AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿಯ ನನ್ನ ಕರವಾ ಚೌತ್ ಸುದೀರ್ಘವಾಗಿತ್ತು: ಪ್ರೀಟಿ ಜಿಂಟಾ | It was the longest Karwa Chouth for me: Preity Zinta

ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಾಂಚೈಸಿಯ ಮಾಲೀಕರಲ್ಲೊಬರಾಗಿರುವ ಸಿನಿಮಾ ತಾರೆ ಮತ್ತು ಸೌಂದರ್ಯದ ಖನಿ ಪ್ರೀಟಿ ಜಿಂಟಾ ಅವರಿಗೆ ಇಂಡಿಯನ್ ಪ್ರಿಮೀಯರ್ ಲೀಗಿನ 13 ನೇ ಆವೃತ್ತಿ ಮಿಶ್ರ ಭಾವನೆಗಳನ್ನು ಒದಗಿಸಿದೆ. ಈ ಬಾರಿ ಅಕೆಯ ಟೀಮು ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಳಿಸಲಿಲ್ಲ. ಕಳೆದ ಆರು ವರ್ಷಗಳಿಂದ ಅದು ಲೀಗ್ ಹಂತದಲ್ಲೇ ನಿರ್ಗಮಿಸುತ್ತಿರುವುದು ಬೇರೆ ವಿಷಯ. ಕೊನೆಯ ಬಾರಿ ಪ್ರೀಟಿಯ ಟೀಮು ಪ್ಲೇ ಆಫ್​ನಲ್ಲಿ ಆಡಿದ್ದು 2014ರಲ್ಲಿ, ಆ ಸೀಸನ್​ನಲ್ಲಿ ಅದು ಫೈನಲ್ ಕೂಡ ಪ್ರವೇಶಿಸಿತಾದರೂ ಎರಡನೇ […]

ಈ ಬಾರಿಯ ನನ್ನ ಕರವಾ ಚೌತ್ ಸುದೀರ್ಘವಾಗಿತ್ತು: ಪ್ರೀಟಿ ಜಿಂಟಾ | It was the longest Karwa Chouth for me: Preity Zinta
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 06, 2020 | 6:59 PM

ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಾಂಚೈಸಿಯ ಮಾಲೀಕರಲ್ಲೊಬರಾಗಿರುವ ಸಿನಿಮಾ ತಾರೆ ಮತ್ತು ಸೌಂದರ್ಯದ ಖನಿ ಪ್ರೀಟಿ ಜಿಂಟಾ ಅವರಿಗೆ ಇಂಡಿಯನ್ ಪ್ರಿಮೀಯರ್ ಲೀಗಿನ 13 ನೇ ಆವೃತ್ತಿ ಮಿಶ್ರ ಭಾವನೆಗಳನ್ನು ಒದಗಿಸಿದೆ. ಈ ಬಾರಿ ಅಕೆಯ ಟೀಮು ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಳಿಸಲಿಲ್ಲ. ಕಳೆದ ಆರು ವರ್ಷಗಳಿಂದ ಅದು ಲೀಗ್ ಹಂತದಲ್ಲೇ ನಿರ್ಗಮಿಸುತ್ತಿರುವುದು ಬೇರೆ ವಿಷಯ. ಕೊನೆಯ ಬಾರಿ ಪ್ರೀಟಿಯ ಟೀಮು ಪ್ಲೇ ಆಫ್​ನಲ್ಲಿ ಆಡಿದ್ದು 2014ರಲ್ಲಿ, ಆ ಸೀಸನ್​ನಲ್ಲಿ ಅದು ಫೈನಲ್ ಕೂಡ ಪ್ರವೇಶಿಸಿತಾದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅದಕ್ಕಿಂತ ಮೊದಲು ಒಮ್ಮೆ, 2008ರ ಉದ್ಘಾಟನಾ ಆವೃತ್ತಿಯಲ್ಲಿ ಅದು ಸೆಮಿಫೈನಲ್ ಹಂತವನ್ನು ತಲುಪಿತ್ತು.

ಓಕೆ, ಪ್ರೀಟಿಯ ವಿಷಯಕ್ಕೆ ಬರುವ, ಈಕೆ 2016ರಲ್ಲಿ ಅಮೆರಿಕಾದ ಉದ್ಯಮಿ ಜೀನೆ ಗುಡೆನೌ ಅವರನ್ನು ಮದುವೆಯಾಗಿದ್ದು ಎಲ್ಲ ಭಾರತೀಯರಿಗೆ ಗೊತ್ತು, ಅಕೆಯನ್ನು ಆರಾಧಿಸುತ್ತಿದ್ದವರಿಗೆ ಮತ್ತೂ ಚೆನ್ನಾಗಿ ನೆನಪಿದೆ! ಪಂಜಾಬಿನ ಹುಡುಗಿ ಅಮೆರಿಕನ್ ಪ್ರಜೆಯನ್ನು ಮದುವೆಯಾಗಿದ್ದರೂ ಭಾರತದ ಸಂಪ್ರದಾಯಗಳನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಉತ್ತರ ಭಾರತದಲ್ಲಿ ಕರವಾ ಚೌತ್ ಒಂದು ಪ್ರಮುಖ ಹಬ್ಬ. ಕಾರ್ತೀಕ ಮಾಸದಲ್ಲಿ ಹಿಂದೂ ಸಮುದಾಯದ ಮಹಿಳೆಯರು ಬಹಳ ಶ್ರದ್ಧೆ ಮತ್ತು ಭಕ್ತಿಭಾವದಿಂದ ಪತಿಯ ದೀರ್ಘಾಯುಷ್ಯಕ್ಕಾಗಿ, ಆರೋಗ್ಯಕ್ಕಾಗಿ ಉಪವಾಸ ವ್ರತ ಆಚರಿಸುವ ಸಂದರ್ಭವಿದು.

