆರಂಭಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಯುವಕರನ್ನು ಸೆಳೆದ ಅಪ್ರತಿಮ ನಾಯಕ.

ಇವರು ಕೇಸರಿ ಎಂಬ ಮರಾಠಿ ಪತ್ರಿಕೆಯ ಮೂಲಕ ಅಭಿಪ್ರಾಯ, ಸ್ವಾತಂತ್ರವನ್ನು, ಅದರಲ್ಲೂ ಮುಖ್ಯವಾಗಿ 1905ರ ಬಂಗಾಳದ ವಿಭಜನೆಯ ವಿರೋಧವನ್ನು, ಸ್ವಾತಂತ್ರ್ಯ ಕಳೆದಿದ್ದ ಭಾರತೀಯ ನಾಗರಿಕರನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷರನ್ನು ತೀವ್ರವಾಗಿ ಟೀಕಿಸುತ್ತಿದ್ದರು. ಹಾಗೂ ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ನೀಡಬೇಕೆಂದು ಪ್ರತಿಪಾದಿಸಿದ್ದರು.

1890ರ ದಶಕದಲ್ಲಿ ತಿಲಕ್ ಕಾಂಗ್ರೆಸ್ ಸೇರಿದರಾದರೂ, ಬಹುಬೇಗ ಸ್ವಾತಂತ್ರ ಹೋರಾಟದಲ್ಲಿ ಅದರ ಸೌಮ್ಯವಾದಿ ಧೋರಣೆಯ ವಿರೋಧಕರಾದರು. ಗೋಪಾಲ ಕೃಷ್ಣ ಗೋಖಲೆಯವರ ಸೌಮ್ಯವಾದಿ ನೀತಿಯ ಕಟು ಟೀಕಾಕಾರರಾದರು. ಇದರಲ್ಲಿ ಇವರಿಗೆ ಬಂಗಾಳದ ಬಿಜಿನ್ ಚಂದ್ರ ಪಾಲ್ ಹಾಗೂ ಪಂಚಾಬಿನ ಲಾಲಾ ಲಜಪತ್ ರಾಯ್ರ ಬೆಂಬಲವಿತ್ತು.

1906ರಲ್ಲಿ ರಾಷ್ಟ್ರದ್ರೋಹದ ಆರೋಪದ ಮೇಲೆ ತಿಲಕರನ್ನು ಬಂಧಿಸಲಾಗಿತ್ತು. ಬಳಿಕ ಯುವ ವಕೀಲ ಮಹಮದ್ ಅಲಿ ಜಿನ್ನಾರನ್ನು ತಮ್ಮ ಪರವಾಗಿ ವಕಾಲತ್ತು ವಹಿಸುವಂತೆ ಕೇಳಿಕೊಂಡಿದ್ದರು. ಆದರೆ ಬ್ರಿಟಿಷ್ ನ್ಯಾಯಾಧೀಶರಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು 1908ರಿಂದ 1914ರವರೆಗೆ ಬರ್ಮಾ ದೇಶದ ಮಂಡಾಲೆಯಲ್ಲಿ ಸೆರೆವಾಸ ಅನುಭವಿಸಿದರು. ಬಿಡುಗಡೆಯಾದ ಬಳಿಕ ಅಖಿಲ ಭಾರತ ಹೋಂ ರೂಲ್ಸ್ ಲೀಗನ್ನು ಸ್ಥಾಪಿಸುವಲ್ಲಿ ಆನಿ ಬೆಸೆಂಟ್ ಮತ್ತು ಮಹಮದ್ ಅಲಿ ಜಿನ್ನಾರಿಗೆ ಸಹಕಾರ ನೀಡಿದರು.

ಚಂದ್ರಶೇಖರ ಆಜಾದ್…ಕ್ರಾಂತಿಯ ಕಿಡಿ ಭಗತ್ ಸಿಂಗ್, ಸುಖದೇವ್, ರಾಜಗುರು ಮುಂತಾದವರ ಮಾರ್ಗದರ್ಶಕ ಗುರು ಚಂದ್ರಶೇಖರ ಆಜಾದ್‌ರವರು 23 ಜುಲೈ 1906ರಂದು ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿರುವ ಭವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು.

1919ರಲ್ಲಿ ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡದ ವಿರುದ್ಧ ಪ್ರತೀಕಾರಕ್ಕೆ ಹಾತೊರೆಯುತ್ತಿದ್ದ ಅಜಾದ್ ಅವರು ಸರ್ಕಾರಿ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿ ತಮ್ಮ ಹೆಸರು ಆಜಾದ್ ಎಂದು ನ್ಯಾಯಾಧೀಶರ ಮುಂದೆ ಘೋಷಿಸಿದ್ದರು.

ಝಾನ್ಸಿಯನ್ನೆ ತಮ್ಮ ಕೇಂದ್ರ ಸ್ಥಾನವಾಗಿಸಿಕೊಂಡ ಕ್ರಾಂತಿಕಾರಕ ಚಟುವಟಿಕೆಗಳಿಗೆ ತರಬೇತಿ ನೀಡಿದರ ಜೀವನದ ಅರ್ಧಪಾಲು ಮಾರುವೇಷದಲ್ಲೆ ಬದುಕಿ ಹಲವು ಕ್ರಾಂತಿಕಾರಿಗಳ ಹುಟ್ಟು ಹಾಕಿದವರು. ಆಗಿನ ಕಾಲದಲ್ಲಿ ‘ಶಾರ್ಪ್ ಶೂಟರ್’ ಎಂದೆ ಖ್ಯಾತಿ ಹೊಂದಿದ ಆಜಾದರು ಬ್ರಿಟಿಷರಿಗೆ ಎಂದೂ ತಲೆ ಭಾಗಲಿಲ್ಲ. ನೂರು ಚಾಟಿ ಏಟು ಕೊಟ್ಟರು ಭಾರತ ಮಾತಾಕಿ ಜೈ ಎಂದೆ ಎದೆಯುಬ್ಬಿಸಿ ನಿಂತವರು. ಆದರೆ ಅಲಹಾಬಾದ್ ಆಲ್ಫ್ರೆಡ್ ಪಾರ್ಕ್ನಲ್ಲಿ ಕೆಲವು ವಿಶ್ವಾಸದ್ರೋಹಿಗಳ ಕಾರಣ ಬ್ರಿಟಿಷರಿಂದ ಸುತ್ತುವರೆದು ದಾಳಿಯಾದಾಗ ಕೊನೆತನಕ ಹೊರಾಡಿ ಕೊನೆಯ ಗುಂಡಿನಿಂದ ತಾವೆ ಹೊಡೆದುಕೊಂಡು ಹುತಾತ್ಮರಾಗಿ ಸಾವಿನಲ್ಲೂ ಆಜಾದರಾದರು. ಇವರ ಸಾವಿನ ಎರಡು ಗಂಟೆಯ ನಂತರವು ಯಾವ ಪೋಲಿಸರು, ಅಧಿಕಾರಿಯೂ ಅವರ ಮೃತ ದೇಶದ ಬಳಿ ಹೋಗಲು ಭಯಪಟ್ಟಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ಸಿಕ್ಕ ನಂತರವೂ ಹೋರಾಟದ ಹಾದಿಯಲ್ಲೇ ನಡೆದು ಬಂದ ಶತಾಯುಷಿ ಎಚ್​.ಎಸ್​.ದೊರೆಸ್ವಾಮಿ ಅವರಿಗೆ ಭಾವಪೂರ್ಣ ವಿದಾಯ

Published On - 2:56 pm, Fri, 23 July 21