ಜಸ್ಟ್.. ಭೂಮಿಯ ಮೇಲೆ 250 ಮೈಲು ಎತ್ತರದಿಂದ ಕಂಡುಬಂದ ಸಮ್ಮೋಹಕ ದೃಶ್ಯ ಇದು!

| Updated By: ಸಾಧು ಶ್ರೀನಾಥ್​

Updated on: Dec 07, 2020 | 6:02 PM

ಚೆಂದದ ಚಂದ್ರನೇ ಸಮ್ಮೋಹಕ.. ಅಸಂಖ್ಯ ಜನರು ತಮ್ಮ ಭಾವನೆಗೆ ತಕ್ಕಂತೆ ಚಂದ್ರನನ್ನು ವರ್ಣಿಸುತ್ತಾರೆ. ಭೂಮಿ ಮೇಲೆ ನಿಂತು ಕ್ಯಾಮರಾದಲ್ಲಿ ಚಂದಮನ ಫೋಟೋ ಸೆರೆ ಹಿಡಿದು ಆನಂದಿಸುವವರು ಅದೆಷ್ಟೋ ಮಂದಿ.. ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station) ಪೂರ್ಣ ಚಂದ್ರನ ನಾಲ್ಕು ಅದ್ಭುತ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದ್ದು, ನೆಟ್ಟಿಗರ ಮನಗೆದ್ದಿದೆ. ಈ ಪೂರ್ಣಚಂದ್ರನ ಅದ್ಭುತ ದೃಶ್ಯ ಕಂಡುಬಂದಿದ್ದು ಭೂಮಿಯಿಂದ 250 ಮೈಲು  ಎತ್ತರದಲ್ಲಿ ಎಂದು ಬಾಹ್ಯಾಕಾಶ ನಿಲ್ದಾಣ ಕ್ಯಾಪ್ಷನ್ ಬರೆದಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ […]

ಜಸ್ಟ್.. ಭೂಮಿಯ ಮೇಲೆ 250 ಮೈಲು ಎತ್ತರದಿಂದ  ಕಂಡುಬಂದ ಸಮ್ಮೋಹಕ ದೃಶ್ಯ ಇದು!
ಬಾಹ್ಯಾಕಾಶ ನಿಲ್ದಾಣ ಸೆರೆ ಹಿಡಿದ ಪೂರ್ಣಚಂದ್ರನ ಫೋಟೋ
Follow us on

ಚೆಂದದ ಚಂದ್ರನೇ ಸಮ್ಮೋಹಕ.. ಅಸಂಖ್ಯ ಜನರು ತಮ್ಮ ಭಾವನೆಗೆ ತಕ್ಕಂತೆ ಚಂದ್ರನನ್ನು ವರ್ಣಿಸುತ್ತಾರೆ. ಭೂಮಿ ಮೇಲೆ ನಿಂತು ಕ್ಯಾಮರಾದಲ್ಲಿ ಚಂದಮನ ಫೋಟೋ ಸೆರೆ ಹಿಡಿದು ಆನಂದಿಸುವವರು ಅದೆಷ್ಟೋ ಮಂದಿ..

ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station) ಪೂರ್ಣ ಚಂದ್ರನ ನಾಲ್ಕು ಅದ್ಭುತ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದ್ದು, ನೆಟ್ಟಿಗರ ಮನಗೆದ್ದಿದೆ. ಈ ಪೂರ್ಣಚಂದ್ರನ ಅದ್ಭುತ ದೃಶ್ಯ ಕಂಡುಬಂದಿದ್ದು ಭೂಮಿಯಿಂದ 250 ಮೈಲು  ಎತ್ತರದಲ್ಲಿ ಎಂದು ಬಾಹ್ಯಾಕಾಶ ನಿಲ್ದಾಣ ಕ್ಯಾಪ್ಷನ್ ಬರೆದಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎಂಬುದು ಕೆಳಹಂತದ ಭೂ ಕಕ್ಷಾ ಪರಿಧಿಯಲ್ಲಿ ಭೂಮಿಯನ್ನು ಸುತ್ತುವ ಒಂದು ಮಾನವ ನಿರ್ಮಿತ ಮಾಡ್ಯುಲರ್ ಬಾಹ್ಯಾಕಾಶ. ಈ International Space Station ಸೆರೆ ಹಿಡಿದ ಚಂದ್ರನ ಚಿತ್ರವನ್ನು ನೋಡಿ ನೆಟ್ಟಿಗರು ಫುಲ್​ ಖುಷಿಯಾಗಿದ್ದಾರೆ. 60,000ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಅಲ್ಲಿಗೆ ಹೋಗಿ ಚಂದ್ರನನ್ನು ಹಿಡಿಯಬಹುದು ಎನ್ನಿಸುತ್ತದೆ.. ಅದ್ಭುತ ಫೋಟೋ ಎಂಬಂಥ ಕಾಮೆಂಟ್​ಗಳನ್ನು ಚಂದ್ರನ ಪ್ರಿಯರು ಬರೆದಿದ್ದಾರೆ.

 

 

Published On - 5:45 pm, Mon, 7 December 20