ಈ ವರ್ಷದ ಕರವಾ ಚೌತ್ ಮೂರು ನಾನು ಮೂರು ಕಡೆ ಆಚರಿಸಿದೆ ಅಂತ ಪ್ರೀಟಿ ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿ ಐಪಿಎಲ್ ಸೀಸನ್ ನಡೆಯುವಾಗ ಟೀಮಿನೊಂದಿಗೆ ಇರುವ ಪ್ರೀಟಿ ಹಬ್ಬದ ದಿನವೂ ದುಬೈನಲ್ಲಿದ್ದರು. ಆದರೆ, ಅವತ್ತೇ ಲಾಸ್ ಏಂಜೆಲಿಸ್ ವಿಮಾನ ಹತ್ತಿದ ಅವರು ಹಬ್ಬ ಮುಗಿಯುವುದರೊಳಗೆ ತಮ್ಮ ಪತಿಯನ್ನು ಸೇರಿಕೊಂಡೆನೆಂದು ಬರೆದುಕೊಂಡಿದ್ದಾರೆ.

ನನ್ನ ಈ ಬಾರಿಯ ಕರವಾ ಚೌತ್ ಸುದೀರ್ಘವಾಗಿತ್ತು, ಅದು ದುಬೈನಿಂದ ಅರಂಭಗೊಂಡು, ಮೋಡಗಳ ಮಧ್ಯೆ ಹಾದು ಅಂತಿಮವಾಗಿ ಲಾಸ್ ಏಂಜಲಿಸ್​ನಲ್ಲಿ ಲ್ಯಾಂಡ್ ಆಗುವುದರೊಂದಿಗೆ ಸಂಪನ್ನಗೊಂಡಿತು, ಎಲ್ಲರಿಗೂ ಕರವಾ ಚೌತ್ ಹಬ್ಬದ ಶುಭಾಶಯಗಳು’ ಅಂತ ಪ್ರೀಟಿ ಹೇಳಿಕೊಂಡಿದ್ದಾರೆ. 

ತಮ್ಮ ಎರಡನೇ ಸಂದೇಶದಲ್ಲಿ ಅವರು, ‘ನಾನು ಪಟ್ಟ ಶ್ರಮ ಸಾರ್ಥಕವಾಯಿತು. ಯಾಕೆಂದರೆ ಹಬ್ಬ ಮುಗಿಯವದರೊಳಗೆ ನನ್ನ ಪತಿ ಪರಮೇಶ್ವರ್ ಅವರನ್ನು ಸೇರಿಕೊಂಡೆ. ಐ ಲವ್ ಮೈ ಲವ್,’ ಎಂದು ಬರೆದುಕೊಂಡಿದ್ದಾರೆ.

ದುಬೈಯಲ್ಲಿರುವಾಗಲೂ ಅವರು ತಮ್ಮ ಪತಿಗೆ ‘ಮಿಸ್ ಯೂ,’ ‘ನಮ್ಮ ದಿಢೀರ್ ಪ್ರವಾಸಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ,’ ‘ಹೊರಗಡೆ ಸುತ್ತುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ,’ ‘ನನ್ನ ಪತಿಯನ್ನು ಮಿಸ್ ಮಾಡಿಕೊಳ್ಳತಿದ್ದೇನೆ,’ ಅಂತ ಮೆಸೇಜುಗಳನ್ನು ಇನ್ಸ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುತ್ತಿದ್ದರು.

ಪ್ರತಿಬಾರಿ ದುಬೈಯಿಂದಲಾಸ್ ಏಂಜಲೀಸ್ ಪ್ರಯಾಣಿಸುವಾಗ ಅವರು ಕೊವಿಡ್-19 ಸಂಬಂಧಿತ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು. ಅಂಥ ಒಂದು ಟ್ರಿಪ್​ನಲ್ಲಿ ಅವರು ಅಮೆರಿಕ ತಲುಪಿದ ಮೇಲೆ, ‘ಬಯೊ ಬಬಲ್​ನಿಂದ ಆಚೆ ಬಂದು ಲವ್ ಬಬಲ್ ಸೇರಿಕೊಂಡಿದ್ದೇನೆ, ಅಲ್ಪಾವಧಿಗೋಸ್ಕರ ಮನೆಗೆ ಬಂದಿದ್ದರೂ ಬಹಳ ಸಂತೋಷವಾಗುತ್ತಿದೆ,’ ಅಂತ ಬರೆದುಕೊಂಡಿದ್ದಾರೆ.

ಗುಡೆನೌ ಅವರನ್ನು ಮದುವೆಯಾದ ನಂತರ ಅಂದರೆ ಕಳೆದ 4 ವರ್ಷಗಳ ಅವಧಿಯಲ್ಲಿ ಪ್ರೀಟಿ ಕೇವಲ, ‘ಭೈಯಾಜಿ ಸೂಪರ್​ಹಿಟ್’ ಶೀರ್ಷಿಕೆಯ ಒಂದು ಸಿನಿಮಾದಲ್ಲಿ ಮಾತ್ರ ನಟಿಸಿದ್ದಾರೆ.

ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